Articles

ಚೇಳು ಕುಟುಕುವಾಗ ತನ್ನ ಕೊಂಡಿಯಿಂದ ವಿಷ ಹೇಗೆ ಬಿಡುತ್ತದೆ ಗೊತ್ತಾ??? ಅಬ್ಬಾ!! ಅತ್ಯಾಶ್ಚರ್ಯ ಎನಿಸುವ ವೀಡಿಯೋ..!

ಪೃಥ್ವಿಯ ಮೇಲೆ ಅನೇಕ ಪ್ರಕಾರದ ಜೀವಿಗಳು ನೋಡಲು ಸಿಗುತ್ತವೆ. ಇದರಲ್ಲಿ ಕೆಲವೊಂದು ವಿಷಕಾರಿಯಾಗಿರುತ್ತವೆ, ಇನ್ನೂ ಕೆಲವು ಸಾಧಾರಣ ಜೀವಿಗಳು ಆಗಿರುತ್ತವೆ. ನಿಸರ್ಗ ಎಲ್ಲ ಪ್ರಾಣಿಗಳಿಗೆ ತನ್ನ ಸಂರಕ್ಷಣೆಯನ್ನು ಮಾಡಿಕೊಳ್ಳಲು ಏನಾದರೂ ಒಂದು ವಿಶೇಷವಾದ ಅಸ್ತ್ರವನ್ನು ನೀಡಿದೆ.

ನಮಗೆ ವಿಷಕಾರಿ ಜೀವಿ ಎಂದ ಮೇಲೆ ತಟ್ಟನೆ ಕಣ್ಣ ಮುಂದೆ ನಿಲ್ಲುವ ಪ್ರಾಣಿ ಎಂದರೆ ಹಾವು ಮತ್ತು ಚೇಳು. ಚೇಳಿನ ಕಡಿತದಿಂದ ಎಷ್ಟೋ ಸಲ ಅಸಹ್ಯ ವೇದನೆಯಾಗುತ್ತದೆ. ಕೆಲವೊಂದು ಸಲ ಅದರಿಂದ ಮೃತ್ಯು ಸಹಿತ ಆಗುತ್ತದೆ. ಚೇಳು ಎಷ್ಟು ವೇಗದಿಂದ ಕುಟುಕುತ್ತದೆಯೋ ಅಷ್ಟೇ ವೇಗದಿಂದ ಅದರ ವಿಷಯ ದೇಹದಲ್ಲಿ ಪಸರಿಸುತ್ತದೆ. ಚೇಳು ತನ್ನ ವಿಷವನ್ನು ಯಾವ ರೀತಿಯಾಗಿ ಬಿಡುತ್ತದೆ ಎಂಬ ವಿಡಿಯೋ ಯಾವತ್ತಾದರೂ ನೋಡಿದ್ದೀರಾ? ಒಂದು ವೇಳೆ ನೋಡಿಲ್ಲವಾದರೆ ಇಲ್ಲಿ ನೋಡಿ…

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು ಕಪ್ಪು ಬಣ್ಣದ ಚೇಳಿನ ವಿಡಿಯೋ ತುಂಬಾ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಚೇಳು ತನ್ನ ವಿಷವನ್ನು ಕೊಂಡಿಯಿಂದ ಯಾವ ರೀತಿ ಹೊರಗೆ ಬಿಡುತ್ತದೆ ಎಂಬುದನ್ನು ನೋಡಬಹುದು. ಈ ವಿಡಿಯೋ ನೋಡಿದವರು ನಿಜಕ್ಕೂ ಗಾಬರಿಯಾಗಿದ್ದಾರೆ. ಚೇಳು ಕುಟುಕುವ ಮೊದಲು ಪೊಸಿಷನ್ ನಲ್ಲಿ ಬರುತ್ತದೆ. ತದನಂತರ ಕ್ಷಣಾರ್ಧದಲ್ಲಿ ವಿಷದ ಧಾರೆಯನ್ನು ಹರಿಸುತ್ತದೆ. ಇದನ್ನು ನೋಡಿ ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಿ

ಚೇಳಿನ ಈ ವಿಡಿಯೋ ಟ್ವಿಟರ್ನಲ್ಲಿ ಚಕ್ರವರ್ತಿ ಸೂಲಿಬೆಲೆ ಅವರು ಜುಲೈ 1 ರಂದು ಶೇರ್ ಮಾಡಿದ್ದಾನೆ. ಇಲ್ಲಿಯವರೆಗೆ ಈ ವಿಡಿಯೋವನ್ನು ಸಾವಿರಾರು ಜನರು ನೋಡಿದ್ದಾರೆ ಮತ್ತು ಸಾವಿರಾರು ಲೈಕ್ಸ್ ಗಳು ಸಹ ಬಂದಿವೆ.

Leave a Comment

Your email address will not be published. Required fields are marked *