Articles

ಶಾರೂಖ್ ಖಾನ್ ಮಗಳ ಮದುವೆಗೆ ಬಂತು ಪ್ರಪೋಸಲ್ : ಹುಡುಗನ ಸಂಬಳ ತಿಂಗಳಿಗೆ 1 ಲಕ್ಷಕ್ಕಿಂತ ಅಧಿಕ!

ಬಾಲಿವುಡ್ ಸಿನಿಮಾಗಳ ಮೂಲಕ ಅಲ್ಲಿ ಕಿಂಗ್ ಖಾನ್ ಎನ್ನುವ ಹೆಗ್ಗಳಿಕೆಯನ್ನು ಪಡೆದಿರುವ ನಟ ಶಾರುಖ್ ಖಾನ್. ಬಾಲಿವುಡ್ ನ ಸೂಪರ್ ಸ್ಟಾರ್ ನಟ ಎನಿಸಿಕೊಂಡಿರುವ ಶಾರೂಖ್ ಖಾನ್ ಅವರ ಮಗಳು ಸುಹಾನಾ ಖಾನ್ ಸೋಶಿಯಲ್ ಮೀಡಿಯಾ ಗಳಲ್ಲಿ ಸಾಕಷ್ಟು ಸಕ್ರಿಯವಾಗಿದ್ದಾರೆ. ಸುಹಾನಾ ಖಾನ್ ಕುರಿತಾದ ಒಂದಲ್ಲಾ ಒಂದು ವಿಷಯವು ಮಾಧ್ಯಮಗಳಲ್ಲಿ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ.

ಸುಹಾನಾ ಖಾನ್ ಇದುವರೆಗೂ ಬಾಲಿವುಡ್ ಸಿನಿಮಾಗಳಿಗೆ ಕಾಲಿಟ್ಟಿಲ್ಲ, ಆಕೆ ತನ್ನ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಸಿನಿಮಾದಲ್ಲಿ ನಟಿಸಿಲ್ಲವಾದರೂ ಕೂಡಾ ಬಾಲಿವುಡ್‌ ನಲ್ಲಿ ಸ್ಟಾರ್ ನಟಿಯರ ಹಾಗೆ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಆಗಾಗ ಸುದ್ದಿಗಳು ಹಾಗೂ ಚರ್ಚೆಗಳಿಗೆ ಕಾರಣವಾಗುತ್ತಲೇ ಇರುತ್ತಾರೆ.

ಸುಹಾನಾ ಖಾನ್ ಇತ್ತೀಚೆಗಷ್ಟೇ ತಮ್ಮ 21 ನೇ ವಯಸ್ಸಿನ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ಜನ್ಮದಿನದ ಆಚರಣೆಯ ಜೊತೆಗೆ ಸುಹಾನಾ ಖಾನ್ ಅವರಿಗೆ ಮದುವೆಯ ಪ್ರಪೋಸಲ್ ಒಂದು ಬಂದಿದೆ. ಹೌದು, ಸುಹಾನಾ ಖಾನ್ ಅವರ 21ನೇ ವರ್ಷದ ಜನ್ಮದಿನದಂದೇ ಅವರಿಗೆ ಮದುವೆಯ ಪ್ರಪೋಸಲ್ ಬಂದಿದೆ.

ಅಸಲಿಗೆ ನಡೆದ ವಿಷಯ ಏನೆಂದರೆ, ಮಗಳ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಗಳ ಸುಂದರವಾದ ಫೋಟೋವನ್ನು ಶೇರ್ ಮಾಡಿಕೊಂಡು, ತಮ್ಮ ಮಗಳಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಫೋಟೋ ಶೇರ್ ಮಾಡಿಕೊಂಡ ಗೌರಿ ಖಾನ್ ಅದರ ಜೊತೆಯಲ್ಲಿ, ಹುಟ್ಟು ಹಬ್ಬದ ಶುಭಾಶಯಗಳು, ಇಂದು, ನಾಳೆ ಹಾಗೂ ಎಂದೆಂದಿಗೂ ನೀನು ನಮ್ಮ ಪ್ರೀತಿ ಪಾತ್ರಳು ಎಂದು ಬರೆದುಕೊಂಡಿದ್ದು, ಆ ಮೂಲಕ ಮಗಳಿಗೆ ಜನ್ಮದಿನಕ್ಕೆ ವಿಶ್ ಮಾಡಿದ್ದಾರೆ. ಗೌರಿ ಖಾನ್ ಮಾಡಿದ ಪೋಸ್ಟಿಗೆ ಶಾರೂಖ್ ಅಭಿಮಾನಿಗಳು ಹಾಗೂ ನೆಟ್ಟಿಗರು ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸುಹಾನಾ ಖಾನ್ ಅವರ ಜನ್ಮದಿನಕ್ಕೆ ಕಾಮೆಂಟ್ ಗಳನ್ನು ಮಾಡುವ ಮೂಲಕ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.

ಹೀಗೆ ಕಾಮೆಂಟ್ ಮಾಡುವಾಗ ಒಬ್ಬ ಟ್ವಿಟರ್ ಬಳಕೆದಾರರು ಮಾಡಿದಂತಹ ಒಂದು ಕಾಮೆಂಟ್ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಟ್ವಿಟರ್ ಬಳಕೆದಾರನೊಬ್ಬ, ಗೌರಿ ಖಾನ್ ಅವರು ಮಾಡಿದ ಪೋಸ್ಟ್ ಗೆ ತನ್ನ ಕಾಮೆಂಟ್ ಮೂಲಕ ಪ್ರತಿಕ್ರಿಯೆ ನೀಡುತ್ತಾ, “ಗೌರಿ ಮೇಡಂ ಸುಹಾನಾ ಖಾನ್ – ನನ್ನ ಮದುವೆಯನ್ನು ಮಾಡಿಸಿ ನನ್ನ ತಿಂಗಳ ಸಂಬಳ ಒಂದು ಲಕ್ಷಕ್ಕಿಂತ ಅಧಿಕವಾಗಿದೆ” ಎಂದು ಹೇಳಿದ್ದಾನೆ.

ಟ್ವಿಟರ್ ಬಳಕೆದಾರನು ಮಾಡಿದ ಈ ಕಾಮೆಂಟ್ ಸೋಶಿಯಲ್ ಮೀಡಿಯಾ ಗಳಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ. ಆತನ ಕಾಮೆಂಟ್ ಗೆ ಉತ್ತರ ನೀಡಿದ ಅನ್ಯ ಬಳಕೆದಾರರು ಸುಹಾನ ಫೋಟೋ ನೋಡು, ಆಕೆಯು ಕೈಯಲ್ಲಿ ಹಿಡಿದಿರುವ ಬ್ಯಾಗ್ ನ ಬೆಲೆಯೇ ಮೂರು ಲಕ್ಷ ರೂಪಾಯಿಗಳು ಎಂದು ಹೇಳಿದ್ದಾರೆ.

ಸುಹಾನಾ ಖಾನ್ ಮೇ 22ರಂದು ತನ್ನ 21ನೇ ವರ್ಷದ ಜನ್ಮದಿನವನ್ನು ಆಚರಣೆ ಮಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರು ಸೋಶಿಯಲ್ ಮೀಡಿಯಾ ಗಳಲ್ಲಿ ತನ್ನದೊಂದು ಬಹಳ ಸುಂದರವಾದ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಇತ್ತೀಚಿಗಷ್ಟೇ ಸುಹಾನಾ ಖಾನ್ ವಿಡಿಯೋ ಒಂದು ಭರ್ಜರಿ ವೈರಲ್ ಆಗಿತ್ತು.

ಸುಹಾನ ಪ್ರಸ್ತುತ ನ್ಯೂಯಾರ್ಕಿನಲ್ಲಿ ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ಅವರು ಮುಂದೆ ಬಾಲಿವುಡ್ ಗೆ ಎಂಟ್ರಿ ನೀಡುವರೋ ಅಥವಾ ಸಿನಿಮಾ ರಂಗದಿಂದ ದೂರ ಉಳಿಯುವರೋ ಎನ್ನುವುದನ್ನು ಕಾದು ನೋಡಬೇಕಿದೆ.
-Team Infotrend

Leave a Comment

Your email address will not be published. Required fields are marked *