ಒಂಟಿ ಜಿರಾಫೆಗೆ ಬೇಟೆಯಾಡಲು ಬಂದ 6 ಸಿಂಹಗಳು! ಮುಂದಿನ ದೃಶ್ಯ ನಿಮ್ಮ ಊಹೆಗೆ ಸಂಪೂರ್ಣ ವಿರುದ್ಧವಾಗಿದೆ; ನೋಡಿ ಈ ರೋಚಕ ವಿಡಿಯೋ…
ಬರೀ ಒಂದೇ ಒಂದು ಸಿಂಹ ಎದುರಿಗೆ ಬಂದರೆ ಪ್ರಾಣಿಗಳು ಚೆಲ್ಲಾಪಿಲ್ಲಿಯಾಗಿ, ದಿಕ್ಕೆಟ್ಟು ದಾರಿ ಸಿಕ್ಕ ಕಡೆಗೆ ಕಾಡಿನಲ್ಲಿ ಓಡಿಹೋಗಿ ತಲೆಮರೆಸಿಕೊಳ್ಳಲು ನೋಡುತ್ತವೆ. ಇನ್ನು ಅರ್ಧ ಡಜನ್ ಸಿಂಹಗಳು ಕೂಡಿ ಒಂದೇ ಒಂದು ಪ್ರಾಣಿಯ ಮೇಲೆ ಅಟ್ಯಾಕ್ ಮಾಡುವಾಗ ಆ ದೃಶ್ಯ ಹೇಗಿರಬಹುದು ಊಹಿಸಿ. ಅಲ್ಲಿ ಎಂತಹದೇ ಬಲಾಢ್ಯ ಪ್ರಾಣಿ ಇದ್ದರೂ ನೋಡು ನೋಡುವುದರಲ್ಲಿ ಅಪ್ಪಚ್ಚಿಯಾಗುವುದು ನಿಶ್ಚಿತ.
ಸೋಶಿಯಲ್ ಮೀಡಿಯಾದಲ್ಲಿ ಸಿಂಹ ಮತ್ತು ಜಿರಾಫೆಯ ವಿಡಿಯೋ ಒಂದು ಸಂಚಲನ ಮೂಡಿಸಿದೆ. ಪ್ರಸ್ತುತ ವಿಡಿಯೋದಲ್ಲಿ ಏಕಾಂಗಿಯಾಗಿ ಕಂಡ ಜಿರಾಫೆಯ ಮೇಲೆ ಅರ್ಧ ಡಜನ್ ಸಿಂಹಗಳ ದಂಡೇ ಅಟ್ಯಾಕ್ ಮಾಡಿವೆ.
ಹಚ್ಚಹಸುರಿನಿಂದ ಕೂಡಿದ ಕಾನನದ ಈ ವನಸಿರಿಯಲ್ಲಿ ಸಿಂಹ ಮತ್ತು ಜಿರಾಫೆಯ ನಡುವೆ ಬದುಕಲು ಹೋರಾಟ ನಡೆದಿದೆ. ಬಲಾಢ್ಯವಾದ ಜಿರಾಫೆಯನ್ನು ಹೇಗಾದರೂ ಬೇಟೆಯಾಡಿ ತಿಂದು ತೇಗಬೇಕೆಂಬ ಛಲದಿಂದ ಆರು ಸಿಂಹಗಳು ಕೂಡಿ ಸ್ಕೆಚ್ ಹಾಕುತ್ತಿವೆ. ಆದರೆ ದೈತ್ಯಾಕಾರದ ಜಿರಾಫೆಯು ಸಿಂಹಗಳ ಈ ಪ್ಲಾನನ್ನು ಬುಡಮೇಲು ಮಾಡುವ ಆತ್ಮವಿಶ್ವಾಸ ಹೊಂದಿದ ರೀತಿಯಲ್ಲಿ ಕಂಡು ಬರುತ್ತಿದೆ. ಸಿಂಹಗಳು ಒಂದರ ನಂತರ ಒಂದು ಮುಂದಿನಿಂದ, ಹಿಂದಿನಿಂದ ಜಿರಾಫೆಯ ಮೇಲೆ ಜಿಗಿದು ಅದನ್ನು ಹೇಗಾದರೂ ಮಾಡಿ ಕೆಳಗೆ ಕೆಡವಲು ಶತ ಪ್ರಯತ್ನ ಮಾಡುತ್ತಿವೆ. ಆದರೆ ಜಿರಾಫೆಯ ಶಕ್ತಿ ಮತ್ತು ಶಸ್ತ್ರ ಅದರ ಬಲಶಾಲಿಯಾದ ಕಾಲುಗಳಲ್ಲಿ ಇರುತ್ತದೆ. ಜಿರಾಫೆಯ ಕಾಲಿನ ಕಿಕ್ ರುಚಿ ನೋಡಿದ ಪ್ರಾಣಿ ಯಾವುದೇ ಇರಲಿ ಮತ್ತೊಮ್ಮೆ ಎಂದಿಗೂ ಅದರ ಕಾಲಿನ ಕಡೆಗೆ ಅಪ್ಪಿತಪ್ಪಿಯೂ ಹಾಯುವುದಿಲ್ಲ. ವೀಡಿಯೋ ಮುಗಿಯುವವರೆಗೂ ಸಿಂಹಗಳಿಗೆ ಜಿರಾಫೆಯ ಬೇಟೆಯಾಡುವ ಅವಕಾಶ ಸಿಗುವುದೇ ಇಲ್ಲ. ಸಿಂಹಗಳು ಜಿರಾಫೆಯ ಸುತ್ತಲೂ ಮುತ್ತಿಗೆ ಹಾಕಿ ಬೇಟೆ ಯಾಡಲು ಪ್ರಯತ್ನಿಸಿದರೂ ಜಿರಾಫೆ ಮಾತ್ರ ಸ್ವಲ್ಪವೂ ಎದೆಗುಂದದೆ, ಧೈರ್ಯದಿಂದ 6 ಸಿಂಹಗಳ ಮಧ್ಯ ನಿಂತು ಹೋರಾಟಕ್ಕೆ ಸೆಡ್ಡು ಹೊಡೆದಿದೆ.
ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 50 ಲಕ್ಷ ಜನರು ವೀಕ್ಷಿಸಿದ್ದಾರೆ. ಅರ್ಧ ಡಜನ್ ಸಿಂಹಗಳಿಗೆ ಬಲಶಾಲಿಯಾದ ಜಿರಾಫೆ ಸ್ವಲ್ಪವೂ ಬಗ್ಗದೆ, ಕುಗ್ಗದೆ ತನ್ನ ಕಾಲ್ಬಲದಿಂದ ಸರಿಯಾಗಿ ಉತ್ತರ ನೀಡುತ್ತಿದೆ. ಒಂದೂವರೆ ನಿಮಿಷದ ಈ ವಿಡಿಯೋದಲ್ಲಿ ಆರು ಸಿಂಹಗಳು ಕೂಡಿ ಒಂದು ಜಿರಾಫೆಗೆ ಏನು ಮಾಡಲು ಸಾಧ್ಯವಾಗಿಲ್ಲ.
ಕಾಡು ಪ್ರಾಣಿಗಳಾದ ಸಿಂಹ, ಹುಲಿ, ಚಿರತೆಗಳು ಜಿಂಕೆ ಹಾಗೂ ತತ್ಸಮ ಪ್ರಾಣಿಗಳನ್ನು ಸಹಜವಾಗಿ ಬೇಟೆಯಾಡುತ್ತವೆ. ಆದರೆ ಜಿರಾಫೆಯಂತಹ ಪ್ರಾಣಿಯ ಜೊತೆಗೆ ಹೆಚ್ಚಾಗಿ ಬೇಟೆಯಾಡುವುದು ಕಂಡುಬರುವುದಿಲ್ಲ. ಕಾರಣ ಬೇಟೆಯಾಡುವ ಯಾವುದೇ ಪ್ರಾಣಿ ಮೊದಲು ಬೇಟೆಯ ಕುತ್ತಿಗೆಯನ್ನು ಹಿಡಿಯಲು ನೋಡುತ್ತವೆ. ಆದರೆ ಜಿರಾಫೆಯ ಸಂದರ್ಭದಲ್ಲಿ ಇದು ಅಸಾಧ್ಯವಾಗುತ್ತದೆ. ಇದೇ ಕಾರಣದಿಂದ ಆರು ಸಿಂಹಗಳು ಕೂಡಿದರೂ ಒಂದು ಜಿರಾಫೆಯ ಬೇಟೆಯಾಡಲು ಸಾಧ್ಯವಾಗಲಿಲ್ಲ. ವಿಡಿಯೋ ನೋಡಿದ ನೇಟಿಜನ್ಸ್ ಗಳು ತಮ್ಮ ಪ್ರತಿಕ್ರಿಯೆಯಲ್ಲಿ ಜಿರಾಫೆಯ ಹೋರಾಟವನ್ನು ಶ್ಲಾಘಿಸಿದ್ದಾರೆ. ಈ ವಿಡಿಯೋವನ್ನು wildlife stories ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ಮತ್ತು ‘ಸ್ಟ್ರಾಂಗ್ ಜಿರಾಫ್’ ಎಂಬ ಕ್ಯಾಪ್ಷನ್ ನೀಡಿದ್ದಾರೆ.
ವಿಡಿಯೋ ನೋಡಿ
View this post on Instagram