ಏಳೆಂಟು ತಿಂಗಳ ಮಗುವಿನ ಬೀಚ್ ನಲ್ಲಿಯ ಚೆಲ್ಲಾಟ; ನೀರು ಹೆಚ್ಚಾದಂತೆ ಮುಖದ ಮೇಲಿನ ಭಾವಗಳು ಬದಲಾದ ರೀತಿ ನೋಡಿ…
ಪುಟ್ಟ ಮಕ್ಕಳ ಆಟ ಚೆಂದ. ಮಕ್ಕಳು ದೇವರ ಕೈತೋಟದಲ್ಲಿಯ ಹೂಗಳಿದ್ದಂತೆ. ಅಷ್ಟೊಂದು ಪವಿತ್ರ, ಮುಗ್ಧ ಸೌಮ್ಯ ಕೋಮಲಾಗಿರುತ್ತವೆ. ಮಕ್ಕಳ ಆಟ ದೇವರಿಗೂ ಅರ್ಥವಾಗುವುದಿಲ್ಲವಂತೆ. ಅಷ್ಟೊಂದು ವಿಶೇಷವಾದ ಆಟಗಳನ್ನು ಈ ಮಕ್ಕಳು ತಮ್ಮಷ್ಟಕ್ಕೆ ತಾವೇ ಆಡಿಕೊಂಡಿರುತ್ತವೆ. ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಅನೇಕ ರೀತಿಯ ವಿಡಿಯೋಗಳು ನೋಡಲು ಸಿಗುತ್ತವೆ. ಅವುಗಳಲ್ಲಿ ಕೆಲವು ವೀಡಿಯೊಗಳು ನೋಡುಗರ ಮನಸ್ಸನ್ನೇ ಸೋರೆಗೊಳ್ಳುತ್ತವೆ. ಸದ್ಯ ಏಳೆಂಟು ತಿಂಗಳ ಮುಗ್ಧ ಮಗುವಿನ ಒಂದು ವಿಶೇಷ ವಿಡಿಯೋ ಇಂಟರ್ನೆಟ್ ನಲ್ಲಿ ನೋಡಲು ಸಿಗುತ್ತಿದೆ, ಬನ್ನಿ ನೋಡೋಣ.
ಪ್ರಸ್ತುತ ವಿಡಿಯೋದಲ್ಲಿ ಏಳೆಂಟು ತಿಂಗಳ ಮಗುವೊಂದು ಬೀಚ್ ನಲ್ಲಿ ಬಿಂದಾಸ್ ಆಗಿ ಕುಳಿತು ಸಖತ್ ಮಜಾ ತೆಗೆದುಕೊಳ್ಳುತ್ತಿದೆ. ಈ ವಿಡಿಯೋ ನೋಡಿದವರು ಯಾರೇ ಆಗಲಿ ಫುಲ್ ಫ್ರೆಶ್ ಆಗುತ್ತಾರೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ದೃಶ್ಯದಲ್ಲಿ ಮಗು ಬೀಚ್ ನಲ್ಲಿ ಬರುವ ತುಂಬಾ ಸೌಮ್ಯ ತೆರೆಗಳ ಜೊತೆಗೆ ಆಟ ಆಡುತ್ತಿದ್ದಾನೆ. ನಂತರ ಕ್ಷಣ ಕ್ಷಣಕ್ಕೆ ನೀರು ಹೆಚ್ಚಾಗುತ್ತಾ ಹೋಗುತ್ತದೆ. ನೀರು ಹೆಚ್ಚಾಗುತ್ತ ಹೋದಂತೆ ಮಗುವಿನ ಮುಖದ ಮೇಲಿನ ಭಾವನೆಗಳು ಸಹ ಕ್ಷಣ ಕ್ಷಣಕ್ಕೆ ಬದಲಾಗುತ್ತಾ ಹೋಗುತ್ತಿರುವದು ಕಂಡುಬರುತ್ತದೆ. ಮೊದಲು ಮಗು ತನ್ನ ಕಾಲುಗಳ ಹತ್ತಿರ ಆಡುತ್ತಿರುವ ಸೌಮ್ಯ ತೆರೆಗಳ ಮಜಾ ತೆಗೆದುಕೊಳ್ಳುತ್ತ ಖುಷಿಯಲ್ಲಿ ಕುಳಿತಿರುತ್ತದೆ. ತದನಂತರ ನೀರು ಹೆಚ್ಚಾದಂತೆ ಮಗುವಿನ ಮುಖದಲ್ಲಿ ಬದಲಾವಣೆ ಕಂಡು ಬರಲು ಶುರುವಾಗುತ್ತದೆ. ಮಗುವಿನ ಮುಖದ ಮೇಲೆ ಬದಲಾಗುತ್ತಿರುವ ಈ ಭಾವನೆಗಳನ್ನು ನೋಡಲು ತುಂಬಾ ಇಷ್ಟವಾಗುತ್ತದೆ. ನೀರು ಹೆಚ್ಚಾಗಿ ಯಾವಾಗ ಹೊಟ್ಟೆಗೆ ಮತ್ತು ಎದೆಗೆ ಬಂದು ತಟ್ಟಲು ಶುರುಮಾಡುತ್ತದೆ ಆಗ ಮಾತ್ರ ಆಡುತ್ತಿರುವ ಮಗು ಸಂಪೂರ್ಣವಾಗಿ ಬದಲಾಗಿ ಅಳಲು ಶುರು ಮಾಡುತ್ತದೆ. ಮಗುವಿನ ಹಠಾತ್ ಬದಲಾದ ಈ ಭಾವನೆ ಎಂಥ ವ್ಯಕ್ತಿಗೂ ತನ್ನೆಡೆಗೆ ಸೆಳೆಯುತ್ತದೆ.
ನೋಡಿ ಈ ವಿಡಿಯೋ…
View this post on Instagram
ಈ ಮುದ್ದಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ baby_retoboy ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು ಪ್ರಸ್ತುತ ವಿಡಿಯೋ 4 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 1 ಲಕ್ಷ 40 ಸಾವಿರಕ್ಕೂ ಮೇಲ್ಪಟ್ಟು ಲೈಕ್ಸ್ ಗಳನ್ನು ಹೊಂದಿದೆ.