ಕಣ್ಣುಗಳನ್ನು ಮುಚ್ಚಿ ಮುಗ್ಧರಾಗಿ ಯಾರ ಮೇಲೂ ವಿಶ್ವಾಸ ವಿಡಬೇಡಿ; ಎಂದು ಸಾರಿ ಹೇಳುವ ಉದಾಹರಣೆಯ ಸ್ಪೆಷಲ್ ವಿಡಿಯೋ..
ಮನುಷ್ಯನಿಗೆ ಭೂಮಿಯ ಮೇಲೆ ಇರುವ ಪ್ರತಿಯೊಂದು ಜೀವಿಗಳಿಂದ ಏನಾದರೂ ಹೊಸದನ್ನು ಅಥವಾ ಜೀವನದ ಪಾಠವನ್ನು ಕಲಿಯಲು ಸಿಕ್ಕೇ ಸಿಗುತ್ತದೆ. ಇಂತಹದೇ ಒಂದು ಜೀವನದಲ್ಲಿಯ ಸತ್ಯದ ಅರಿವು ಮಾಡಿಕೊಡುವ ಪುಟ್ಟ ಇರುವೆಗಳ ವಿಡಿಯೋ ಒಂದನ್ನು ನಿಮಗಾಗಿ ತಂದಿದ್ದೇವೆ. ಈ ವಿಡಿಯೋದಿಂದ ಕಲಿಯಬೇಕಾದದ್ದು ತುಂಬಾ ಇದೆ. ಮನುಷ್ಯ ಸಮಾಜ ಜೀವಿಯಾಗಿದ್ದಾನೆ. ಸಮಾಜವನ್ನು ಬಿಟ್ಟು ಮನುಷ್ಯನಿಗೆ ಬದುಕಲು ಸಾಧ್ಯವಿಲ್ಲ. ಹೀಗಾಗಿಯೇ ಸಮಾಜದ ಜೊತೆಗೆ ಹೊಂದಿಕೊಂಡು ಸಮಾಜಕ್ಕೆ ಒಳಿತನ್ನು ಬಯಸುತ್ತ ಜೀವನವನ್ನು ನಡೆಸಬೇಕಾಗುತ್ತದೆ. ಕೆಲವರು ಅನೇಕರಿಗೆ ಹಿಂದೆ ಮುಂದೆ ನೋಡದೆ ಮತ್ತು ಯಾವುದೇ ವಿಚಾರ ಹಾಗೂ ಸ್ವಾರ್ಥವನ್ನು ಆಶಿಸದೆ ಸಹಾಯ ಮಾಡಲು ನಿಲ್ಲುತ್ತಾರೆ. ಅವರ ಇದೇ ಒಳ್ಳೆಯ ಗುಣ ಸಹಾಯ ಮಾಡುವ ಮನುಷ್ಯನಿಗೆ ತುಂಬಾ ದುಬಾರಿಯಾಗಿ ಪರಿಣಮಿಸುತ್ತದೆ ಎಂಬುದನ್ನು ಈ ಇರುವೆಗಳ ವಿಡಿಯೋದಲ್ಲಿ ನೋಡಬಹುದು.
ಇರುವೆಗಳ ವಿಡಿಯೋದಲ್ಲಿ ಕಂಡುಬರುವ ದೃಶ್ಯ ವೇನೆಂದರೆ, ಗೇಟಿನ ಎರಡು ಪಿಲ್ಲರ್ ಗಳ ಮಧ್ಯದಲ್ಲಿ 4 ಇರುವೆಗಳು ಎದುರಿನ ಪಿಲ್ಲರ್ ಮೇಲೆ ಹಾಯ್ದು ಹೋಗುವ ಸಲುವಾಗಿ ಒಂದರಮೇಲೊಂದರಂತೆ ನಿಂತಿವೆ. ಅದರಲ್ಲಿ ಕೆಳಗಿರುವ ಇರುವೆಯು ಮೇಲಿನ ಮೂರು ಇರುವೆಗಳಿಗೆ ಎದುರಿನ ಪಿಲ್ಲರ್ ಮೇಲೆ ಕಳುಹಿಸುವ ಸಲುವಾಗಿ ತನ್ನ ದೇಹದ ಮೇಲಿಂದ ಹಾಯ್ದು ಹೋಗಲು ಸಹಾಯ ಮಾಡುತ್ತದೆ. ಮೇಲಿನ ಮೂರು ಇರುವೆಗಳು ಕೆಳಗಿನ ಇರುವೆಯು ಮಾಡಿದ ಹೆಲ್ಪ್ ನಿಂದಾಗಿ ದಾಟಿ ಎರಡನೆಯ ಪಿಲ್ಲರ್ ಮೇಲೆ ಹೋಗುತ್ತವೆ. ಆ ಮೂರು ಇರುವೆಗಳು ದಾಟಿ ಬಂದದ್ದೇ ಕ್ಷಣ ತಿರುಗಿ ಹಿಂದೆಯೂ ನೋಡದೆ ತಮ್ಮ ಜೊತೆಗಾರನಿಗೆ ಜೊತೆಯಲ್ಲಿ ಕರೆದುಕೊಳ್ಳದೆ ತಮ್ಮ ದಾರಿಗೆ ತಾವು ಹೋಗಿಬಿಡುತ್ತವೆ. ಸಹಾಯ ಮಾಡಿದ ಇರುವೆ ಅಲ್ಲಿಯೇ ಏಕಾಂಗಿಯಾಗಿ ನಿಂತುಬಿಡುತ್ತದೆ. ಇರುವೆಗಳ ಈ ದೃಶ್ಯವು ನೇಟಿಜನ್ಸ್ ಗಳ ಮನಕಲಕಿದೆ.
ವಿಡಿಯೋ ನೋಡಿ
View this post on Instagram
ಅದಕ್ಕಾಗಿಯೇ ಹೇಳುವುದು ಯಾರ ಮೇಲೆಯೂ ಕಣ್ಣುಮುಚ್ಚಿ ಮತ್ತು ತುಂಬಾ ಮುಗ್ಧರಾಗಿ ವಿಶ್ವಾಸ ವಿಡಬೇಡಿ, ನೀವು ಮಾಡಿದ ಸಹಾಯ ಲೆಕ್ಕಕ್ಕೆ ಬರುವುದಿಲ್ಲ, ಕಾರಣ ಎಲ್ಲವೂ ಎಲ್ಲರೂ ಆಗಲೇ ಕ್ಷಣದಲ್ಲೇ ಮರೆತು ಬಿಡುತ್ತಾರೆ ಎಂದು ಈ ಇರುವೆ ಹೇಳುತ್ತಿರುವಂತೆ ಕಂಡುಬರುತ್ತಿದೆ.