ಎರಡು JCB ಗಳು ಕೂಡಿ ಮೂರನೇ ಜೆಸಿಬಿಯವನ ಮೇಲೆ ಮಾಡಿದರು ಅಟ್ಯಾಕ್! ನೋಡಿ ಈ ವಿಡಿಯೋ…
ಸೋಶಿಯಲ್ ಮೀಡಿಯಾದಲ್ಲಿ ಜೆಸಿಬಿಯಿಂದ ಉತ್ಖನನ ಮಾಡುವ ಅನೇಕ ವಿಡಿಯೋಗಳನ್ನು ನೋಡಿರಬಹುದು. ಇದೇ ಜೆಸಿಬಿ ಈಗ ಮತ್ತೊಮ್ಮೆ ಚರ್ಚೆಯಲ್ಲಿ ಬಂದಿದೆ. ಹಾಗಾಗಿ ಪ್ರಸ್ತುತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈಗ ಜೆಸಿಬಿಗಳ ಜಗಳದ ಸಂಬಂಧ ವಿಡಿಯೋ ವೈರಲ್ ಆಗುತ್ತಿದೆ. ಈ ಜಗಳದಲ್ಲಿ ಒಟ್ಟು 3 ಜೆಸಿಬಿಗಳು ಜಗಳ ಕಾಯ್ದಿರುವದು ಕಂಡು ಬರುತ್ತಿದೆ. ಎರಡು ಜೆಸಿಬಿಗಳು ಒಂದು ಜೆಸಿಬಿ ಮೇಲೆ ಅಟ್ಯಾಕ್ ಮಾಡಿವೆ. ಮೂರು ಜೆಸಿಬಿಗಳು ಯಾವುದೋ ಒಂದು ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಒಂದುಗೂಡಿವೆ. ಅಲ್ಲೇ ಕೆಲಸಮಾಡುವಲ್ಲಿ ಜೆಸಿಬಿಯ ಡ್ರೈವರ್ ಗಳ ಮಧ್ಯೆ ಏನೋ ಮನಸ್ತಾಪವಾಗಿರಬಹುದು. ಈ ಕಾರಣದಿಂದ ಇಬ್ಬರು ಜೆಸಿಬಿ ಡ್ರೈವರ್ ಗಳು ಒಂದು ಜೆಸಿಬಿಯ ಮೇಲೆ ಹಲ್ಲೆ ಮಾಡುತ್ತಿರುವದು ಕಂಡುಬರುತ್ತಿದೆ. ಎರಡು ಜೆಸಿಬಿ ಗಳು ಅಟ್ಯಾಕ್ ಮಾಡಿದ ಮೇಲೆ ಒಂಟಿಯಾದ ಜೆಸಿಬಿ ಡ್ರೈವರ್ ಗಾಬರಿಯಾದ ಹಾಗೆ ಕಂಡುಬರುತ್ತಿದೆ. ನಂತರ ಮಾತ್ರ ಅವನು ಸಹ ಅವರಿಗೆ ಸರಿಯಾದ ಪ್ರತ್ಯುತ್ತರ ನೀಡಿದ್ದಾನೆ.
ವಿಡಿಯೋ ನೋಡಿ
ಪ್ರಸ್ತುತ ವಿಡಿಯೋ ಎಲ್ಲಿಯದಿದೆ ಎಂಬುದು ತಿಳಿದುಬಂದಿಲ್ಲ. ಈ ವಿಡಿಯೋವನ್ನು bridlove_store ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಬರೀ ಜೆಸಿಬಿಗಳ ಹೊರತಾಗಿ ಉಳಿದವರು ಯಾರು ಕಾಣುತ್ತಿಲ್ಲ.