‘ಈ’ ಬಾಲಿವುಡ್ ನಟಿ ಮನೆಯ ಊಜುಕೊಳಕ್ಕೆ ವಿಸಿಟ್ ಕೊಟ್ಟ ಹಾವು! ಮೊದಲು ನೀರಿನಲ್ಲಿ ಧುಮುಕಿತು ಮತ್ತು ಅನಂತರ… Viral ಆಯಿತು Video!
ಸೆಲೆಬ್ರಿಟಿಗಳ ಯಾವುದೇ ವಿಷಯವಾಗಿರಲಿ ಅದು ಸಾಮಾಜಿಕ ಜಾಲತಾಣಗಳ ಕೃಪೆ ಎಂಬಂತೆ ಬಹುಬೇಗ ವೈರಲ್ ಆಗಿ ಬಿಡುತ್ತದೆ. ಅವರ ವೀಡಿಯೋಗಳು, ಫೋಟೋಗಳು ಎಲ್ಲಕ್ಕೂ ಕೂಡಾ ಸಿಕ್ಕಾಪಟ್ಟೆ ಕ್ರೇಜ್ ಸದಾ ಇದ್ದೇ ಇರುತ್ತದೆ. ಆದರೆ ಕೆಲವೊಮ್ಮೆ ನಟ, ನಟಿಯರು ಕೆಲವೊಂದು ಅಪರೂಪ ಎನಿಸುವ ವೀಡಿಯೋಗಳನ್ನು ಶೇರ್ ಮಾಡುವುದು ಕೂಡಾ ಉಂಟು. ಆ ವೀಡಿಯೋಗಳು ಕೂಡಾ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ಎಲ್ಲರ ಗಮನವನ್ನು ಸೆಳೆದು, ಮೆಚ್ಚುಗೆಯನ್ನು ಪಡೆಯುತ್ತವೆ. ಈಗ ಅಂತಹುದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರ ಹಿನ್ನೆಲೆ ಏನೆಂದು ತಿಳಿಯೋಣ ಬನ್ನಿ.

ಬಾಲಿವುಡ್ ನ ಸ್ಟಾರ್ ನಟಿ ಆಲಿಯಾ ಭಟ್ ಅವರ ತಾಯಿ ಹಾಗೂ ಬಾಲಿವುಡ್ ನಟಿಯೂ ಕೂಡಾ ಆಗಿರುವ ಸೋನಿ ರಾಜ್ದಾನ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿರುತ್ತಾರೆ. ಆಕೆ ಆಗಾಗ್ಗೆ ಮಾಡುವ ಬಿಂದಾಸ್ ಟ್ವೀಟ್ ಗಳಿಂದಾಗಿ ಜನಪ್ರಿಯ. ವರ್ತಮಾನದ ಸೂಕ್ಷ್ಮ ವಿಚಾರಗಳ ಬಗ್ಗೆ ನಿರ್ಭಯವಾಗಿ ತನ್ನ ಅಭಿಪ್ರಾಯವನ್ನು ಆಕೆ ಸೋಷಿಯಲ್ ಮೀಡಿಯಾ ಗಳಲ್ಲಿ ನೀಡುವ ಮೂಲಕ ಸಂಚಲವನ್ನು ಕೂಡಾ ಸೃಷ್ಟಿಸುವುದು ಸಾಮಾನ್ಯ. ಈಗ ಸೋನಿ ರಾಜ್ದಾನ್ ಅವರು ಮತ್ತೊಮ್ಮೆ ಸುದ್ದಿಗಳ ಮೂಲಕ ಮುನ್ನೆಲೆಗೆ ಬಂದಿದ್ದಾರೆ. ಆದರೆ ಅವರು ಈ ಬಾರಿ ಯಾವುದೇ ಖಡಕ್ ಟ್ವೀಟ್ ನಿಂದ ಸುದ್ದಿಯಾಗಿಲ್ಲ. ಬದಲಿಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ವೀಡಿಯೋಗಳ ಮೂಲಕ ಗಮನ ಸೆಳೆದಿದ್ದಾರೆ.
ಸೋನಿ ರಾಜ್ದಾನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರ ಈಜುಕೊಳದಲ್ಲಿ ಹಾವು ಬಂದು ಹೋದ ಒಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಸಂಬಂಧ ಅವರು ಎರಡು ವೀಡಿಯೋಗಳನ್ನು ಶೇರ್ ಮಾಡಿದ್ದು, ವೀಡಿಯೋ ಶೇರ್ ಮಾಡುವಾಗ ಅವರು ಇಂದು ನಮ್ಮ ಕೊಳಕ್ಕೆ ಅತಿಥಿಯೊಬ್ಬರು ಬಂದಿದ್ದರು ಎಂದು ಬರೆದುಕೊಂಡಿದ್ದಾರೆ. ಸೋನಿ ರಾಜ್ದಾನ್ಹಂಚಿಕೊಂಡ ಈ ವೀಡಿಯೋ ಸ್ವಲ್ಪ ಹಳೆಯದೇ ಆದರೂ ಇಲ್ಲಿಯವರೆಗೆ ಇದನ್ನು 73 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವೀಡಿಯೊವನ್ನು ಹಂಚಿಕೊಂಡ ಆಕೆ, ಅತಿಥಿಯೊಬ್ಬರು ಇಂದು ನಮ್ಮ ಈಜುಕೊಳಕ್ಕೆ ಬಂದರು. ಮೊದಲು ನೀರು ಕುಡಿಯಲು ಬಯಸಿದ್ದರು, ಅನಂತರ ಅವರು ಸ್ನಾನ ಮಾಡಿದರು. ಅದಾದ ಬಳಿಕೆ ನಾವು ಅವನನ್ನು ಮತ್ತೆ ಪೊದೆಗಳಿಗೆ ಹೋಗಲು ಬಿಟ್ಟೆವು ಎಂದು ವಿವರಣೆ ನೀಡಿದ್ದಾರೆ.
ಇದಲ್ಲದೆ, ಸೋನಿ ರಜ್ದಾನ್ ಅದೇ ಹಾವಿನ ಕುರಿತಾದ ಮತ್ತೊಂದು ವೀಡಿಯೊವನ್ನು ಹಂಚಿಕೊಂಡು, ಅದರಲ್ಲಿ ಅವರು “ನೀರಿನಲ್ಲಿ ಹಾವಿನ ಎರಡನೇ ಭಾಗ ” ಎಂದು ಬರೆದಿದ್ದಾರೆ. ಎರಡನೇ ವೀಡಿಯೋದಲ್ಲಿ ಹಾವು ಈಜುಕೊಳದ ಒಂದು ಬದಿಯಿಂದ ಇನ್ನೊಂದು ಬದಿಯ ಪೊದೆಗಳ ಕಡೆ ಚಲಿಸಿ ಹೋಗುತ್ತದೆ. ಈ ವೀಡಿಯೋ ಕೂಡಾ ಭರ್ಜರಿ ವೀಕ್ಷಣೆಯನ್ನು ಪಡೆದುಕೊಂಡಿದೆ. ಸೋನಿ ರಜ್ದಾನ್ ಅವರು ಬಾಲಿವುಡ್ ನಲ್ಲಿ ಮಾತ್ರವೇ ಅಲ್ಲದೇ ಟಿವಿ ಶೋ ಗಳನ್ನು ಕೂಡಾ ಮಾಡಿದ್ದಾರೆ. ಆಲಿಯಾ ನಟನೆಯ ರಾಜೀ ಸಿನಿಮಾದಲ್ಲಿ ಸೋನಿ ಮಗಳ ಜೊತೆ ಒಂದು ಮುಖ್ಯ ಪಾತ್ರದಲ್ಲಿ ತೆರೆಯ ಮೇಲೆ ಕಂಡಿದ್ದರು.