Articles

Video; ಈ ಆಟಗಾರನಿಗೆ ಮೊದ್ಲು ಶೋಧಿಸಿ ಪ್ರೊ ಕಬಡ್ಡಿಯಲ್ಲಿ ಚಾನ್ಸ್ ನೀಡಲೇಬೇಕು! ಈತನ ಕಬಡ್ಡಿ ಸ್ಕಿಲ್ ಒಮ್ಮೆ ನೋಡಿಯೇ ಬಿಡಿ.

ಕೆಲವೊಂದು ಸಲ ಆಟದ ಮೈದಾನದಲ್ಲಿ ಅನೇಕ ರೋಚಕ ಪ್ರಸಂಗಗಳು ಘಟಿಸುತ್ತವೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಕೆಲವೊಮ್ಮೆ ಆಟದ ರೋಚಕತೆ ಉತ್ತುಂಗಕ್ಕೆ ಏರಿದರೆ ಇನ್ನೂ ಕೆಲವೊಮ್ಮೆ ಆಟಗಾರರ ತಮಾಷೆಯ ಅದ್ಭುತ ಪ್ರಸಂಗಗಳು ಕ್ಯಾಮೆರಾದಲ್ಲಿ ಸೆರೆಯಾಗಿ ಬಿಡುತ್ತವೆ. ಸದ್ಯ ಇದೇ ರೀತಿಯ ತಮಾಷೆಯ ಪ್ರಸಂಗ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

ಈ ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ಮೈದಾನದಲ್ಲಿ ಜೋರಾದ ಕಬಡ್ಡಿ ಪಂದ್ಯ ನಡೆದಿದೆ. ಆಟವು ತುಂಬಾ ಸೀರಿಯಸ್ ಹಂತಕ್ಕೆ ತಲುಪಿದೆ ಎಂದು ಕಂಡು ಬರುತ್ತಿದೆ. ಇದೇ ಸಂದರ್ಭದಲ್ಲಿ ಆಟಗಾರನೊಬ್ಬ ಎದುರಿನ ತಂಡದ ಮೇಲೆ ಕಬಡ್ಡಿ ಕಬಡ್ಡಿ ಎನ್ನುತ್ತಾ ಏರಿ ಹೋಗುತ್ತಾನೆ. ಎಲ್ಲರೂ ಆತನ ದೇಹ ದಾರ್ಢ್ಯ ನೋಡಿ ಔಟಾಗುವ ಭೀತಿಯಿಂದ ಹಿಂದೆ ಹಿಂದೆ ಸರಿಯುತ್ತಿರುವ ಸಂದರ್ಭದಲ್ಲಿಯೇ ಏರಿ ಬಂದ ಆಟಗಾರ ಜೋರಾಗಿ ಕಿಕ್ ನೀಡಲು ಮುಂದಾಗುತ್ತಾನೆ ಮತ್ತು ದೊಡ್ಡ ಎಡವಟ್ಟು ಮಾಡಿಕೊಳ್ಳುತ್ತಾನೆ. ತನಗೆ ಹೆದರಿ ಎಲ್ಲರೂ ಹಿಂದೆ ಸರಿದದ್ದನ್ನು ಗಮನಿಸಿ ಕಬಡ್ಡಿ ಕಬಡ್ಡಿ ಎನ್ನುತ್ತಾ ಏರಿ ಬಂದ ಆಟಗಾರ ಎದುರಿನ ಆಟಗಾರನಿಗೆ ಔಟ್ ಮಾಡಲು ಜೋರಾಗಿ ಕಿಕ್ ಹೊಡೆಯುತ್ತಾನೆ ಆದರೆ ಆ ಕಿಕ್ ಹೊಡೆಯುವ ಭರದಲ್ಲಿ ತನ್ನ ಬ್ಯಾಲೆನ್ಸ್ ಕಳೆದುಕೊಂಡು ದಪ್ಪನೆ ಕೆಳಗೆ ಬೋರಲಾಗಿ ಬಿದ್ದು ಬಿಡುತ್ತಾನೆ. ಇದನ್ನೇ ಕಾಯುತ್ತಿದ್ದ ಆಟಗಾರರು ಕ್ಷಣದಲ್ಲಿ ಈತನಿಗೆ ಸುತ್ತುವರೆದು ಹಿಡಿದು ಬಿಡುತ್ತಾರೆ.

ನೋಡಿ ಈ ತಮಾಷೆಯ ವಿಡಿಯೋ…

ಪ್ರಸ್ತುತ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ 8 ಲಕ್ಷಕ್ಕೂ ಮೇಲ್ಪಟ್ಟು ಲೈಕ್ಸ್ ಗಳನ್ನು ಪಡೆದಿದ್ದು ಸುಮಾರು ಮಿಲಿಯನ್ ಗಳಲ್ಲಿ ವೀಕ್ಷಣೆಯನ್ನು ಪಡೆದಿದೆ.

Leave a Comment

Your email address will not be published. Required fields are marked *