ಏರ್ಪೋರ್ಟ್ ನಲ್ಲಿ ತಾಯಿಗೆ ಸ್ವಾಗತಿಸಲು ಬಂದ ಮಗನಿಗೆ ತಾಯಿಯೇ ಸ್ವಾಗತಿಸಿದಳು ಚಪ್ಪಲಿಯಿಂದ ; ನೋಡಿ ಈ ವೈರಲ್ ವಿಡಿಯೋ…
ಬಹುದಿನಗಳ ನಂತರ ತಾಯಿಯು ಮರಳಿ ಬಂದ ಖುಷಿಯಲ್ಲಿ ಮಗ ಏರ್ಪೋರ್ಟಿಗೆ ತನ್ನ ತಾಯಿಯನ್ನು ಸ್ವಾಗತಿಸಲು ಹೋದನು, ಆದರೆ ಆತನ ತಾಯಿಯೇ ಮಗನ ಸ್ವಾಗತ ಮಾಡಿದ ರೀತಿಯನ್ನು ನೋಡಿ ನಿಮಗೆ ನಗು ತಡೆಯಲಾಗುವುದಿಲ್ಲ. ಯಾಕೆಂದರೆ ಅಂಥ ಘಟನೆಯೇ ಈ ವಿಡಿಯೋದಲ್ಲಿ ನಿಮಗೆ ಕಾಣಸಿಗುವುದು.
ತಾಯಿ-ಮಗನ ಸಂಬಂಧ ತುಂಬಾ ಸೂಕ್ಷ್ಮವಾಗಿರುತ್ತದೆ. ಈ ಸಂಬಂಧವನ್ನು ಶಬ್ದಗಳಲ್ಲಿ ವ್ಯಕ್ತ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇದರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಎನ್ನಬಹುದು. ತಾಯಿ ಈ ಶಬ್ದದ ಮುಂದೆ ಉಳಿದ ಎಲ್ಲ ವಿಷಯಗಳು ಗೌಣವಾಗುತ್ತದೆ. ಅದ್ದರಿಂದಲೇ ಮಗನಿಗಾಗಿ ತಾಯಿಯು ಎಂಥದ್ದೇ ಸಂಕಟ ಬಂದರೂ ತನ್ನ ಜೀವವನ್ನು ಅಪಾಯದಲ್ಲಿ ಸಿಲುಕಿಸಲು ಹಿಂದೆ ಮುಂದೆ ನೋಡುವುದಿಲ್ಲ. ತನ್ನ ಮಗುವಿನ ಮೇಲೆ ತಾಯಿಯು ಮಾಡುವಷ್ಟು ಪ್ರೀತಿ, ವಾತ್ಸಲ್ಯ ಆಕೆ ಜಗತ್ತಿನ ಬೇರೆ ಯಾವ ವಸ್ತುವಿನ ಮೇಲೂ ಮಾಡುವುದಿಲ್ಲ.
ಆದರೆ ಇಂಥದ್ದೇ ತಾಯಿಯ ಚರ್ಚೆಯೊಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ವಿಡಿಯೋ ನೋಡಿದಾಗ ನಿಮಗೆ ನಗು ತಡೆಯುವುದು ಅಸಾಧ್ಯವಾಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಒಂದು ಏರ್ಪೋರ್ಟ್ನಲ್ಲಿಯದಿದೆ. ಮಗನೊಬ್ಬ ಏರ್ಪೋರ್ಟಿಗೆ ತನ್ನ ತಾಯಿಯನ್ನು ಕರೆದು ತರಲು ಹೋಗಿದ್ದಾನೆ. ಮಗನ ಒಂದು ಕೈಯಲ್ಲಿ ಹೂಗಳ ಗುಚ್ಚವಿರುವದು ಕಂಡುಬರುತ್ತಿದೆ ಮತ್ತು ಇನ್ನೊಂದು ಕೈಯಲ್ಲಿ ಬೋರ್ಡ್ ಇದೆ. ಬೋರ್ಡಿನ ಮೇಲೆ ‘ನಮಗೆ ನಿನ್ನ ತುಂಬಾ ನೆನಪು ಬರುತ್ತಿದೆ’, ಎಂದು ಬರೆಯಲಾಗಿದೆ. ವಿಡಿಯೋದಲ್ಲಿ ತಾಯಿಯು ಎದುರಿನಿಂದ ಬರುತ್ತಿರುವುದು ಕಾಣುತ್ತಿದೆ. ಅಷ್ಟರಲ್ಲೇ ಮುಂದಿನ ಇನ್ಸಿಡೆಂಟ್ ನೋಡಿದಾಗ ನೋಡುಗರು ಶಾಕ್ ಆಗುತ್ತಾರೆ. ಕಾರಣ ಅಲ್ಲಿ ನಡೆದ ಆಕಸ್ಮಿಕ ದೃಶ್ಯವನ್ನು ನೋಡಿ ಬೆರಗಾಗುತ್ತಾರೆ. ಆದರೆ ಘಟನೆಯ ಮಾಹಿತಿ ತಿಳಿದ ನಂತರ ಎಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಏರ್ಪೋರ್ಟಿನಲ್ಲಿ ತನ್ನ ಮಗ ಬಂದಿದ್ದನ್ನು ನೋಡಿ ತಾಯಿ ಖುಷಿಯಿಂದ ಅಪ್ಪಿಕೊಳ್ಳದೆ ಅಲ್ಲಿ ಬೇರೆಯೇ ನಡೆಯುತ್ತದೆ. ಯಾಕೆಂದರೆ ತಾಯಿಯು ತಕ್ಷಣ ತನ್ನ ಕಾಲಲ್ಲಿ ಚಪ್ಪಲಿಯನ್ನು ತೆಗೆದು ಮಗನಿಗೆ ಹೊಡೆಯಲು ಶುರುಮಾಡುತ್ತಾಳೆ. ಈ ದೃಶ್ಯ ನೋಡಿದ ಸುತ್ತಮುತ್ತಲಿನವರು ನಗಲು ಶುರು ಮಾಡುತ್ತಾರೆ. ಮಗ ತನ್ನ ಸ್ವಾಗತ ಮಾಡಲು ಬಂದಿದ್ದಾನೆ ಎಂಬ ವಿಷಯವನ್ನು ಮರೆತು ತಾನೇ ಮಗನ ಸ್ವಾಗತ ಮಾಡುತ್ತಾಳೆ. ವಿಡಿಯೋ ನೋಡಿದ ನಂತರ ತಾಯಿಯು ಆತನಿಗೆ ಚಪ್ಪಲಿಯಿಂದ ಯಾಕೆ ಹೊಡೆಯುತ್ತಿದ್ದಾಳೆ ಎಂಬ ಪ್ರಶ್ನೆ ಹುಟ್ಟುತ್ತದೆ. ಆದರೆ ಆತ ಸ್ವಂತ ಮಗನಿದ್ದಾನೆ ಎಂಬ ವಿಷಯ ತಿಳಿದಾಗ ಮಾತ್ರ ಎಲ್ಲರೂ ಒಂದೇ ಸಮನೆ ನಗಲು ಪ್ರಾರಂಭಿಸುತ್ತಾರೆ.
ವಿಡಿಯೋ ನೋಡಿ
ಮಿತ್ರರೇ, ತಾಯಿ-ಮಗನ ವಾತ್ಸಲ್ಯ ಮತ್ತು ಪ್ರೀತಿಯನ್ನು ತೋರುವ ಈ ವಿಡಿಯೋ ನೋಡಿ ನಕ್ಕು, ಶೇರ್ ಮಾಡಿ ಮತ್ತು ಇನ್ನೊಬ್ಬರಿಗೂ ನಗಿಸಿ….