Articles

ಖತರ್ನಾಕ್ ದೇಸಿ ಐಡಿಯಾಗಳು! ನಮ್ಮ ಜನನೇ ಬೇರೆ, ನಮ್ಮ ಸ್ಟೈಲೇ ಬೇರೆ; ಒಮ್ಮೆ ನೋಡಿಯೇ ಬಿಡಿ ಪಕ್ಕಾ ದೇಸಿ ಐಡಿಯಾಗಳ ವಿಡಿಯೋ…

ಸೋಶಿಯಲ್ ಮೀಡಿಯಾವೇ ಹೀಗೆ. ಇಲ್ಲಿ ಅದ್ಭುತ ಪ್ರಪಂಚದ ಫೋಟೋ ಹಾಗು ವಿಡಿಯೋಗಳು ತುಂಬಿಹೋಗಿವೆ. ಈ ಪ್ಲಾಟ್ ಫಾರ್ಮ್ ನಲ್ಲಿ ಯಾರು ಏನೇ ವಿಚಿತ್ರ, ವಿಶೇಷ ಮಾಡಿದರೆ ಸಾಕು ಫಕ್ಕನೆ ಬೆಳಕಿಗೆ ಬಂದು ಬಿಡುತ್ತದೆ. ಆನಂತರ ಮುಗಿದು ಹೋಯಿತು. ಅದು ಒಬ್ಬರಿಂದ 10 ಜನರಿಗೆ, ಅವರಿಂದ ನೂರು ಜನರಿಗೆ, ಮತ್ತೆ ಅವರಿಂದ ಸಾವಿರ ಜನರಿಗೆ ಹೀಗೆ ಲಕ್ಷ ಲಕ್ಷ ಜನರಿಗೆ ಹಬ್ಬುತ್ತಾ ಹೋಗುತ್ತದೆ. ಈಗ ಇದೇ ರೀತಿಯ ಐಡಿಯಾ ಹೊಂದಿದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಭಾರತೀಯ ಜನರು ಏನಾದರೊಂದು ದೇಸಿ ಐಡಿಯಾ ಮಾಡಿ ಸುಖದ ಕ್ಷಣಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ಇದೇ ರೀತಿಯ ಅನೇಕ ದೇಸಿ ಐಡಿಯಾಗಳ ಒಂದು ಬಂಚ್ ಮಾಡಿದ ಕೆಲವು ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಯೂಟ್ಯೂಬ್ ನ ಒಂದು ಚಿಕ್ಕ ವಿಡಿಯೋದಲ್ಲಿ ಕಾಣಲು ಸಿಗುತ್ತಿವೆ.

ಈ ವಿಡಿಯೋದಲ್ಲಿ ಮೊದಲು ಒಂದು ಫೋಟೋದಲ್ಲಿ ಎರಡು ಕೋಣೆಗಳ ಮಧ್ಯೆ ಬಾಗಿಲಿನ ಮೇಲೆ ದೊಡ್ಡ ಹೋಲ್ ಮಾಡಿ ಏರ್ ಕಂಡಿಷನ್ ನ್ನು ಇನ್ಸ್ಟಾಲ್ ಮಾಡಲಾಗಿದೆ. ಎರಡೂ ಕೋಣೆಗಳಲ್ಲಿ AC ಯ ತಂಪಾದ ಗಾಳಿ ಸಮಾನವಾಗಿ ಸುಳಿದಾಡಲು ವ್ಯವಸ್ಥೆ ಮಾಡಿಕೊಂಡಿದ್ದಾರೆ.

ನಂತರ ಬರುವ ಎರಡನೆಯ ಚಿತ್ರದಲ್ಲಿ ಕಾರಿನ ಹಿಂದಿನ ಅರ್ಧಭಾಗವಿದೆ, ಮುಂದೆ ಅದಕ್ಕೆ ಎಂಜಿನ್ ಬದಲಾಗಿ ಕುದುರೆಯ ವ್ಯವಸ್ಥೆ ಮಾಡಲಾಗಿದೆ.

ಮೂರನೆಯ ಚಿತ್ರದಲ್ಲಿ ಒಂದು ಸೈಕಲ್ ರಿಕ್ಷಾ ಕಂಡುಬರುತ್ತಿದೆ. ಅದರಲ್ಲಿ ಒಬ್ಬಳು ಮಹಿಳೆ ಕುಳಿತಿದ್ದಾಳೆ. ಇಬ್ಬರು ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಂದ ಕವರ್ ಆಗಿದ್ದಾರೆ. ಕಾರಣವಿಷ್ಟೇ ಅಲ್ಲಿ ಮಳೆ ಬರುತ್ತಿದೆ ಹಾಗೂ ಮಳೆಯಿಂದ ರಕ್ಷಣೆ ಪಡೆಯಲು ಈ ರೀತಿಯ ಐಡಿಯಾ ಮಾಡಿದ್ದಾರೆ.

ನೆಕ್ಸ್ಟ್ ಚಿತ್ರದಲ್ಲಿ ಒಂದು ಪ್ಲಾಸ್ಟಿಕ್ ಚೀಲಕ್ಕೆ (ಗಂಟಿಗೆ) ಲಾಕ್ (ಬೀಗ) ಹಾಕಲಾಗಿದೆ.

ಕೊನೆ ಚಿತ್ರದಲ್ಲಿ ಸುಂದರವಾದ ಮನೆ ಇದೆ. ಈ ಮನೆಯನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದಾಗ ಗೊತ್ತಾಗುತ್ತೆ ಈ ಮನೆಯು ಸಂಪೂರ್ಣವಾಗಿ ಪ್ಲಾಸ್ಟಿಕ್ ಬಾಟಲ್ ಗಳಿಂದ ತಯಾರಿಸಲಾಗಿದೆ ಎಂದು ತಿಳಿದುಬರುತ್ತದೆ.

ನೋಡಿ ಈ ವಿಡಿಯೋ…

ಈ ವಿವಿಧ ಐಡಿಯಾಗಳ ಫೋಟೋ ಇರುವ ಬಂಚ್ ನ ಚಿಕ್ಕ ವಿಡಿಯೋ ಯೂಟ್ಯೂಬ್ ನಲ್ಲಿ (Mr. Factopiya) ಈ ಚಾನೆಲ್ ಮುಖಾಂತರ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ 5 ಮಿಲಿಯನ್ ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ. Indian funny desi jugaad ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.

Leave a Comment

Your email address will not be published. Required fields are marked *