ಎಲ್ಲವನ್ನೂ ಬಿಟ್ಟು ಮೊದಲು ಈ ಆಮೆಯ ತಂಪು ತಂಪಾದ ಕೂಲ್ ಡ್ಯಾನ್ಸ್ ನೋಡಿಯೇ ಬಿಡಿ! ಸೆಕೆಯಲ್ಲಿ ನೀವು ಆಗುವಿರಿ ತಂಪು ತಂಪು…
ಪ್ರಾಣಿಗಳು ಸಹ ಕೆಲವೊಮ್ಮೆ ತುಂಬಾ ವಿಚಿತ್ರವಾಗಿ ವರ್ತಿಸುತ್ತವೆ. ಅವುಗಳ ಆ ವರ್ತನೆ ನೋಡಿದಾಗ ನಮಗೆ ತುಂಬಾನೇ ತಮಾಷೆ ಎನಿಸುತ್ತದೆ. ಪ್ರಾಣಿಗಳ ಎಷ್ಟೋ ವಿಡಿಯೋಗಳನ್ನು ನಾವು ಸೋಶಿಯಲ್ ಮೀಡಿಯಾದಲ್ಲಿ ಇಲ್ಲಿಯವರೆಗೆ ನೋಡಿ ಬಿದ್ದು ಬಿದ್ದು ನಕ್ಕಿದ್ದೇವೆ. ಸದ್ಯ ನಿಮಗಾಗಿ ಆಮೆಯು ಮಾಡಿದ ತುಂಬಾ ಸುಂದರವಾದ ಡ್ಯಾನ್ಸ್ ಒಂದನ್ನು ತಂದಿದ್ದೇವೆ, ಈ ಡ್ಯಾನ್ಸ್ ನೋಡಿ ನೀವು ಅಚ್ಚರಿ ಪಡಬಹುದು. ಏಕೆಂದರೆ ಅಷ್ಟೊಂದು ಸುಂದರವಾಗಿ ಆಮೆಯು ಕುಣಿದಿದೆ.
ಪ್ರಸ್ತುತ ವಿಡಿಯೋ ಒಂದು ಬಾತ್ರೂಮಿನಲ್ಲಿಯದಿದೆ. ಬಾತ್ರೂಮಿನಲ್ಲಿ ಇರುವ ನಳದ ಕೆಳಗೆ ಆಮೆಯೊಂದು ಬಿಸಿಲಿನ ಸೆಕೆಯಿಂದ ಪರಿಹಾರ ಕಂಡುಕೊಳ್ಳಲು ತಣ್ಣೀರಿನ ಸ್ನಾನ ಮಾಡುತ್ತಿದೆ. ಈ ಸಂದರ್ಭದಲ್ಲಿ ಆಮೆಯು ನಳದಿಂದ ಬೀಳುತ್ತಿರುವ ನೀರಿನ ಜೊತೆಗೆ ತನ್ನ ದೇಹವನ್ನು ಒಡ್ಡುತ್ತಾ ತುಂಬಾ ಸುಂದರವಾಗಿ ಸ್ಪಂದಿಸಿದೆ. ಆದರ ನೀರಿನಲ್ಲಿಯ ಒಡನಾಟ ಮತ್ತು ತುಂಟಾಟ ನೋಡುಗರಿಗೆ ತುಂಬಾ ತಮಾಷೆ ಎನಿಸುತ್ತಿದೆ. ಮೇಲಿನಿಂದ ಬೀಳುತ್ತಿರುವ ನೀರಿಗೆ ಆಮೆಯು ತನ್ನ ಹಿಂದಿನ ಭಾಗವನ್ನು ಹಾಗೂ ಬಾಲವನ್ನು ತುಂಬಾ ಸುಂದರವಾಗಿ ಹೊರಳಾಡಿಸುತ್ತಿದೆ. ನೋಡುಗರಿಗೆ ಈ ದೃಶ್ಯವು ಚಂದದ ಡ್ಯಾನ್ಸ್ ತರ ಕಂಡುಬರುತ್ತಿದೆ. ಆಮೆ ಮಾಡುತ್ತಿರುವ ಈ ಕುಣಿತ ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗಿ ಲೈಕ್ ಮಾಡುತ್ತಿದ್ದಾರೆ.
ವಿಡಿಯೋ ನೋಡಿ
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ predator.unity ಹೆಸರಿನಿಂದ ಶೇರ್ ಮಾಡಲಾಗಿದೆ.