Articles

ಮೊದಲು ಕಾರಿನ ಕಿಟಕಿ ಡಮಾರ್! ನಂತರ ಕಳ್ಳ ಒಳನುಗ್ಗಿ 5 ಲಕ್ಷ ₹ ಗಳ ಬ್ಯಾಗ್ ಜೊತೆಗೆ ಎಸ್ಕೇಪ್…ನೋಡಿ CCTV ವಿಡಿಯೋ!

ಮುಂಬಯಿ ಹತ್ತಿರದ ವ್ಯಾಪಾರಿ ಕೇಂದ್ರವಾದ ಉಲ್ಲಾಸ ನಗರದಲ್ಲಿ ನಡೆದ ಕಳ್ಳತನದ ಘಟನೆಯೊಂದು ವರದಿಯಾಗಿದೆ. ರಸ್ತೆಯ ಬದಿಗೆ ನಿಂತ ಕಾರಿನ ಕಿಟಕಿ ಒಡೆದು ಅದರಿಂದ 5 ಲಕ್ಷ ರೂಪಾಯಿಗಳಿದ್ದ ಬ್ಯಾಗ್ ತೆಗೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಪ್ರಸ್ತುತ ಘಟನೆಯು ಉಲ್ಲಾಸ ನಗರದ ಶಾಂತಿನಗರ ಪರಿಸರದಲ್ಲಿ ಘಟಿಸಿದೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಏನಿದು ಪ್ರಕರಣ?

ಶಾಂತಿನಗರ ಪರಿಸರದಲ್ಲಿ ರಾಜನಾರಾಯಣ ಯಾದವ್ ಇವರ ಸ್ಲೈಡಿಂಗ್ ಅಂಗಡಿ ಇದೆ. ರಾಜನಾರಾಯಣ ಯಾದವ ಇವರು ಕಳೆದ ಶುಕ್ರವಾರ ತಮ್ಮ ಅಂಗಡಿಯ ಮುಂದೆ ಕಾರನ್ನು ನಿಲ್ಲಿಸಿದ್ದರು. ಅದೇ ಕಾರಿನಲ್ಲಿ ಯಾದವ ಅವರು 5 ಲಕ್ಷ ರೂಪಾಯಿಗಳಿದ್ದ ಬ್ಯಾಗ್ ಇಟ್ಟಿದ್ದರು.

ಡ್ರೈವರ್ ಸೈಡಿನ ಕಿಟಿಕಿ ಒಡೆಯಲಾಯಿತು…

ಟು ವೀಲರ್ ಮೇಲೆ ಬಂದ ಇಬ್ಬರು ಕಳ್ಳರು ಕಾರಿನ ಕಿಟಕಿ ಒಡೆದು ಕಾರಿನಲ್ಲಿರುವ ಹಣ ತುಂಬಿದ ಬ್ಯಾಗನ್ನು ತೆಗೆದುಕೊಂಡು ಪರಾರಿಯಾದರು. ಇಬ್ಬರಲ್ಲಿ ಒಬ್ಬನು ಕೆಲಸಕ್ಕೆ ಸ್ವರೂಪ ನೀಡಿದರೆ ಇನ್ನೊಬ್ಬ ಬೈಕ್ ಆನ್ ಪೊಸಿಷನ್ ನಲ್ಲಿಟ್ಟು ಓಡಿಹೋಗುವ ತಯಾರಿಯಲ್ಲಿ ಬದಿಗೆ ನಿಂತಿದ್ದನು.

ಕಳ್ಳನು ಕಾರಿನ ಕಿಟಕಿಯನ್ನು ಒಡೆದು ಹಾಕಿದ ತಾನೇ ಒಳಗೆ ಸೇರಿ ಅದರಲ್ಲಿಯ 5 ಲಕ್ಷ ರೂಪಾಯಿಗಳಿಂದ ತುಂಬಿದ ಬ್ಯಾಗನ್ನು ತೆಗೆದುಕೊಂಡು ಬೈಕ್ ಮೇಲೆ ಪರಾರಿಯಾದರು. ತನ್ನ ಗಾಡಿ ಕಿಟಕಿಯ ಗಾಜು ಒಡೆದದ್ದು ಸ್ವಲ್ಪ ಸಮಯದ ನಂತರ ಕಾರು ಮಾಲಿಕನ ಗಮನಕ್ಕೆ ಬಂದಿತ್ತು.

ಸಿಸಿಟಿವಿ ಫುಟೇಜ್ ಆಧಾರದಿಂದ ಕಳ್ಳರ ಶೋಧ…

ಸಿಸಿಟಿವಿ ಫುಟೇಜ್ ಚೆಕ್ ಮಾಡಿದ ನಂತರ ಕಳ್ಳರು ಮಾಡಿದ ಈ ಕಳ್ಳತನ ಬಯಲಾಯಿತು. ಈ ಕಳ್ಳತನಕ್ಕೆ ಸಂಬಂಧಿಸಿದಂತೆ ಉಲ್ಲಾಸನಗರ ಪೊಲೀಸ್ ಠಾಣೆಯಲ್ಲಿ ಯಾದವ್ ಅವರು ಕೇಸು ದಾಖಲಿಸಿದ್ದಾರೆ. ಪೊಲೀಸರು ಸಿಸಿಟಿವಿ ಫುಟೇಜ್ ಸಹಾಯದಿಂದ ತನಿಖೆ ಶುರುಮಾಡಿದ್ದಾರೆ.

ನೋಡಿ ಈ ವಿಡಿಯೋ…

Leave a Comment

Your email address will not be published. Required fields are marked *