ಎರಡೂ ನಾಯಿಗಳಿಗೆ ಅಕ್ಷರಶಃ ಹುಚ್ಚನಂತೆ ಮಂಗ ಮಾಡಿತು ಬಾತುಕೋಳಿ; ನೋಡಿ ಫುಲ್ ಎಂಜಾಯ್ ನೀಡುವ ವಿಡಿಯೋ…

ಪ್ರಾಣಿ ಪ್ರಿಯರಿಗೆ ತುಂಬಾ ಇಷ್ಟವಾಗುವ ವಿಡಿಯೋ ಕಂಟೆಂಟ್ ಇಲ್ಲಿದೆ ಎಂದು ಹೇಳಬಹುದು. ಮಿತ್ರರೇ ಪ್ರಾಣಿಗಳಲ್ಲಿ ಅದರಲ್ಲೂ ನಾಯಿ ಮತ್ತು ಬೆಕ್ಕಿನ ವಿಡಿಯೋಗಳು ತುಂಬಾ ತಮಾಷೆಯಿಂದ ಕೂಡಿರುತ್ತವೆ. ಈಗ ಇಲ್ಲಿ ನೋಡಲಿರುವ ವಿಡಿಯೋ ಸಹ ತುಂಬಾ ತಮಾಷೆಯಿಂದಲೇ ಕೂಡಿದೆ.

ಈ ವಿಡಿಯೋದಲ್ಲಿ ಒಂದು ಪುಟ್ಟ ಕಾಲುವೆ ಕಂಡುಬರುತ್ತಿದೆ. ಕಾಲುವೆಯಲ್ಲಿ ಹರಿಯುತ್ತಿರುವ ನೀರಿನಲ್ಲಿ ಒಂದು ಜಬರ್ದಸ್ತ್ ಆಟ ನಡೆದಿದೆ. ಈ ಆಟ ನಿಜವಾಗಿಯೂ ನೋಡಲು ತುಂಬಾ ಇಂಟರೆಸ್ಟಿಂಗ್ ಆಗಿದೆ. ಈ ಆಟದಲ್ಲಿ ಮುಖ್ಯವಾಗಿ ಕಂಡು ಬರುವ ಆಟಗಾರರೆಂದರೆ ಒಂದು ಬಾತುಕೋಳಿ ಇನ್ನೆರಡು ನಾಯಿಗಳು. ಎರಡೂ ನಾಯಿಗಳು ಬಾತುಕೋಳಿಯನ್ನು ಹಿಡಿಯಲು ಹರಸಾಹಸ ಮಾಡುತ್ತಿವೆ. ಬಾತುಕೋಳಿ ಮಾತ್ರ ಈ ಆಟದ ಫುಲ್ ಮಜಾ ತೆಗೆದುಕೊಳ್ಳುತ್ತಾ ಎರಡೂ ನಾಯಿಗಳಿಂದ ಕ್ಷಣದಲ್ಲಿ ತಪ್ಪಿಸಿಕೊಳ್ಳುತ್ತ ಚೆನ್ನಾಗಿಯೇ ಮಂಗ ಮಾಡುತ್ತಿದೆ. ಅಕ್ಷರಶಃ ನಾಯಿಗಳೆರಡು, ಒಂದು ನೀರಿನಲ್ಲಿ ಇನ್ನೊಂದು ಬದಿಯ ದಿಬ್ಬದ ಮೇಲಿಂದ ಬಾತುಕೋಳಿಯನ್ನು ಹಿಡಿಯಲು ಸಾಕಷ್ಟು ಹರಸಾಹಸ ಮಾಡುತ್ತಾ ಓಡಾಡುತ್ತಿವೆ. ಆದರೆ ಬಾತುಕೋಳಿ ಮಾತ್ರ ಕ್ಷಣದಲ್ಲಿ ನಾಯಿಯಿಂದ ತಪ್ಪಿಸಿಕೊಳ್ಳುತ್ತಿದೆ. ಪ್ರಸ್ತುತ ವಿಡಿಯೋ ನೋಡಲು ತುಂಬಾ ಮುದ್ದಾಗಿದೆ. ಈ ಆಟ ತಿಳಿದುಕೊಂಡಷ್ಟು ಸರಳವಾಗಿಲ್ಲ ತುಂಬಾ ಕಠಿಣವಾಗಿದೆ ಎಂದು ಕ್ಯಾಪ್ಶನ್ ಬೇರೆ ನೀಡಲಾಗಿದೆ.

ವೀಡಿಯೋ ನೋಡಿ

ನಾಯಿ ಮತ್ತು ಬಾತುಕೋಳಿಯ ಸುಂದರ ಆಟದ ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಸೈಟ್ ಆದ ಇನ್ಸ್ಟಾಗ್ರಾಮ್ ನಲ್ಲಿ kaur_sandeep3553 ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಈ ವಿಡಿಯೋ ಇಲ್ಲಿಯವರೆಗೆ ಐದೂವರೆ ಲಕ್ಷ ಜನರು ನೋಡಿದ್ದಲ್ಲದೆ ಸುಮಾರು 30,000 ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.