Articles

ಕೊರೋನ ಸಂಕಷ್ಟ : ಸರಕಾರಿ ನೌಕರರ ಐದು ದಿನದ ವೇತನ ಕಡಿತ!?

ಕಳೆದ ಸಂಪುಟ ಸಭೆಯಲ್ಲಿಯೇ ಸರಕಾರಿ ನೌಕರರ ವೇತನ ಕಡಿತದ ಸಂಬಂಧ ಚರ್ಚೆಯಾಗಿದೆ. ಆಗ ಕೇವಲ ಶಾಸಕರು – ಸಚಿವರ ಸಂಬಳ ಮಾತ್ರ ಕಡಿತ ಮಾಡಲಾಯಿತು. ಸರಕಾರಿ ನೌಕರರ ವೇತನ ಕಡಿತದ ಬಗ್ಗೆ ನೌಕರರ ಸಂಘದ ಮುಖಂಡರ ಜೊತೆ ಚರ್ಚಿಸುವ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಆಗ ಮಾಧ್ಯಮಗಳಲ್ಲಿ ಬಂದ ಒಂದು ತಿಂಗಳ ವೇತನ ಕಡಿತದ ಸುದ್ದಿ ಸುಳ್ಳಾಗಿತ್ತು.

ಹಾಗೆಯೇ ಎಷ್ಟು ದಿನದ ವೇತನ ಕಡಿತ ಮಾಡಬಹುದು ಎಂಬುದನ್ನು ನಿರ್ಧರಿಸಲು ನೌಕರರಿಗೇ ಬಿಡಲಾಯಿತು. ದೇಶ ಹಾಗೂ ರಾಜ್ಯ ಸಂಕಷ್ಟದಲ್ಲಿ ಇರುವಾಗ ನೌಕರರು ವೇತನ ಬಿಟ್ಟು ಕೊಡುತ್ತಾರೆ ಎಂಬುದು ಎಲ್ಲರ ನಂಬಿಕೆ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೂಡ ನೌಕರರು ಒಂದು ದಿನದ ವೇತನ ಅಂದರೆ ಸುಮಾರು 200 ಕೋಟಿ ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಟ್ಟಿದ್ದರು.

ಅದೇ ಥರ ಈ ಸಲ ಕೂಡ ನೌಕರರು ಸರಕಾರಕ್ಕೆ ಸಹಾಯ ಮಾಡಲು ಸಿದ್ದರಿದ್ದಾರಾದರೂ ತೀರ ತಿಂಗಳುಗಟ್ಟಲೇ ಕಡಿತ ಮಾಡುವುದನ್ನು ಯಾರೂ ಒಪ್ಪುವುದಿಲ್ಲ. ಮಾಡಿರುವ ಸಾಲಗಳಿಗೆ ಕಂತು ಕಟ್ಟುವುದಕ್ಕೂ ಅವರಿಗೆ ದುಡ್ಡಿಲ್ಲದಾಗುತ್ತದೆ. ಹೀಗಾಗಿ ಒಂದು ಅಥವಾ ಎರಡು ದಿನದ ವೇತನ ಕೊಡಬಹುದು ಎನ್ನಲಾಗುತ್ತಿತ್ತು.

ಈಗ ಇವತ್ತು ಐದು ದಿನದ ವೇತನ ಬಿಟ್ಟು ಕೊಡುತ್ತಾರೆ ಎಂಬ ಸುದ್ದಿ ಹರಡಿದೆ. ಅಂದರೆ ಸುಮಾರು ಸಾವಿರ ಕೋಟಿ ಹಣವನ್ನು ನೌಕರರು ಪರಿಹಾರ ನಿಧಿಗೆ ನೀಡುವ ಸಂಬವ ಇದೆ ಎನ್ನಲಾಗುತ್ತಿದೆ. ಆದರೆ ಇದು ಖಚಿತವಾಗಿಲ್ಲ. ಎಷ್ಟೊ ಇಲಾಖೆಯ ನೌಕರರು ಕೂಡ ಕೊರೋನ ವಾರಿಯರ್ ಹಾಗೆ ಕೆಲಸ ಮಾಡುತ್ತಿದ್ದಾರೆ. ಹೀಗಿದ್ದಾಗ ಅವರ ವೇತನ ಕೇಳುವುದು ತಪ್ಪಾಗುತ್ತದೆ.

ಅದೂ ಅಲ್ಲದೇ ಡಿ.ಎ ಕೂಡ ಕೊಟ್ಟಿಲ್ಲ, ಅಲ್ಲಿಯೇ ಸರಕಾರಕ್ಕೆ ನೂರಾರು ಕೋಟಿ ಉಳಿತಾಯವಾಗಿದೆ. ಈಗ ಬೇಕಿದ್ದರೆ ಡಿಎ ಕೊಟ್ಟು ವೇತನ ಕಡಿತ ಮಾಡಲಿ ಎಂಬುದು ಹಲವು ನೌಕರರ ಅನಿಸಿಕೆ. ಚೆಂಡು ಈಗ ಸರಕಾರಿ ನೌಕರರ ಸಂಘದ ಅಂಗಳದಲ್ಲಿದ್ದು ಅವರೇ ಎಷ್ಟು ಕೊಡಬೇಕು ಎಂಬ ನಿರ್ಧಾರ ತಗೆದುಕೊಳ್ಳಲಿದ್ದಾರೆ.
-Team Infotrend

Leave a Comment

Your email address will not be published. Required fields are marked *