ಒಂದು ಕಾಲದಲ್ಲಿ ವಿಶ್ವದ 6ನೇ ಶ್ರೀಮಂತ ವ್ಯಕ್ತಿಯಾಗಿದ್ದರು ಅನಿಲ್ ಅಂಬಾನಿ, ಇಂದು ಈ ಪರಿಸ್ಥಿತಿ ಬಂದಿದೆ!

ದೇಶದ ಹೆಸರಾಂತ ಉದ್ಯೋಗಪತಿ ಅನಿಲ ಅಂಬಾನಿಯವರ ಜನ್ಮದಿನ 4 ಜೂನ್ 1959. ಇಡೀ ಜಗತ್ತಿನಲ್ಲಿಯೇ ಭಾರತದ ಸುಪ್ರಸಿದ್ಧ ಬಿಜಿನೆಸ್ ಮನ್ ರಲ್ಲಿ ಶಾಮೀಲಾದ ರಿಲಾಯನ್ಸ್ ಗ್ರೂಪಿನ ಅಧ್ಯಕ್ಷರಾಗಿದ್ದಾರೆ. ತನ್ನ ಸಹೋದರ ಮುಕೇಶ್ ಅಂಬಾನಿಯಿಂದ ಬೇರೆಯಾದ ನಂತರ ಅನಿಲ್ ಅಂಬಾನಿಯವರ ಜೀವನ ಕಳೆಗುಂದಿತು. ಈ ಲೇಖನದಲ್ಲಿ ಅನಿಲ್ ಅಂಬಾನಿಯವರ ಜೀವನದ ವಿಶೇಷತೆಗಳ ಬಗ್ಗೆ ತಿಳಿಯುವಾ.

2008 ರಲ್ಲಿ ವಿಶ್ವದ ಆರನೇ ಶ್ರೀಮಂತರಲ್ಲಿ ಎಣಿಕೆಯಾದ ವ್ಯಕ್ತಿ ಈಗ ದೀನನಾಗಿದ್ದಾನೆ ಎಂದರೆ ಯಾರಿಗೂ ವಿಶ್ವಾಸವೆನಿಸುವದಿಲ್ಲ. ಓದು ಬರಹದಲ್ಲಿ ಯಾವತ್ತೂ ಮಂದೆ ಇದ್ದ ಅಂಬಾನಿಯವರ ಮುಂದೆ ಒಂದು ಸಮಯ ಹೀಗೂ ಬಂದಿತು, ಅನಿಲ್ ಅವರ ಕಂಪನಿಯು ಸದಾ ಹಾನಿ ಅನುಭವಿಸಿದ ಕಾರಣ ರಿಲಾಯನ್ಸ್ ಕಮ್ಯುನಿಕೇಶನ್ ದ ಮಹತ್ವಪೂರ್ಣವಾದ ಸ್ಥಾನವನ್ನು ತ್ಯಜಿಸಬೇಕಾಗಿ ಬಂತು.

ಅನಿಲ್ ಅವರು ಅಮೆರಿಕೆಯಲ್ಲಿ ಎಂ. ಬಿ. ಎ. ಪದವಿ ಮಾಡಿದ್ದಾರೆ. ಇದರ ನಂತರ ಅನಿಲ್ ಅಂಬಾನಿಯವರು 1983 ರಲ್ಲಿ ಕೋ.ಚೀಫ್. ಆಫೀಸರ್ ರೂಪದಲ್ಲಿ ರಿಲಾಯನ್ಸ್ ನಲ್ಲಿ ಕೆಲಸ ಶುರು ಮಾಡಿದರು. ಆ ಸಮಯದಲ್ಲಿ ಅನಿಲ್ ಅವರ ವಯಸ್ಸು ಬರೀ 24 ಇತ್ತು.

ಅನಿಲ್ ಅವರು ಹಾಯ್ ಪ್ರೋಫಾಯಿಲ್ ಲೈಫ್ ಸ್ಟೈಲ್, ಮತ್ತು ಆಧುನಿಕ ರೀತಿ ನೀತಿಗಳಲ್ಲಿ ವಿಶ್ವಾಸವಿಡುತ್ತಾರೆ. ದೇಶದ ಕ್ಯಾಪಿಟಲ್ ಮಾರ್ಕೆಟ್ ದ ಮೊದಲ ಶ್ರೇಯ ಅನಿಲ್ ಅವರಿಗೆ ಸಲ್ಲುತ್ತದೆ. ಅನಿಲ್ ಅಂಬಾನಿಯವರು ತಮ್ಮ ಫಿಟ್ನೆಸ್ ಬಗ್ಗೆ ಯಾವತ್ತೂ ಬಹಳ ಕಾಳಜಿ ತೆಗೆದುಕೊಳ್ಳುವವರಾಗಿದ್ದಾರೆ. ಅನಿಲ್ ಅಂಬಾನಿಯವರು ಸಹಾರಾ ಗ್ರೂಪ್, ಅಮಿತಾಭ್, ಮುಲಾಯಮ್ ಹಾಗೂ ಅಮರ್ ಸಿಂಹ ರಂತಹ ವ್ಯಕ್ತಿಗಳ ನಿಕಟವರ್ತಿಯರಾಗಿದ್ದಾರೆ.

ಒಂದು ಸಮಯದಲ್ಲಿ ಬಾಲಿವುಡ್ ನ ಸುಂದರ ಮತ್ತು ದಿಗ್ಗಜ ನಟಿಯರ ಪಟ್ಟಿಯಲ್ಲಿದ್ದ ಟೀನಾ ಮುನಿಮ್ ಅಲಿಯಾಸ್ ಟೀನಾ ಅಂಬಾನಿಯವರ ಜೊತೆಗೆ ಇವರ ಪ್ರೀತಿ ಮತ್ತು ಮದುವೆ ಮಾಧ್ಯಮಗಳ ಬಿಸಿ ಬಿಸಿ ಚರ್ಚೆಗಳಾಗಿದ್ದವು. ಟೀನಾ ಮತ್ತು ಅನಿಲ್ ಅವರ ಭೆಟ್ಟಿ ಒಂದು ಮದುವೆಯ ವಾರ್ಷಿಕೋತ್ಸವವದ ಸಂದರ್ಭದಲ್ಲಿ ಆಯಿತು. ಅನಿಲ್ ಅವರ ದೃಷ್ಟಿ ಕಪ್ಪು ಸೀರೆ ತೊಟ್ಟ ಟೀನಾರ ಮೇಲೆ ಬಿತ್ತು, ಟೀನಾ ಅವರ ಆ ಇಂಡಿಯನ್ ಲುಕ್ ಗೆ ಅನಿಲ್ ಅವರು ಮಾರು ಹೋದರಂತೆ.

ಒಮ್ಮೆ ರಾಜ್ಯಸಭೆಯ ಸದಸ್ಯರೂ ಆಗಿದ್ದ ಅನಿಲ್ ಅವರ ಸದ್ಯದ ಪರಿಸ್ಥಿತಿ ಅಣ್ಣ ಮುಕೇಶ್ ಅಂಬಾನಿಯವರಿಂದ ಬೇರೆಯಾದ ನಂತರ ತಕ್ಷಣ ಬದಲಾಯಿತು. ಬದಲಾದ ಪರಿಸ್ಥಿತಿಯಿಂದ ಮೇಲೆಳಲು ಹಾಗೂ ಕೆಲವು ಕಂಪನಿಗಳ ಸಾಲ ಮುಟ್ಟಿಸಲು ತಮ್ಮ ಆಸ್ತಿಯನ್ನು ಮಾರಬೇಕಾಯಿತು.

ಜಿಯೋ ಪ್ರೈಸ್ ವಾರ್ ನಲ್ಲಿ ಅನಿಲ್ ಅವರ ರಿಲಾಯನ್ಸ್ ಕಮ್ಯುನಿಕೇಶನ್ ಕಂಪನಿ ನೆಲಕಚ್ಚಿತು. ಇಬ್ಬರೂ ಸಹೋದರರ ಸಂಪತ್ತಿನ ಅಂತರದ ಬಗ್ಗೆ ಹೇಳಿದರೆ ವರ್ಷ 2019 ರಲ್ಲಿ 113 ಬಿಲಿಯನ್ ಡಾಲರ್ ಅಂದರೆ 7.97 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಮುಕೇಶ್ ಅಂಬಾನಿಯವರ ಸಂಪತ್ತು 114.46 ಬಿಲಿಯನ್ ಡಾಲರ್ ಮತ್ತು ಅನಿಲ್ ಅವರ ಸಂಪತ್ತು 2.93 ಬಿಲಿಯನ್ ದಷ್ಟಿದೆ.

ಬ್ರಿಟನ್ ದ ಒಂದು ಕೋರ್ಟಿನಲ್ಲಿ ಅನಿಲ್ ಅಂಬಾನಿಯ ವಕೀಲರು, ಅನಿಲ್ ಅವರ ಹತ್ತಿರ 11 ಲಕ್ಜ್ಯೂರಿ ಕಾರುಗಳು, ಒಂದು ಖಾಸಗಿ ಜೆಟ್, ಒಂದು ಕ್ರೀಡಾನೌಕೆ (ಯಾಚ್) ದಕ್ಷಿಣ ಮುಂಬಯಿಯಲ್ಲಿ ಸ್ಪೆಷಲ್ ಸಿ ವಿಂಡ್ ಪೇಂಟ್ ಹೌಸ್ ಇದೆ. ಆದರೆ ನೆಟ್ ವರ್ಥ ಮಾತ್ರ ಜೀರೋ ಇದೆ. ಅಂಬಾನಿಯವರ ವಕೀಲರ ಪ್ರಕಾರ 2012 ರಲ್ಲಿ ಅನಿಲ್ ಅವರ ಒಟ್ಟು ಹೂಡಿಕೆ 7 ಅರಬ್ ಡಾಲರ್ ಕ್ಕಿಂತಲೂ ಹೆಚ್ಚಿಗಿತ್ತು. ವರ್ಷ 2019 ರಲ್ಲಿ ಇದು ಕಡಿಮೆಯಾಗಿ ಈಗ 8.9 ಕೋಟಿ ಡಾಲರ್ ಗಳಷ್ಟು ಉಳಿದಿದೆ.