ಎದುರಾಳಿಯನ್ನು ಎಂದಿಗೂ ಹಗುರವಾಗಿ ಲೆಕ್ಕಿಸಬೇಡಿ! ಪರಿಣಾಮ ಹೀಗೂ ಆಗುವುದು; ಎಂದು ತಿಳಿಸುವ ಸಖತ್ ವೈರಲ್ ವಿಡಿಯೋ ನೋಡಿಲ್ಲಿ!

ನಿಸರ್ಗದಲ್ಲಿರುವ ಪ್ರತಿಯೊಂದು ಜೀವಿಗಳು ತುಂಬಾ ಆಶ್ಚರ್ಯ ಮತ್ತು ವೈವಿಧ್ಯತೆಯಿಂದ ಕೂಡಿವೆ. ನಿಸರ್ಗದಲ್ಲಿ ವಾಸಿಸುವ ಪ್ರತಿಯೊಂದು ಜೀವಿಗೆ ಒಂದೊಂದು ವಿಶೇಷ ರೀತಿಯ ಶಕ್ತಿಯನ್ನು ನಿಸರ್ಗವು ದಯಪಾಲಿಸಿದೆ. ಕೆಲವೊಂದು ಪ್ರಾಣಿಗಳು ಅಥವಾ ಜೀವಿಗಳು ಕಣ್ಣಿಗೆ ತುಂಬಾ ಕ್ಷುದ್ರವಾಗಿ ಕಂಡರೂ ಅದ್ಭುತವಾದ ಕೇಳರಿಯದ ಶಕ್ತಿಯನ್ನು ಹೊಂದಿರುತ್ತದೆ. ಎದುರಾಳಿಯನ್ನು ಎಂದಿಗೂ ಸ್ವಂತಕ್ಕಿಂತ ಕಡಿಮೆ ಅಥವಾ ಹಗುರವಾಗಿ ಲೆಕ್ಕಿಸಬಾರದು. ಕಾರಣ ಯಾರ ಹತ್ತಿರ ಎಂಥ ಶಕ್ತಿ ಇದೆ ಎಂಬುದು ಗೊತ್ತಾಗುವುದಿಲ್ಲ. ಇದನ್ನೇ ತೋರಿಸುವ ವಿಡಿಯೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ಈ 1 ನಿಮಿಷ 13 ಸೆಕೆಂಡಿನ ವಿಡಿಯೋದಲ್ಲಿ ಒಂದು ಶಿವನಕುದುರೆ ಮತ್ತು ಓತಿಕ್ಯಾತ ಈ ಎರಡರ ಜೀವನ ಮರಣದ ಹೊರಾಟವಿದೆ. ಓತಿಕ್ಯಾತವು ಶಿವನಕುದುರೆಯನ್ನು ನೋಡಿ ತಿನ್ನುವ ಆಸೆಯಿಂದ ಅದರ ಹತ್ತಿರ ಬಂದು ಅಟ್ಯಾಕ್ ಮಾಡಿದೆ. ಆದರೆ ಇಲ್ಲಿ ಬೇಟೆಯಾಡಲು ಬಂದ ಓತಿಕ್ಯಾತವೇ ಖುದ್ದು ಶಿವನಕುದುರೆಗೆ ಬೇಟೆಯಾಗಿದೆ.

ಓತಿಕ್ಯಾತವು ಶಿವನಕುದುರೆಗೆ ಕ್ಷುದ್ರಜೀವಿ ಎಂದು ತಿಳಿದು ಇದನ್ನು ಸಹಜವಾಗಿ ತಿಂದು ತನ್ನ ಹೊಟ್ಟೆಯನ್ನು ತುಂಬಿಕೊಳ್ಳಬೇಕು ಎಂದು ತಿಳಿದು ಅದರ ಮೇಲೆ ಅಟ್ಯಾಕ್ ಮಾಡಿದೆ. ಆದರೆ ಶಿವನಕುದುರೆ ಮಾಡಿದ ಮರುದಾಳಿಯಲ್ಲಿ ಓತಿಕ್ಯಾತ ಸಿಕ್ಕು ಒಂದೇ ಸಮನೆ ನಲುಗಿದೆ. ಶಿವನಕುದುರೆ ಓತಿಕ್ಯಾತದ ಜೀವ ಹಿಂಡುವವರೆಗೆ ಸ್ವಲ್ಪವೂ ಕೂಡ ಕದಲಲು ಬಿಟ್ಟಿಲ್ಲ.

ನೋಡಿ ಈ ಅದ್ಭುತವಾದ ವಿಡಿಯೋ…

ಈ ಸೂಪರ್ ವಿಡಿಯೋವನ್ನು ಟ್ವಿಟರ್ನಲ್ಲಿ Amazing Nature ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವೀಡಿಯೋವನ್ನು ಇಲ್ಲಿಯವರೆಗೆ ಸುಮಾರು 3 ಲಕ್ಷ ಜನ ನೇಟಿಜನ್ಸ್ ಗಳು ವೀಕ್ಷಿಸಿದ್ದಾರೆ. ಹಾಗೂ ತಮ್ಮ ಮನಸ್ಸಿನ ಭಾವನೆಗಳನ್ನು, ಪ್ರತಿಕ್ರಿಯೆಗಳನ್ನು ವ್ಯಕ್ತ ಮಾಡಿದ್ದಾರೆ. ಇದು ನೋಡಲು ಹಾರರ್ ಮೂವಿ ಇರುವ ಹಾಗಿದೆ ಎಂದು ಒಬ್ಬ ಯೂಸರ್ ಕಮೆಂಟ್ ಮಾಡಿದ್ದರೆ, ಇನ್ನೊಬ್ಬ ಸೋ ಸ್ಯಾಡ್ ಪೂರ್ ಲಿಜಾರ್ಡ್ ಎಂದು ತನ್ನ ಭಾವನೆಯನ್ನು ವ್ಯಕ್ತ ಮಾಡಿದ್ದಾನೆ.