Articles

Viral Video: ಈ ಪುಟ್ಟ ಮಗು ಮೇಕೆಯ ಹಿಂಬದಿಗೆ ಕೊಟ್ಟನು ಒದೆ! ನಂತರ ಮೇಕೆ ಮರಳಿ ಕೊಟ್ಟಿದ್ದನ್ನು ಈ ಮಗು ಎಂದಿಗೂ ಮರೆಯಲಾರ…

ಸೋಶಿಯಲ್ ಮೀಡಿಯಾದಲ್ಲಿ ಎರಡು ಪುಟ್ಟ ಜೀವಿಗಳ ವಿಡಿಯೋ ಒಂದು ನೇಟಿಜನ್ಸ್ ಗಳಿಗೆ ತುಂಬಾ ಇಷ್ಟವಾಗುತ್ತಿದೆ. ಹೀಗಾಗಿ ಈ ತಮಾಷೆಯ ವಿಡಿಯೋ ತುಂಬಾ ಸಂಚಲನ ಮೂಡಿಸುತ್ತಿದೆ. ಸದ್ಯ ಇದು ಫೇಸ್ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಈ ಮೂರು ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದೆ. ಈ ವಿಡಿಯೋ ನೋಡಿದಾಗ ನಿಮಗೂ ಸಹ ಆಶ್ಚರ್ಯದ ಜೊತೆಗೆ ತಮಾಷೆಯೂ ಎನಿಸುವುದು. ಇಲ್ಲಿ ಪುಟ್ಟ ಮಗು ಮೇಕೆಗೆ ಕಿರುಕುಳ ಕೊಡುತ್ತಿದ್ದಾನೆ. ಕಿರುಕುಳವನ್ನು ಸಹಿಸಿಕೊಳ್ಳದ ಮೇಕೆಯ ಮರಿಯು ಆ ಪುಟ್ಟ ಮಗುವಿಗೆ ಚೆನ್ನಾಗಿಯೇ ಪಾಠ ಕಲಿಸಿದೆ. ಪುಟ್ಟ ಮಗು ಕಲಿತ ಈ ಪಾಠದಿಂದ ಇನ್ನು ಮುಂದೆ ಯಾವುದೇ ಪ್ರಾಣಿಗೆ ಕಿರುಕುಳ ನೀಡುವ ಮೊದಲು ನೂರು ಸಲ ಯೋಚಿಸುವನು.

ಒಂದು ಮೇಕೆಯ ಮರಿಗೆ ಹಗ್ಗದಿಂದ ಕಟ್ಟಲಾಗಿದೆ. ಆಗ ಪ್ಯಾಂಟ್ ಹಾಗೂ ಟೀಶರ್ಟ್ ಧರಿಸಿದ್ದ ಪುಟ್ಟ ಮಗು ಅಲ್ಲಿ ಬಂದು ಮೇಕೆ ಮರಿಗೆ ಹಿಂದಿನಿಂದ ಒದೆಯುತ್ತಾನೆ. ತನ್ನ ಜೊತೆಗೆ ನಡೆದ ಈ ಆಕಸ್ಮಿಕ ಪ್ರಸಂಗಕ್ಕೆ ಮೇಕೆಮರಿಯು ಕೋಪಿಸಿಕೊಂಡು ಸಿಟ್ಟಿನ ಭರದಲ್ಲಿ ಆ ಮಗುವಿಗೆ ಕೊಂಬುಗಳಿಂದ ಇರಿಯುತ್ತದೆ. ಇದರಿಂದ ಪುಟ್ಟ ಮಗುವು ತಕ್ಷಣ ಅಲ್ಲಿಯೇ ಕೆಳಗೆ ಬೀಳುತ್ತದೆ.

ನೋಡಿ ಈ ವಿಡಿಯೋ…

ತುಂಬಾ ತಮಾಷೆಯ ಈ ವಿಡಿಯೋವನ್ನು ನೇಟಿಜನ್ಸ್ ಗಳು ತುಂಬಾ ಇಷ್ಟಪಟ್ಟು ನೋಡಿ ನಗುತ್ತಿದ್ದಾರೆ. ಈ ಸುಂದರವಾದ ವಿಡಿಯೋ ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದಾರೆ. ಹಾಗೂ ಸಾವಿರಾರು ಜನರು ಈ ಪೋಸ್ಟಿಗೆ ಲೈಕ್ ಮಾಡಿದ್ದಾರೆ. ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ.

ಪ್ರಸ್ತುತ ವಿಡಿಯೋವನ್ನು najar_singh_1322 ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಯಾವುದೇ ನಿಷ್ಪಾಪ ಪ್ರಾಣಿಗಳಿಗೆ ಸುಮ್ಮನೆ ಸತಾಯಿಸಬಾರದೆಂಬ ಪಾಠವನ್ನು ಈ ವಿಡಿಯೋದಿಂದ ಕಲಿಯಬಹುದಾಗಿದೆ. ಪ್ರಾಣಿಗಳ ಜೊತೆಗೆ ನಾವು ಪ್ರೀತಿಯಿಂದ ನಡೆದುಕೊಂಡರೆ ಪ್ರಾಣಿಗಳು ಸಹ ನಮ್ಮ ಜೊತೆಗೆ ಪ್ರೀತಿಯಿಂದ ನಡೆದುಕೊಳ್ಳುತ್ತವೆ ಎಂಬುದು ತಿಳಿದು ಬರುತ್ತದೆ. ಆದ್ದರಿಂದ ಯಾವುದೇ ಪ್ರಾಣಿಗಳಿಗೆ ವಿನಾಕಾರಣ ನೋವು ನೀಡಬಾರದೆಂಬ ಕಲಿಕೆ ಮಕ್ಕಳಿಗೆ ಈಗಿನಿಂದಲೇ ನೀಡಬೇಕು.

Leave a Comment

Your email address will not be published. Required fields are marked *