Articles

ರಿಟೈರ್ಮೆಂಟ್ ದಿನವೇ ಮೇಲಾಧಿಕಾರಿಗೆ ಸಿಬ್ಬಂದಿ ವರ್ಗ ನೀಡಿತು ಚಪ್ಪಲಿ ಹಾರ! ಥ್ಯಾಂಕ್ಯೂ ಹೇಳಿದ ಮೇಲಾಧಿಕಾರಿ; ನೋಡಿ ವೀಡಿಯೋ

ಅಧಿಕಾರಿಗಳು ನಿವೃತ್ತರಾದಾಗ ಉಳಿದ ಸಹೋದ್ಯೋಗಿಗಳು ನಿವೃತ್ತರಾಗುವ ಅಧಿಕಾರಿಗಳಿಗೆ ಏನಾದರೂ ಒಂದು ಒಳ್ಳೆಯ ಗಿಫ್ಟ್ ನೀಡುವುದು ಪರಂಪರೆ. ಆದರೆ ಇಲ್ಲಿ ನಿವೃತ್ತರಾದ ಅಧಿಕಾರಿಗೆ ಸಿಬ್ಬಂದಿವರ್ಗವು ಚಪ್ಪಲಿ ಹಾರವನ್ನು ನೀಡಿರುವ ಘಟನೆ ವರದಿಯಾಗಿದೆ.

ತನ್ನ ಸಹೋದ್ಯೋಗಿಗಳ ಜೊತೆಗೆ ಸತತ ಕೆಟ್ಟದ್ದಾಗಿ ವರ್ತಿಸುವ ಮತ್ತು ಯಾವಾಗಲೂ ಅವಮಾನ ಮಾಡಿ ಕೇವಲ ಸ್ವಾರ್ಥ ಸಾಧಿಸುವ ಉದ್ದೇಶವನ್ನು ಹೊಂದಿದ ಅಧಿಕಾರಿಯೊಬ್ಬನಿಗೆ ತನ್ನ ಸಹೋದ್ಯೋಗಿಗಳ ರೋಷಕ್ಕೆ ಎದುರಾಗಬೇಕಾಯಿತು. ಯಾವಾಗ ಸಿಬ್ಬಂದಿವರ್ಗ ಅಧಿಕಾರಿಗೆ ಗಿಫ್ಟ್ ರೂಪದಲ್ಲಿ ಚಪ್ಪಲಿ ಹಾರ ನೀಡಿತು ಆಗ ನಿವೃತ್ತನಾಗುತ್ತಿರುವ ಈ ಅಧಿಕಾರಿಯ ಮುಂದೆ ಥ್ಯಾಂಕ್ಯೂ ಹೇಳುವ ಬದಲಾಗಿ ಬೇರೆ ಯಾವುದೇ ಆಪ್ಷನ್ ಇರಲಿಲ್ಲ.

ಏನಿದು ಪ್ರಕರಣ?

ಮಧ್ಯಪ್ರದೇಶದ ರಿವಾದಲ್ಲಿಯ ‘ಅವಧೇಶ್ ಪ್ರತಾಪ್ ಸಿಂಹ’ ವಿಶ್ವವಿದ್ಯಾಲಯದಲ್ಲಿ ಡೆಪ್ಯೂಟಿ ರಿಜಿಸ್ಟ್ರಾರ್ ಪದದ ಮೇಲಿಂದ ಲಾಲ್ ಸಾಹಬ್ ಸಿಂಗ್ ಹೆಸರಿನ ವ್ಯಕ್ತಿಯೊಬ್ಬರು ತಮ್ಮ ಸೇವೆಯಿಂದ ನಿವೃತ್ತರಾದರು. ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಅವರ ನಿವೃತ್ತಿಯ ಸಲುವಾಗಿಯೇ ಒಂದು ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಸೇವೆಯಲ್ಲಿರುವಾಗ ಸಹೋದ್ಯೋಗಿಗಳ ಜೊತೆಗೆ ಯಾವಾಗಲೂ ಕೆಟ್ಟದಾಗಿಯೇ ವರ್ತಿಸುವ ಹಾಗೂ ಸಿಬ್ಬಂದಿ ವರ್ಗದವರನ್ನು ಯಾವ ಮಾರ್ಗದಿಂದಾದರೂ ಹಾನಿಗೆ ಒಳಪಡಿಸುವ ಬಗ್ಗೆ ಸದಾ ತಿಕ್ಕಲು ವಿಚಾರಮಾಡುವ ಅಧಿಕಾರಿ ಎಂದೇ ಲಾಲ್ ಸಾಹಬ್ ಸಿಂಗ್ ಕುಖ್ಯಾತಿಯನ್ನು ಪಡೆದಿದ್ದರು. ಆಡಳಿತ ಮಂಡಳಿಯು ಇದಕ್ಕೂ ಮೊದಲು ನಿವೃತ್ತರಾಗಿರುವ ಮತ್ತು ಒಳ್ಳೆಯ ಸೇವೆಯನ್ನು ಸಲ್ಲಿಸಿದ ಯಾವುದೇ ಸಿಬ್ಬಂದಿಯ ರಿಟೈರ್ಮೆಂಟ್ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ. ಹೀಗಾಗಿ ಒಳ್ಳೆಯ ಅಧಿಕಾರಿಗಳ ಜೊತೆಗೆ ಕೆಟ್ಟ ವರ್ತನೆ ಹಾಗೂ ಕೆಟ್ಟ ಅಧಿಕಾರಿಗಳಿಗೆ ಸತ್ಕಾರ ಸಮಾರಂಭ ಮಾಡುತ್ತಿರುವ ಸಂಸ್ಥೆಯ ಧೋರಣೆಯ ಮೇಲೆ ಸಿಬ್ಬಂದಿ ವರ್ಗ ತುಂಬಾ ಮುನಿಸಿತ್ತು. ಇದೇ ಕಾರಣದಿಂದ ಸಿಬ್ಬಂದಿ ವರ್ಗದವರು ಈ ಅಧಿಕಾರಿಗೆ ಚಪ್ಪಲಿ ಹಾರವನ್ನು ನೀಡಿ ತಮ್ಮ ನಿಷೇಧವನ್ನು ವ್ಯರ್ಥಮಾಡುವ ಮಾರ್ಗ ಹುಡುಕಿದರು.

ಸಮಾರಂಭ ಮುಗಿದ ನಂತರ ಲಾಲ್ ಸಾಹಬ್ ಸಿಂಹ ಕುಲಪತಿಗೆ ಭೇಟಿಯಾಗಲು ಅವರ ಕ್ಯಾಬಿನ್ ನಲ್ಲಿ ಹೋದರು. ಆಗ ಸಿಬ್ಬಂದಿವರ್ಗ ಕ್ಯಾಬಿನ್ ಹೊರಗೆ ಅವರ ದಾರಿ ಕಾಯುತ್ತ ನಿಂತಿದ್ದರು. ಲಾಲ್ ಸಾಹಬ್ ಸಿಂಹ ಕ್ಯಾಬಿನ್ ನಿಂದ ಹೊರಗೆ ಬಂದಾಗ ಸಿಬ್ಬಂದಿವರ್ಗವು ಮುಂದೆ ಹೋಗಿ ಅವರಿಗೆ ಚಪ್ಪಲಿ ಹಾರವನ್ನು ಪ್ರದಾನ ಮಾಡಿದರು.

ವಿಡಿಯೋ ನೋಡಿ

ಆಗ ಲಾಲ್ ಸಾಹಬ್ ಸಿಂಹ ಆ ಚಪ್ಪಲಿ ಹಾರವನ್ನು ಸ್ವೀಕರಿಸುತ್ತಾ ಮರಳಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮೇಲಾಧಿಕಾರಿಯ ಈ ನಿರ್ಲಜ್ಜತನವನ್ನು ನೋಡಿ ಸಿಬ್ಬಂದಿ ವರ್ಗ ಮತ್ತಷ್ಟು ಕೋಪಗೊಂಡು ಅವರ ವಿರುದ್ಧ ಘೋಷಣೆಗಳನ್ನು ನೀಡಲು ಪ್ರಾರಂಭಿಸಿದರು. ತನ್ನ ವಿರುದ್ಧ ಘೋಷಣೆ ನೀಡುತ್ತಿರುವುದನ್ನು ಕಂಡು ನಿವೃತ್ ಅಧಿಕಾರಿ ಲಾಲ್ ಸಾಹಬ್ ಸಿಂಹ ಅವರ ಕಡೆ ಬೆನ್ನು ಮಾಡಿ ಅಲ್ಲಿಂದ ಹೊರಟು ಹೋದರು. ಸಿಬ್ಬಂದಿವರ್ಗದ ಜೊತೆಗೆ ಕೆಟ್ಟದಾಗಿ ನಡೆಯುವವರ ಜೊತೆಗೆ ಇನ್ನು ಮುಂದೆ ಇದೇ ರೀತಿ ವರ್ತಿಸಲಾಗುವುದು ಎಂಬ ನಿರ್ಧಾರ ಅಲ್ಲಿಯ ಸಿಬ್ಬಂದಿ ವರ್ಗ ತೆಗೆದುಕೊಂಡಂತೆ ಕಾಣುತ್ತದೆ.

Leave a Comment

Your email address will not be published. Required fields are marked *