ಈ ಬಾತುಕೋಳಿಯ ಹಿಂದಿನ ನೋವಿನ ಕಥೆ ಕೇಳಿದ್ದೀರಾ..? 3 ತಿಂಗಳ ನಂತರ ‘ಹೀಗೆ’ ತೆಗೆಯಲಾಯಿತು ಬಾಣ!

ಕಳೆದ ಕೆಲವು ದಿನಗಳ ಹಿಂದೆ ಜನರಿಗೊಂದು ಬಾತುಕೋಳಿ ಸಿಕ್ಕಿದೆ, ಅದರ ತಲೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಒಂದು ಬಾಣ ಚುಚ್ಚಿತ್ತು. ಆದರೆ ದೇವರ ದಯೆಯಿಂದ ಅದಕ್ಕೆ ಏನು ಆಗದೆ ಅದು ಜೀವಂತ ವಾಗಿತ್ತು. ಮೂರು ಜನರು ಅದಕ್ಕೆ ಹಿಡಿದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಆಪರೇಷನ್ ಮಾಡಿ ಅದರ ಬಾಣವನ್ನು ಹೊರಗಡೆ ತಗೆದರು. ರಿಪೋರ್ಟ್ ಅನುಸಾರ, ಬಾತುಕೋಳಿ ಮೂರು ತಿಂಗಳಿಂದ ತಲೆಯಲ್ಲಿ ನಟ್ಟ ಬಾಣದೊಂದಿಗೆ ಜೀವಿಸುತ್ತಿತ್ತು. ಈ ಘಟನೆ ರಿಪಬ್ಲಿಕ ದ ಪಿಲಸೆನ್ ಪಟ್ಟಣದಿದೆ. ಅಲ್ಲಿಯ Radbuza ನದಿಯಲ್ಲಿ ಬಾತುಕೋಳಿಯ ತಲೆಯಲ್ಲಿ ಬಾಣ ನಟ್ಟಿತ್ತು, ಮೂರು ತಿಂಗಳ ನಂತರ ಅದೇ ಅವಸ್ಥೆಯಲ್ಲಿ ಇತ್ತು. ಕ್ರಾಸ್’ಬೊ( ಒಂದು ಪ್ರಕಾರದ ಧನುಷ್ಯ) ದಿಂದ ಅದರ ತಲೆಯ ಮೇಲೆ ದಾಳಿ ಮಾಡಲಾಗಿತ್ತು ಎಂದು ಹೇಳಲಾಗಿದೆ.

‘ಎನಿಮಲ್ ರೇಸ್ಕ್ಯೂ ಸೆಂಟರ್’ ನ ಹೆಡ್ karel Makon ಅವರು ಹೇಳಿಕೆಯ ಪ್ರಕಾರ, ‘ನಾವು ಮೊದಲ ಬಾರಿಗೆ ಬಾತುಕೋಳಿಯನ್ನು ಏಪ್ರಿಲ್ ತಿಂಗಳಲ್ಲಿ ಹಿಡಿಯುವ ಪ್ರಯತ್ನ ಮಾಡಿದ್ದೇವೆ. ಆದರೆ ಅದು ಅಲ್ಲಿಂದ ಓಡಿ ಹಾರಿ ಹೋಯಿತು. ಅದು ನಮಗೆ ಪರಿಚಯವಾಗಿ ಬಿಟ್ಟಿತು’. ಈ ವಾರದಲ್ಲಿ ಅದಕ್ಕೆ ಹಿಡಿಯಲು ಯಶಸ್ಸು ದೊರಕಿದೆ. ಅದರ ಕುತ್ತಿಗೆಯ ಮೂಲಕ ಒಂದು ಬಾಣ ಅದರ ತಲೆಯನ್ನು ನುಗ್ಗಿತ್ತು. ಆ ಬಾಣದ ತುದಿ ಸ್ಟೀಲ್ ದಾಗಿತ್ತು, ಅದಕ್ಕೆ ಒಂದು ಫಿಶಿಂಗ ಲೈನ್ ಸಹ ಜೋಡಿಸಲಾಗಿತ್ತು.

ಈ ಪ್ರಕಾರವಾಗಿ ಬಾತುಕೋಳಿಯನ್ನು ಹಿಡಿಯಲಾಯಿತು.
Karel ಅವರ ಹೇಳಿಕೆಯ ಪ್ರಕಾರ, ‘ ಈ ಬಾತುಕೋಳಿಯ ರೆಕ್ಕೆಗಳು ಉದುರುತ್ತಿರುವದು ನಮಗೆ ಗೊತ್ತಾಯಿತು. ಅದು ಹೊಸ ರೆಕ್ಕೆಗಳು ಬರುವ ವರೆಗೆ ಹಾರುವದಿಲ್ಲ ಎಂದು ತಿಳಿದ ಮೇಲೆ ನಾವು ಆ ಬಾತುಕೋಳಿಯನ್ನು ಹಿಡಿದೆವು. ಅವರು ಮುಂದೆ ಹೇಳುತ್ತಾರೆ, ‘ಈ ಬಾರಿ ನಾನು ಒಂದು ದೊಡ್ಡ ಪೋಲ್ ನ ಮೇಲೆ ಒಂದು ಲ್ಯಾಂಡಿಂಗ್ ನೆಟ್ ದೊಂದಿದೆ ನದಿಯ ಬದಿಯಲ್ಲಿ ನಿಂತಿದ್ದೆ. ಅಲ್ಲದೆ ನನ್ನ ಎರೆಡು ಸ್ನೇಹಿತರು ಆ ಬದಿಗೆ ಕುಳಿತುಕೊಂಡು ಅದರ ಧ್ಯಾನ ವಿಚಲಿತಗೊಳಿಸುತ್ತಿದ್ದರು”.

ಆರೋಪಿಯನ್ನು ಪೊಲೀಸರು ಶೋಧನೆ ಮಾಡುತ್ತಿದ್ದಾರೆ.
ಬಾತುಕೋಳಿಯನ್ನು ಹಿಡಿದ ನಂತರ ಅದಕ್ಕೆ ಸ್ಥಾನಿಕ ಪಶು ಚಿಕಿತ್ಸಾಲಯಕ್ಕೆ ಸೇರಿಸಲಾಯಿತು, ಅಲ್ಲಿ ಅದರ ಎಕ್ಸ್ರೇ ತಗೆಯಲಾಯಿತು ಮತ್ತು ತುಂಬಾ ಕಾಳಜಿಪುರ್ವಕವಾಗಿ ಅದರ ತಲೆಯಿಂದ ಬಾಣವನ್ನು ತಗೆಯಲಾಗಿದೆ. ಚೇತರಿಸಿಕೊಂಡ ನಂತರ, ಬಾತುಕೋಳಿಯನ್ನು ಮತ್ತೆ ನೀರಿಗೆ ಬಿಡಲಾಯಿತು. Makon ಹೇಳುತ್ತಾರೆ, ‘ ಈ ಬಾತುಕೋಳಿಯ ಪರಸ್ಥಿತಿ ಒಬ್ಬ ಬೇಟೆಗಾರನೇ ಮಾಡಿರಬಹುದು ಆದರೆ ಯಾವುದೇ ಸಾಕ್ಷಿ ಇಲ್ಲದೆ ಏನು ಹೇಳಲಿಕ್ಕೆ ಸಾಧ್ಯವಿಲ್ಲ. ಸದ್ಯಕ್ಕೆ ಪೊಲೀಸ್ ಅಧಿಕಾರಿಗಳು ಅಪರಾಧಿಯನ್ನು ಹುಡುಕುವ ಕಾರ್ಯ ನಡೆಸಿದ್ದಾರೆ.