ಒಂದು ವೇಳೆ ನಿಮ್ಮ ಬಳಿ ಇಂತಹ 1 ರಿಂದ 100 ರೂ.ಗಳ ನೋಟುಗಳಿದ್ದರೆ, ಗಳಿಸಬಹುದು 1.5 ಲಕ್ಷ ರೂ: ತಿಳಿಯಿರಿ ಹೇಗೆಂದು
ನಿಮ್ಮ ಬಳಿ ಹಳೆಯ ನೋಟುಗಳು ಮತ್ತು ನಾಣ್ಯಗಳೇನಾದರೂ ಇದ್ದು, ಅವುಗಳನ್ನು ನೀವು ಆನ್ ಲೈನ್ ಮೂಲಕ ಮಾರಾಟ ಮಾಡಲು ಬಯಸಿದ್ದೇ ಆದರೆ, ನೀವು ರಾತ್ರೋ ರಾತ್ರಿ ಶ್ರೀಮಂತರಾಗುವ ಬಹಳಷ್ಟು ಅವಕಾಶಗಳಿವೆ. ಹಾಗಾದರೆ ಏನೀ ವಿಚಾರ ಎನ್ನುವ ಕುತೂಹಲ ನಿಮಗೆ ಮೂಡಿದ್ದರೆ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ ನೋಡಿ. ವಾಸ್ತವವಾಗಿ 1 ಮತ್ತು 2 ರೂಪಾಯಿಗಳ ಹಳೆಯದಾದ ಹಾಗೂ ಅಪರೂಪದ ನಾಣ್ಯಗಳು ಮತ್ತು 1 ರೂಪಾಯಿ, 2 ರೂಪಾಯಿ ಹಾಗೂ 5 ರೂಪಾಯಿಗಳ ಹಳೆಯ ನೋಟುಗಳಿಗೆ ಮಾರುಕಟ್ಟೆಯಲ್ಲಿ ಬಹಳ ಉತ್ತಮ ಬೇಡಿಕೆ ಇದೆ ಎನ್ನುವುದು ಒಂದು ಆಸಕ್ತಿಕರ ವಿಚಾರವಾಗಿದೆ. ಈ ನಾಣ್ಯ ಮತ್ತು ನೋಟುಗಳನ್ನು ಇದ್ದು, ಅದನ್ನು ನೀವು ಮಾರಾಟ ಮಾಡುವ ಮೂಲಕ ಲಕ್ಷಗಳಲ್ಲಿ ಹಣವನ್ನು ಗಳಿಸಬಹುದಾಗಿದೆ.
ನಾಣ್ಯಶಾಸ್ತ್ರಜ್ಞರು (ನಾಣ್ಯ ಅಥವಾ ಪದಕ ಸಂಗ್ರಹಕಾರರು) ಮತ್ತು ನೋಟಾಫಿಲಿಸ್ಟ್‌ಗಳು (ಪೇಪರ್ ನೋಟುಗಳನ್ನು ಅಧ್ಯಯನ ಮಾಡುವ ಅಥವಾ ಸಂಗ್ರಹಿಸುವವರು ) ಇಂತಹ ಅಪರೂಪದ ನಾಣ್ಯಗಳು ಮತ್ತು ನೋಟುಗಳ ಹುಡುಕಾಟದಲ್ಲಿ ಇರುತ್ತಾರೆ. ಒಂದು ವೇಳೆ ನಿಮ್ಮ ಸಂಗ್ರಹದಲ್ಲಿ ಅಂತಹ ನಾಣ್ಯಗಳು ಅಥವಾ ನೋಟುಗಳ ಇದ್ದರೆ ನೀವು ಅವುಗಳನ್ನು ಮಾರಾಟ ಮಾಡಬಹುದಾಗಿದೆ ಹಾಗೂ ಅವುಗಳನ್ನು ಮಾರಾಟ ಮಾಡುವಲ್ಲಿ ನೀವು ಬಯಸಿದ ಬೆಲೆಯನ್ನು ಪಡೆಯುವ ಅವಕಾಶಗಳು ಸಹಾ ಇವೆ ಎನ್ನಬಹುದಾಗಿದೆ. ನಿಮ್ಮ ಬಳಿ ಮಾತೆ ವೈಷ್ಣೋದೇವಿಯ ಚಿತ್ರ ಇರುವ ಐದು ಮತ್ತು ಹತ್ತು ರೂಪಾಯಿ ನಾಣ್ಯಗಳಿದ್ದರೆ, ಈ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ ಇದ್ದು, ಈ ನಾಣ್ಯಗಳನ್ನು ಲಕ್ಷಗಳ ಮೊತ್ತದಲ್ಲಿ ಹಣವನ್ನು ನೀಡಿ ಕೊಳ್ಳುವವರು ಇದ್ದಾರೆ.
ಒಂದು ವೇಳೆ ನಿಮ್ಮ ಬಳಿ ಹಳೆಯ ಒಂದು ರೂಪಾಯಿ ನೋಟು ಇದ್ದರೆ ಇದರಿಂದ ನೀವು 45 ಸಾವಿರ ರೂಪಾಯಿಗಳನ್ನು ಗಳಿಸುವ ಅವಕಾಶವಿದೆ. ಒಂದು ರೂಪಾಯಿ ನೋಟುಗಳ ಬಂಡಲ್ ಆನ್ಲೈನ್ ಫ್ಲಾಟ್ ಪಾರ್ಮ್ ನಲ್ಲಿ 45 ಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಈ ನೋಟುಗಳ ಮೇಲೆ 1957 ರಲ್ಲಿ ಗವರ್ನರ್ ಹೆಚ್ ಎಂ ಪಟೇಲ್ ಅವರ ಸಹಿ ಇದೆ.
ಅಲ್ಲದೇ ಈ ನೋಟುಗಳ ಸರಣಿ ಸಂಖ್ಯೆ 123456 ಆಗಿದೆ. ಇದಷ್ಟೇ ಅಲ್ಲ, ಒಎನ್ ಜಿಸಿಯ ಸ್ಮಾರಕ ಇರುವ ಐದು ರೂಪಾಯಿ ಮತ್ತು 10 ರೂಪಾಯಿ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ 200 ರೂಪಾಯಿಗಳು ಮೌಲ್ಯವು ದೊರೆಯುತ್ತಿದೆ.

ನಿಮ್ಮ ಬಳಿ ಅಸಾಧಾರಣ ಅಥವಾ ವಿಶಿಷ್ಟ ಎನಿಸುವ ನೂರು ರೂಪಾಯಿ ನೋಟು, ಸಂಖ್ಯಾ ಸರಣಿಯಾದ 000786 ಆಗಿದ್ದು, ಇದರ ಮೇಲೆ ಗವರ್ನರ್ ಡಿ. ಸುಬ್ಬರಾವ್ ಅವರ ಸಹಿಯನ್ನು ಹೊಂದಿದ್ದರೆ ಅದಕ್ಕೆ ರೂ. 1999 ಪಡೆಯಬಹುದಾಗಿದೆ. ಇನ್ನು ಆರ್ ಬಿ ಐ ಗವರ್ನರ್ ಸಿಡಿ ದೇಶಮುಖ್ ಅವರು ಸಹಿ ಮಾಡಿದ 1943 ರಲ್ಲಿ ಬಿಡುಗಡೆಯಾದ ಹತ್ತು ರೂಪಾಯಿ ನೋಟುಗಳುನ್ನು ಕಾಯ್ನ್ ಬಜಾರ್‌ನಲ್ಲಿ ಮಾರಾಟ ಮಾಡುವ ಮೂಲಕ ಹಣವನ್ನು ಗಳಿಸಬಹುದಾಗಿದೆ. ಈ ನೋಟಿನಲ್ಲಿ ಒಂದು ಬದಿಯಲ್ಲಿ ಅಶೋಕ ಸ್ತಂಭ ಮತ್ತು ಇನ್ನೊಂದು ಬದಿಯಲ್ಲಿ ದೋಣಿ ಮುದ್ರಿಸಲಾಗಿದೆ.
ನೋಟಿನ ಹಿಂಭಾಗದಲ್ಲಿ ಎರಡು ತುದಿಯಲ್ಲಿ “ಹತ್ತು ರೂಪಾಯಿ” ಎಂಬ ಇಂಗ್ಲಿಷ್ ಪದವನ್ನು ನೋಟ್ ನ ಹಿಂಭಾಗದಲ್ಲಿ ಬರೆದಿರಬೇಕು. ಈ ಅಪರೂಪದ ನೋಟಿಗಾಗಿ ನೀವು ರೂ. 25,000 ವರೆಗೆ ಹಣವನ್ನು ಪಡೆಯಬಹುದಾಗಿದೆ. ನಿಮ್ಮ ಬಳಿ 1862 ರ ರಾಣಿ ವಿಕ್ಟೋರಿಯಾ ನಾಣ್ಯಗಳೇನಾದರೂ ಇದ್ದಲ್ಲಿ, ಕ್ವಿಕರ್ ನಲ್ಲಿ ಖರೀದಿದಾರರು ಇದಕ್ಕೆ 1.5 ಲಕ್ಷ ರೂ. ನೀಡಿ ನಾಣ್ಯ ಕೊಳ್ಳಲು ಸಿದ್ಧರಿಸಿದ್ದಾರೆ. ಅಲ್ಲದೇ 1862 ರ ಒಂದು ರೂಪಾಯಿ ಬೆಳ್ಳಿ ನಾಣ್ಯವೂ ಸಹಾ ಇಂತಹ ಅಪರೂಪದ ನಾಣ್ಯಗಳ ವರ್ಗದಲ್ಲಿಯೇ ಬರುತ್ತದೆ.
ಹಾಗಾದರೆ ಈ ಹಳೆಯ ನಾಣ್ಯಗಳನ್ನು ಮಾರಾಟ ಮಾಡುವ ಪ್ಲಾಟ್ ಫಾರಂಗಳ ಬಗ್ಗೆಯೂ ತಿಳಿಯುವುದು ಅತ್ಯಾವಶ್ಯಕ ಆಗಿದೆ.
CoinBazar, Indiamart ಮತ್ತು Quikr ನಂತಹ ಅನೇಕ ವೆಬ್‌ಸೈಟ್‌ಗಳಲ್ಲಿ ಇಂತಹ ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ಮಾರಾಟ ಮಾಡಬಹುದಾಗಿದೆ. CoinBazzar.com ನಲ್ಲಿ ಮಾರಾಟ ಮಾಡಲು ನೀವು ಮೊದಲು ನೀವು ಆ ವೆಬ್ಸೈಟ್ ನಲ್ಲಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಬೇಕು. ಇಲ್ಲಿ ನೀವು ನಿಮ್ಮ ವಿವರಗಳನ್ನು ನೀಡಬೇಕು. ಇದರ ನಂತರ, ನೀವು ಮಾರಲು ಬಯಸುವ ನಾಣ್ಯಗಳು ಅಥವಾ ನೋಟುಗಳ ವಿವರಗಳನ್ನು ನೀಡಬೇಕಾಗುತ್ತದೆ. ನಂತರ ನೀವು ಆ ನಾಣ್ಯ ಮತ್ತು ನೋಟಿಗಾಗಿ ಎಷ್ಟು ಹಣವನ್ನು ನಿರೀಕ್ಷೆ ಮಾಡಿದ್ದೀರಿ ಎನ್ನುವುದನ್ನು ನಮೂದಿಸಬೇಕು.
ಹೀಗೆ ಎಲ್ಲಾ ಹಂತಗಳನ್ನು ಪೂರೈಸಿದ ನಂತರ ನೀವು ಮಾರಾಟಕ್ಕೆ ಇಟ್ಟಿರುವ ನಾಣ್ಯ ಅಥವಾ ನೋಟನ್ನು ಕೊಳ್ಳಲು ಬಯಸುವಂತಹ ಆಸಕ್ತ ಖರೀದಿದಾರರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ನಿಮಗೆ ಅವರ ಜೊತೆ ವ್ಯಾಪಾರ ಮಾಡುವುದು ಇಷ್ಟವಿದ್ದಲ್ಲಿ ಅವರಿಗೆ ನಿಮ್ಮ ಈ ವಿಶೇಷ ನಾಣ್ಯ ಅಥವಾ ನೋಟುಗಳನ್ನು ಮಾರಾಟ ಮಾಡುವ ಮೂಲಕ ಒಂದು ಒಳ್ಳೆಯ ಮೊತ್ತದ ಹಣವನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಹಾಗಿದ್ದರೆ ತಡ ಏಕೆ? ನಿಮ್ಮ ಬಳಿ ವಿಶೇಷ ನಾಣ್ಯ, ನೋಟುಗಳಿದ್ದರೆ ಮಾರಾಟ ಮಾಡುವ ಒಂದು ಪ್ರಯತ್ನ ಮಾಡಿ ನೋಡಿ.