ಒಂದು ಹೆಣ್ಣು ಹಾವಿಗಾಗಿ ಎರಡು ಹೆಬ್ಬಾವುಗಳ ನಡುವೆ ಖತ’ರ್ನಾಕ್ ಫೈ’ಟ್! ಮನೆಯ ಅವಸ್ಥೆ ನೋಡಿ ಬೆಚ್ಚಿ ಬಿದ್ದ ಮನೆಯ ಮಾಲೀಕ!

ಕೆಲಸ ಮುಗಿಸಿಕೊಂಡು ಆರಾಮವಾಗಿ ವಿಶ್ರಾಂತಿ ಪಡೆಯುವ ಆಲೋಚನೆಯನ್ನು ಮಾಡುತ್ತಾ ಬಂದು ಮನೆಯ ಬಾಗಿಲನ್ನು ತೆರೆದರೆ ಮನೆಯೊಳಗೆ ಅನಿರೀಕ್ಷಿತ ಅತಿಥಿಗಳಂತೆ ಭಾರೀ ಗಾತ್ರದ ಹೆಬ್ಬಾವುಗಳು ಕಂಡರೆ ಹೇಗಿರಬೇಡ ಪರಿಸ್ಥಿತಿ? ಊಹಿಸಿಕೊಂಡರೇನೇ ಮೈ ಜುಂ ಎನ್ನುತ್ತದೆ. ಆದರೆ ಇಂತಹುದೊಂದು ಸನ್ನಿವೇಶವು ವಾಸ್ತವವಾಗಿ ಎದುರಾದ ಘಟನೆಯೊಂದು ನಡೆದಿದ್ದು, ಈ ಘಟನೆಗೆ ಸಂಬಂಧಪಟ್ಟ ವೀಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿಯಂತೆ ವೈರಲ್ ಆಗುತ್ತಾ ಸಾಗಿದ್ದು, ನೋಡುಗರಲ್ಲಿ ಅನೇಕರು ಶಾಕ್ ಆಗಿದ್ದಾರೆ, ಕೆಲವರು ಇದೊಂದು ಭಯಾನಕ ದೃಶ್ಯ ಎಂದು ಕೂಡಾ ತಮ್ಮ ಪ್ರತಿಕ್ರಿಯೆಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ನೀಡಿದ್ದಾರೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ವ್ಯಕ್ತಿಯೊಬ್ಬರು ಸೋಮವಾರದ ದಿನ ಹೊರಗೆ ಹೋಗಿ ಮನೆಗೆ ಮರಳಿ ಬಂದಿದ್ದಾರೆ. ಅವರು ಮನೆಯ ಬಾಗಿಲು ತೆರೆದು ಒಳ ಬಂದಾಗ ಮನೆಯ ನೆಲದ ಮೇಲೆ ಒಂದಲ್ಲಾ ಬದಲಿಗೆ ಎರಡು ಭಾರೀ ಗಾತ್ರದ ಹೆಬ್ಬಾವುಗಳು ಬಿದ್ದು ಹೊರಳಾಡುತ್ತಿರುವುದನ್ನು ನೋಡಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಈ ಎರಡೂ ಹೆಬ್ಬಾವುಗಳು ಕೂಡಾ ಅವರ ಮನೆಯ ಛಾವಣಿಯ ಮೇಲಿಂದ ಒಳಕ್ಕೆ ಬಿದ್ದಿವೆ ಎಂದು ಅವರಿಗೆ ಸುತ್ತ ಮುತ್ತ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ನೋಡಿದಾಗ ಅರ್ಥವಾಗಿದ್ದು, ಮೇಲಿನಿಂದ ಕೆಳಗೆ ಬಿದ್ದ ಕಾರಣ ಅವು ನೋವಿನಿಂದ ಹೊರಳಾಡುತ್ತಿವೆ ಎಂದು ಆ ವ್ಯಕ್ತಿ ಅರ್ಥ ಮಾಡಿಕೊಂಡಿದ್ದಾರೆ.

ಅನಂತರ ಅವರು ತಡ ಮಾಡದೇ ಬ್ರಿಸ್ಬೇನ್ ನಾರ್ತ್ ಸ್ನೇಕ್ ಕ್ಯಾಚರ್ಸ್ ಮತ್ತು ಪುನರ್ವಸತಿ ಸೇವೆ ನೀಡುವವರನ್ನು ಸಂಪರ್ಕ ಮಾಡಿದ್ದಾರೆ. ಅವರು ಸ್ಥಳಕ್ಕೆ ಆಗಮಿಸಿ ಹಾವುಗಳನ್ನು ಹಿಡಿದಿದ್ದು, ಈ ವಿಚಾರವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡು, “ಆತ ಮನೆಗೆ ಬಂದಾಗ, ಆತನ ಮನೆಯಲ್ಲಿ ಎರಡು ದೊಡ್ಡ ಕೋಸ್ಟಲ್ ಕಾರ್ಪೆಟ್ ಹೆಬ್ಬಾವು ಗಳನ್ನು ನೋಡಿದ್ದಾನೆ” ಎಂದು ಬರೆದುಕೊಂಡು, ಹೆಬ್ಬಾವುಗಳನ್ನು ಹಿಡಿಯುವ ಮೂಲಕ ಅವುಗಳ ಸಂರಕ್ಷಣೆ ಮಾಡಿದ ಫೋಟೋಗಳನ್ನು ಹಾಕಿದ್ದು, ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.

ಹಾವನ್ನು ಹಿಡಿದ ಸ್ವೀವನ್ ಬ್ರೌನ್ ಎನ್ನುವ ವ್ಯಕ್ತಿ ಮಾದ್ಯಮದ ಮುಂದೆ ಮಾತನಾಡುತ್ತಾ ತಾನು ಈ ಮೊದಲು ಇಂತಹ ಹಾವುಗಳನ್ನು ನೋಡಿಲ್ಲ, ಅವು ಬಹಳ ಬಲಶಾಲಿಯಾಗಿವೆ ಎಂದಿದ್ದಾರೆ. ಎರಡು ಗಂಡು ಹಾವುಗಳು ಒಂದು ಹೆಣ್ಣು ಹಾವಿಗಾಗಿ ಇಷ್ಟು ಹೋರಾಟವನ್ನು ಮಾಡಿವೆ ಎನ್ನಲಾಗಿದ್ದು, ಆ ಹೆಣ್ಣು ಹಾವು ಮಾತ್ರ ಸ್ಥಳದಲ್ಲಿ ಎಲ್ಲೂ ಕೂಡಾ ಪತ್ತೆಯಾಗಿಲ್ಲ ಎನ್ನಲಾಗಿದೆ. ದೊರೆತ ಎರಡು ಹಾವುಗಳಲ್ಲಿ ಒಂದು 9.5 ಅಡಿಗಳಷ್ಟು ಉದ್ದವಾಗಿದ್ದರೆ, ಮತ್ತೊಂದು ಹಾವು 8.2 ಅಡಿಗಳಷ್ಟು ಉದ್ದವಾಗಿದೆ. ಸೋಮವಾರದ ದಿನ ಶೇರ್ ಆಗಿರುವ ಫೋಟೋಗಳನ್ನು ಗಮನಿಸಿದಾಗ ಈ ಹಾವುಗಳು ಛಾವಣಿ ಮೇಲಿಂದ ಕೆಳಗೆ ಬಿದ್ದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಫೇಸ್ ಬುಕ್ ನಲ್ಲಿ ಈಗಾಗಲೇ ಸಾವಿರಾರು ಶೇರ್ ಗಳನ್ನು ಪಡೆದಿರುವ ಫೋಟೋಗಳಿಗೆ ನೂರಾರು ಕಾಮೆಂಟ್ ಗಳು, ಲೈಕ್ ಗಳು ಬಂದಿವೆ. ಇದನ್ನು ನೋಡಿದ ಆ ಮನೆಗೆ ಸಂಬಂಧಿಸಿದ ವ್ಯಕ್ತಿ ಕಾಮೆಂಟ್ ಸೆಕ್ಷನ್ ನಲ್ಲಿ ಇದು ನಮ್ಮ ತಂದೆಯವರ ಮನೆ ಅವರನ್ನು ಹಾವುಗಳಿಂದ ದೂರ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು. ಇನ್ನೂ ಸಿಗದೇ ಇರುವ ಆ ಹೆಣ್ಣು ಹೆಬ್ಬಾವಿನ ಬಗ್ಗೆ ಸ್ವಲ್ಪ ಚಿಂತೆ ಕಾಡುತ್ತಿದೆ. ಸಿಕ್ಕ ಎರಡು ಹಾವುಗಳನ್ನು ಸುರಕ್ಷಿತವಾಗಿ ಕಾಡಿನಲ್ಲಿ ಬಿಟ್ಟು ಬರಲಾಗಿದೆ ಎಂದು ತಿಳಿಸಿದ್ದಾರೆ.