ಎಗ್ ಫ್ರಾಯ್ ಮೇಲೆ ಹೆಚ್ಚಿನ ಕರಿಮೆಣಸಿನ ಪುಡಿ ಬಿದ್ದಾಗ ವ್ಯಾಕ್ಯೂಮ್ ಕ್ಲಿನರ್ ಬಳಸಿದ ಭೂಪ! ಬಿದ್ದು ಬಿದ್ದು ನಕ್ಕ ನೆಟ್ಟಿಗರು!
ಪಾಕಶಾಸ್ತ್ರ ಒಂದು ಕಲೆ. ಬದಲಾದ ಜಗತ್ತಿನಲ್ಲಿಯಂತೂ ಇದರ ಮಹತ್ವ ಮೊದಲಿಗಿಂತಲೂ ತುಂಬಾ ಹೆಚ್ಚಾಗಿದೆ. ನೀವೂ ಒಂದು ವೇಳೆ ಪಾಕಶಾಸ್ತ್ರದಲ್ಲಿ ಪ್ರವೀಣರಾಗಿದ್ದರೆ ಅದರ ಮುಖಾಂತರ ಅನೇಕ ಮಾಧ್ಯಮಗಳಿಂದ ಹಣವನ್ನು ಗಳಿಸಬಹುದು.
ಇನ್ನು ಯಾವುದೇ ಕೆಲಸ ಮಾಡುವಾಗ ತಪ್ಪಾಗುವದು ಸಹಜವೇ. ಆದರೆ ಆಗಿರತಕ್ಕಂಥ ತಪ್ಪನ್ನು ಮೊತ್ತೊಮ್ಮೆ ಶ್ರಮ ಪಡದೆ ಅಲ್ಲಿಯೇ ಯಾವುದೋ ಒಂದು ‘ಟ್ರಿಕ್’ ಅಥವಾ ‘ಐಡಿಯಾ’ ಯೂಜ್ ಮಾಡಿ ಅಲ್ಲಿಯೇ ಸರಿಪಡಿಸುವ ಕಲೆ ಬಹಳ ಜನರಿಗೆ ಗೊತ್ತಿರುವದಿಲ್ಲ.
ಪ್ರಸ್ತುತ ವಿಡಿಯೋ ಈ ವಿಷಯದ ಬಗ್ಗೆಯೇ ಇದೆ. ಇಲ್ಲಿ ಒಬ್ಬ ಪಾಕ ಪ್ರವೀಣ ಮೊಟ್ಟೆಯ ಹಾಫ್ ಫ್ರಾಯ್ ತಯಾರಿಸುತ್ತಿದ್ದಾನೆ. ಇದನ್ನು ಮಾಡುವಾಗ ಫ್ರಾಯ್ ನಲ್ಲಿ ಬೈ ಮಿಸ್ಟೇಕ್ ಕರಿಮೆಣಸಿನ ಪುಡಿ ಹೆಚ್ಚು ಬೀಳುತ್ತದೆ. ಪಾಪ, ಆತನು ಎಷ್ಟು ಇಷ್ಟಪಟ್ಟು ತಯಾರಿಸುತ್ತಿದ್ದನೋ ಏನೋ ಗೊತ್ತಿಲ್ಲ? ಆದರೆ ಅದನ್ನು ಹೇಗೆ ತೆಗೆಯಬೇಕು ಎಂದು ವಿಚಾರ ಮಾಡಿದಾಗ ಭೂಪನಿಗೆ ಹೊಳೆದದ್ದು ವ್ಯಾಕ್ಯೂಮ್ ಕ್ಲಿನರ್!
ಮತ್ತಿನ್ನೇನು ಶುರು ಮಾಡಿದ ವ್ಯಾಕ್ಯೂಮ್ ಕ್ಲಿನರ್ ನಿಂದ ಕರೀಮೇಣಸಿನ ಪುಡಿ ತೆಗೆಯಲು. ವಿಡಿಯೋ ನೋಡುವಾಗ ವಾವ್! ಸೂಪರ್ ಐಡಿಯಾ ಅಂತಾನೇ ಎನ್ನುತ್ತೇವೆ. ಕಾರಣ ಆತ ಮಾಡಿದ ಐಡಿಯಾ ಚೆನ್ನಾಗಿ ವರ್ಕೌಟ್ ಆಗಿದೆ ಎಂದು ಅನಿಸದೆ ಇರಲಾರದು. ಕ್ಲಿನರ್ ಸರಿಯಾಗಿ ಕರಿಮೆಣಸಿನಪುಡಿಯನ್ನು ತನ್ನೊಳಗೆ ಸೆಳೆದು ಕೊಳ್ಳುತ್ತ ಹೋಗುತ್ತದೆ, ಯಾವಾಗ ವ್ಯಾಕ್ಯೂಮ್ ಕ್ಲಿನರ್ ಪೈಪ್ ಹಾಫ್ ಫ್ರಾಯ್ ಮೇಲೆ ಬರುತ್ತೋ ಆಗ…ನೋಡಿ ಮಜಾ.
ವಿಡಿಯೋ ನೋಡಿ…..
Added too much pepper 🤣🤣🤣🤣🤣🤣🤣🤣🤣🤣 pic.twitter.com/3AQUSt5Jun
— Sgujana 🧃 (@shange033) July 20, 2020
ನೋಡಿದಿರಲ್ಲ ವಿಡಿಯೋ? ಈಗ ಹೇಳಿ, ಪಾಪ ಎನಿಸುತ್ತೋ ಇಲ್ಲ, ಹೊಟ್ಟೆ ಹುಣ್ಣಾಗುವಂತೆ ನಗ್ತಾ ಇದ್ದೀರಾ? ನಿಜಕ್ಕೂ ಸೂಪರ್ ವಿಡಿಯೋ ಅಂತಾನೆ ಹೇಳಬಹುದು.
ಈ ವೀಡಿಯೊವನ್ನು ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಜುಲೈ 20 ರಂದು @shange033 ಹೆಸರಿನಿಂದ ಶೇರ್ ಆಗಿದ್ದು, ಇಲ್ಲಿಯವರೆಗೆ 18 ಲಕ್ಷಗಳ ಸಮೀಪ ವ್ಯೂವ್ಜ್ ದೊರಕಿವೆ, 1 ಲಕ್ಷ 46 ಸಾವಿರ ರೀಟ್ವೀಟ್ ಮತ್ತು ಕಮೆಂಟ್ಸ್ ಗಳು ಹಾಗೂ 4 ಲಕ್ಷ 57 ಸಾವಿರ ಲೈಕ್ಸ್ ಸಿಕ್ಕಿವೆ.
ವೀಡಿಯೊವನ್ನು ನೋಡಿದ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಷಯದ ಮೇಲೆ ಅನೇಕರು ತಮಾಷೆಯ ರಿಯಾಕ್ಷನ್ ಗಳನ್ನು ಕೊಟ್ಟಿದ್ದಾರೆ. ಒಬ್ಬ ಯೂಜರ್ ಹೇಳಿದ್ದಾನೆ, ವ್ಯಾಕ್ಯೂಮ್ ಕ್ಲಿನರ್ ಗೆ ಹಾಫ್ ಫ್ರಾಯ್ ತುಂಬಾ ಹಿಡಿಸಿರಬೇಕು ಅಂತ. ಇನ್ನೊಬ್ಬ ಹೇಳ್ತಾನೆ, ಕರಿಮೆಣಸಿನಪುಡಿಯ ಜೊತೆಗೆ ನನಗೆ ಹಾಫ್ ಫ್ರಾಯ್ ಎಗ್ ಸಹಿತ ಬೇಕು.
ಏನೇ ಆಗಲಿ ಆತ ಮಾಡಿದ ಐಡಿಯಾದಿಂದ ಹಾಸ್ಯದ ಜೊತೆಗೆ ಒಂದು ಒಳ್ಳೆಯ ಪಾಠವು ಸಿಕ್ಕಿತು, ಅಲ್ವಾ?