ಈ ಬೆಕ್ಕಿಗೆ ಬೇಕು ಹಸುವಿನ ಹಸಿ ಹಾಲೇ! ಅದು ತನ್ನ ಮಾಲೀಕನಿಗೆ ಕೇಳುವ ಪರಿ ನೋಡಿ ಈ ವೈರಲ್ ವಿಡಿಯೋದಲ್ಲಿ….
ಬರೀ ಮಾನವನಷ್ಟೇ ಜಾಣನೆಂದು ತಿಳಿದರೆ ತಪ್ಪು. ನಿಸರ್ಗವು ಮಾನವನ ಹಾಗೆ ಇನ್ನಿತರ ಪ್ರಾಣಿಗಳಿಗೂ ಸಹ ಬುದ್ಧಿ ಶಕ್ತಿಯನ್ನು ದಯಪಾಲಿಸಿದ್ದಾನೆ. ಅವುಗಳಿಗೂ ಸಹ ಆಸೆಗಳನ್ನು ನೀಡಿದ್ದಾನೆ. ಆದರೆ ಮಾನವನ ಹಾಗೆ ತನ್ನ ಆಸೆ ಪೂರೈಸಿಕೊಳ್ಳಲು ಹಪಹಪಿಸುವದಿಲ್ಲ. ಇಷ್ಟು ಮಾತ್ರ ನಿಜ ಮಾನವನ ಜೊತೆಗೂಡಿ ಪ್ರಾಣಿಗಳು ಸಹ ಮಾನವನ ಗುಣಗಳನ್ನೇ ಫಾಲೋ ಮಾಡುತ್ತಿವೆ.
ಸೋಶಿಯಲ್ ಮೀಡಿಯಾದ ಪ್ಲಾಟ್ಫಾರ್ಮ್ ಆದ ಇನ್ಸ್ಟಾಗ್ರಾಮ್ ನಲ್ಲಿ discovery.engenharia ಹೆಸರಿನಿಂದ ಶೇರ್ ಮಾಡಲಾದ ವಿಡಿಯೋ ಒಂದು ಇದೇ ವಿಷಯಕ್ಕೆ ಕನ್ನಡಿ ಹಿಡಿದಂತಿದೆ. ಈ ಶೇರ್ ಮಾಡಿದ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಹಸುವಿನ ಹಾಲು ಕರೆಯುತ್ತಿದ್ದಾನೆ. ಆಗ ಆತನ ಮಗ್ಗುಲಲ್ಲಿ ಬೆಕ್ಕೊಂದು ಕುಳಿತಿದೆ. ಬೆಕ್ಕು ಹಾಲು ಪ್ರಿಯವಾಗಿದೆ ಎಂದು ಎಲ್ಲರಿಗೂ ಗೊತ್ತೇ ಇದೆ. ಅದು ತನ್ನ ಮಾಲಿಕನಿಗೆ ಮೇಲಿಂದ ಮೇಲೆ ಸ್ಪರ್ಶ ಮಾಡಿ ತನಗೆ ಹಸುವಿನ ಹಸಿ ಹಾಲು ಬೇಕೆಂದು ಸನ್ನೆಮಾಡಿ ಹೇಳುತ್ತಿದೆ. ಈ ದೃಶ್ಯವು ನೋಡಲು ತುಂಬಾ ಸೊಗಸಾಗಿದೆ. ಬೆಕ್ಕು ತನ್ನ ನಾಲಿಗೆಯ ಚಪಲವನ್ನು ತೀರಿಸಿಕೊಳ್ಳಲು ಹಾಲುಬೇಕೆಂದು ಮಾಲಿಕನಿಗೆ ಸ್ಪರ್ಶ ಮಾಡಿ ವಿನಂತಿಸಿಕೊಳ್ಳುತ್ತಿದೆ ಎನ್ನುವ ಹಾಗಿದೆ ಈ ದೃಶ್ಯ.
ಮುಗ್ಧ ಬೆಕ್ಕಿನ ಈ ಸೊಗಸಾದ ವಿಡಿಯೋ ಇಲ್ಲಿ ನೋಡಿ…
View this post on Instagram
ಮುಗ್ಧ ಪ್ರಾಣಿಗಳು ಸಹಿತ ತುಂಬಾ ಜಾಣವಾಗಿರುತ್ತವೆ ಎಂಬುದು ಅನೇಕ ವಿಡಿಯೋಗಳಿಂದ ಆಗಾಗ ಗೊತ್ತಾಗುತ್ತಲೇ ಇದೆ. ಇಲ್ಲಿ ಈ ಬೆಕ್ಕು ಸಹಿತ ತನ್ನ ಹಾಲಿನ ಆಸೆಯನ್ನು ಪೂರ್ಣ ಮಾಡಿಕೊಳ್ಳಲು ಮಾಲೀಕನ ಜೊತೆಗೆ ನಡೆದುಕೊಳ್ಳುವ ರೀತಿ ತುಂಬಾ ಹೃದಯಸ್ಪರ್ಶಿಯಾಗಿದೆ, ಅಲ್ವಾ?