Articles

Video: ಬೆಂಕಿಯಂತಹ ಮೆಣಸಿನಕಾಯಿಯನ್ನು ನಗು ನಗುತ್ತ ತಿನ್ನುತ್ತಾಳೆ ಈ ಹುಡುಗಿ: ಕಾರಣ ಕೇಳಿದರೆ ಕಣ್ಣಲ್ಲಿ ನೀರು ಬರುತ್ತೆ!!

ಚಿಕ್ಕ ಮಕ್ಕಳು ಚಾಕೊಲೇಟ್, ಐಸ್ ಕ್ರೀಮ್ ಅಥವಾ ಕೆಲವು ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ ಎಂಬುದು ನಮಗೆಲ್ಲ ಗೊತ್ತಿದೆ. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾನೇ ವೈರಲ್ ವಾಗುತ್ತಿದೆ. ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಚಿಕ್ಕ ಹುಡುಗಿ ಐಸಕ್ರೀಮ್, ಚಾಕ್ಲೆಟ್ ತಿನ್ನುವುದರ ಬದಲಾಗಿ ಬೆಂಕಿಯಂತಹ ಖಾರದ ಮೆಣಸಿನಕಾಯಿ ತಿನ್ನುತ್ತಿರುವದು ಕಾಣಬಹುದು.

ನೀವು ಮೆಣಸಿನ ಪುಡಿಯನ್ನು ಇಷ್ಟಪಡುತ್ತೀರೋ ಅಥವಾ ಇಲ್ಲವೋ ಅದು ನಿಮಗೆ ಬಿಟ್ಟಿದ್ದು. ಆದರೆ ಮೆಣಸಿನಕಾಯಿಯನ್ನು ಕಚ್ಚುತ್ತಲೇ ಬಾಯಿಯಲ್ಲಿ ಉರಿ ಉಂಟಾಗುವದರ ಜೊತೆಗೆ ಮುಖ ಕೆಂಪಾಗುತ್ತ, ಹೊಟ್ಟೆಯಲ್ಲಿ ಉರಿ ಹತ್ತಿದಂತಾಗುತ್ತದೆ. ಹೀಗಿರುವಾಗ ಈ ಸಣ್ಣ ಹುಡುಗಿ ಮಾತ್ರ ನಗು ನಗುತ್ತ ಒಂದು ಮೆಣಸಿನಕಾಯಿ ತಿನ್ನುತ್ತಿದ್ದಾಳೆ. ಪುಷ್ಪಕ ಮಹಾಜನ್ ಎಂಬ ಯುಟ್ಯೂಬ್ ಯುಜರ್ ತಮ್ಮ ಯುಟ್ಯೂಬ್ ಚಾನೆಲ್ ಮೇಲೆ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ.

ವೀಡಿಯೋದಲ್ಲಿ ನೀವು ನೋಡಬಹುದು, ರಸ್ತೆಯ ಬದಿಯಲ್ಲಿ ಕುಳಿತ ಈ ಪುಟ್ಟ ಬಾಲಕಿಗೆ ಒಬ್ಬ ವ್ಯಕ್ತಿ ಅವಳ ಕೈಯಲ್ಲಿ ಒಂದು ಮೆಣಸಿನಕಾಯಿ ಕೊಡುತ್ತಾನೆ. ಆಗ ಬಾಲಕಿ ಆ ಮೆಣಸಿನಕಾಯಿ ಏನೋ ಚಾಕ್ಲೆಟ್ ಇದೆ ಅನ್ನೋ ಹಾಗೆ ಗಬಗಬನೆ ತಿನ್ನುತ್ತಾಳೆ ಅದು ಸಹಿತ ಮುಖದಲ್ಲಿ ನಗುವಿನ ಜೊತೆಗೆ. ಒಂದು ಸಂಪೂರ್ಣ ಮೆಣಸಿನಕಾಯಿ ತಿನ್ನುತ್ತಾಳೆ. ಅಷ್ಟು ನಗು ಮುಖದಿಂದ ಮೆಣಸಿನಕಾಯಿ ತಿನ್ನುತ್ತಿದ್ದಾಳೆ ಅಂದರೆ ಮೆಣಸಿನಕಾಯಿ ಇಷ್ಟವಿದೆ ಎಂತಲ್ಲ! ಅಲ್ಲದೆ ಅವಳ ಜೊತೆಗೆ ಯಾರೂ ಮೆಣಸಿನಕಾಯಿ ತಿನ್ನುವ ಸ್ಪರ್ಧೆ ಕೂಡಾ ಹಚ್ಚಿಲ್ಲ. ಆದರೆ ಆ ಬಾಲಕಿಯ ಅವಶ್ಯಕತೆ ಮತ್ತು ಪರಿಸ್ಥಿತಿ ಅವಳನ್ನು ಮೆಣಸಿನಕಾಯಿ ತಿನ್ನುವ ಹಾಗೆ ಮಾಡಿತು. ಎಲ್ಲದಕ್ಕೂ ಮುಖ್ಯವಾದದ್ದು ಹಣ. ಆ ಬಾಲಕಿಗೆ ಸಹ ಹಣದ ಅವಶ್ಯಕತೆ ಇತ್ತು ಹೀಗಾಗಿ ಮೆಣಸಿನಕಾಯಿ ತಿಂದರೆ ಹಣ ಸಿಗುತ್ತೋ ಅನ್ನೋ ಭರವಸೆಯಲ್ಲಿ ಖಾರವಾದ ಮೆಣಸಿನಕಾಯಿ ನಗು ನಗುತ್ತ ತಿನ್ನುತ್ತಾಳೆ.

ಈ ಹುಡುಗಿಯ ಮೆಣಸಿನಕಾಯಿ ತಿನ್ನುವ ಕಾರಣವನ್ನು ಕೇಳಿ ನಿಮಗೂ ಆ#ಶ್ಚರ್ಯವಾಗಿರಬಹುದು. ಒಂದಿಷ್ಟು ಹಣದ ಸಲುವಾಗಿ ಮೆಣಸಿನಕಾಯಿ ತಿನ್ನುವ ಪರಿಸ್ಥಿತಿ ಆ ಹುಡುಗಿಗೆ ಬಂದಿದೆ. ನೀವು ವಿಡಿಯೋದಲ್ಲಿ ನೋಡಬಹುದು, ನಗುತ್ತ ಮೆಣಸಿನಕಾಯಿ ತಿಂದ ನಂತರ ಹುಡುಗಿಯ ಕಣ್ಣಲ್ಲಿ ವೇ#ದನೆಯಿಂದ ತನ್ನಿಂದ ತಾನೇ ನೀರು ಬರುತ್ತವೆ, ಏನು ಆಗಿಲ್ಲ ಅಂತ ಹೇಳಿಕೊಡುವ ಹುಡುಗಿಯ ಕಣ್ಣಲಿ ತನ್ನಿಂದ ತಾನೇ ಉರಿತದಿಂದ ನೀರು ಬರುತ್ತವೆ ಆದರೂ ಸಹ ಹುಡುಗಿ ನಗುಮುಖದಿಂದ ತನ್ನ ಕಣ್ಣಲ್ಲಿಯ ನೀರು ಒರೆಸಿಕೊಳ್ಳುತ್ತಾಳೆ. ಈ ದೃಶ್ಯ ನೋಡಿದರೆ ನಿಜಕ್ಕೂ ವಿಧಿ ತುಂಬಾ ಕ#ಠೋರ ಅನಿಸುತ್ತೆ. .

ವಿಡಿಯೋ ನೋಡಿ.

ದುಡ್ಡಿರದಿದ್ದದೆ ಮನುಷ್ಯನಿಗೆ ಬೆಲೆನೆ ಇಲ್ಲ. ದುಡ್ಡೇ ದೊಡ್ಡಪ್ಪ ಅನ್ನೋ ಹಾಗೆ ಇಂದು ಯಾರ ಹತ್ತಿರ ದುಡ್ಡು ಇರುತ್ತದೆಯೋ ಅವರ ಹತ್ತಿರ ಎಲ್ಲವೂ ತಾನಾಗಿಯೇ ಬರುತ್ತೆ. ಆದರೆ ದುಡ್ಡು ಇಲ್ಲದ ಬಡವರ ಜೀವನ ತುಂಬಾ ಗೋಳು. ದುಡ್ಡಿಗೋಸ್ಕರ ಮನುಷ್ಯ ಏನನ್ನು ಮಾಡಲು ಸಹ ತಯಾರಾಗಿರುತ್ತಾನೆ. ಅಂತಹ ಪರಿಸ್ಥಿತಿ ಸಹ ಈ ಚಿಕ್ಕ ಬಾಲಕಿಗೂ ಬಂದಿತ್ತು ಆದರೆ ಮೆಣಸಿನಕಾಯಿ ತಿಂದರೆ ನಾಲಿಗೆ ಖಾರದಿಂದ ಉರಿಯುತ್ತದೆ ಅನ್ನೋ ದುಃಖಕ್ಕಿಂತ, ಮೆಣಸಿನಕಾಯಿ ತಿಂದ ಮೇಲೆ ದುಡ್ಡು ಸಿಗುತ್ತೆ ಅನ್ನೋ ಖುಷಿ ಮಾತ್ರ ಅವಳ ತಲೆಯಲ್ಲಿತ್ತು. ಆದ್ದರಿಂದಲೇ ಹುಡುಗಿಯು ಮೆಣಸಿನಕಾಯಿ ತಿಂದನಂತರವೂ ಸಹ ಮುಖದಲ್ಲಿ ನಗು ಮತ್ತು ಕಣ್ಣಲ್ಲಿ ನೀರು ಬರುತ್ತಿವೆ.

Leave a Comment

Your email address will not be published. Required fields are marked *