Articles

ಈ ಬಾಲಕನ ಕಿಲ್ಲರ್ ಡ್ಯಾನ್ಸ್ ಎಬ್ಬಿಸಿದೆ ಇಂಟರ್ನೆಟ್ ನಲ್ಲಿ ಧೂಳ್! ಖತರ್ನಾಕ್ ಎಕ್ಸ್ಪ್ರೆಶನ್ ನೋಡಿ ಈ ವೈರಲ್ ವಿಡಿಯೋದಲ್ಲಿ…

ಮಕ್ಕಳು ಶಾಲೆಗೆ ಹೋಗಿ ಏನಾದರೂ ಕಲಿತುಕೊಂಡು ತಮ್ಮ ಭವಿಷ್ಯವನ್ನು ಚೆನ್ನಾಗಿ ರೂಪಿಸಿಕೊಳ್ಳಲಿ ಎಂಬ ಸದುದ್ದೇಶವನ್ನು ಪೋಷಕರು ಹೊಂದಿರುತ್ತಾರೆ. ಆದರೆ ಈಗಿನ ಮಕ್ಕಳು ಶಾಲೆಗೆ ಬರೀ ಪಾಠ ಕಲಿಯುವದಕ್ಕಷ್ಟೇ ಅಲ್ಲ ಅದರ ಜೊತೆಗೆ ಫುಲ್ ಆನ್ ಮಸ್ತಿ ಸಹ ಮಾಡಲು ಶಾಲೆಗೆ ಹೋಗುತ್ತಾರೆ. ಈಗ ನೋಡುವ ವಿಡಿಯೋ ಇದೇ ರೀತಿಯಾಗಿದೆ. ಈ ಹುಡುಗ ತನ್ನ ವರ್ಗದಲ್ಲಿ ಯಾವ ರೀತಿ ಗದ್ದಲ ಎಬ್ಬಿಸುತ್ತಿದ್ದಾನೆ ನೋಡಿ. ಇದನ್ನು ನೋಡಿದಾಗ ನೀವು ನಗುವುದು ಖಚಿತ.

ಹುಡುಗನ ಡಾನ್ಸ್ ನ ವೈರಲ್ ಆಗುತ್ತಿರುವ ಈ ವಿಡಿಯೋವನ್ನು sandeepgupta114a ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ ನಿಂದ ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಕಂಡುಬರುವ ದೃಶ್ಯದ ಪ್ರಕಾರ ಹುಡುಗ ತನ್ನ ಕ್ಲಾಸಿನಲ್ಲಿಯ ಗೆಳೆಯರ ಜೊತೆಗೆ ಯಾವ ರೀತಿ ವರ್ತಿಸುತ್ತಿದ್ದಾನೆ ಹಾಗೂ ಮಸ್ತಿ ಮಾಡುತ್ತಿದ್ದಾನೆ ನೋಡಿ. ವಿಡಿಯೋದಲ್ಲಿ ಹುಡುಗ ‘ಗೋರೆ ತನ್ ಸೇ ಸರಕತಾ ಜಾಯೇ’ ಹಿಂದಿ ಹಾಡನ್ನು ಹಾಡುತ್ತಿದ್ದಾನೆ. ಏತನ್ಮದ್ಯೆ ಬೇರೆ ಹುಡುಗರಿಗೂ ಸಹ ಕುಣಿಯಲು ಪ್ರೆಶರ್ ಹಾಕುತ್ತಿದ್ದಾನೆ. ಆತನ ಮುಖ ಮತ್ತು ಆತ ನೀಡಿದ ಎಕ್ಸ್ಪ್ರೆಶನ್ ನೋಡುಗರಿಗೆ ನಗು ಸಹಿಸಲಾಗುತ್ತಿಲ್ಲ. ವಿಡಿಯೋ ನೋಡಿದ ನೇಟಿಜನ್ಸ್ ಗಳು ಭರ್ಜರಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ವಿಡಿಯೋ ನೋಡಿ

ಈ ವಿಡಿಯೋ ನೋಡಿ ನೇಟಿಜನ್ಸ್ ಒಬ್ಬ ತನ್ನ ಕಾಮೆಂಟ್ ನಲ್ಲಿ ” ಈತನ ತಂದೆ ತಾಯಿಗಳು ನಾವು ಎಂಥ ಪ್ರಾಣಿಯನ್ನು ಹುಟ್ಟಿಸಿದ್ದೇವೆ” ಎಂದು ಯೋಚಿತ್ತಿರಬಹುದು ಎಂದಿದ್ದಾನೆ. ಇನ್ನೊಬ್ಬ ಯೂಸರ್ “ನನ್ನ ಮಗ ಶಾಲೆಯಲ್ಲಿ ಈ ರೀತಿಯಾಗಿ ವರ್ತಿಸಿದರೆ ನಾನು ದಿನಾಲೂ ಆತನಿಗೆ ಏಟುಗಳನ್ನು ಹಾಕುತ್ತೇನೆ” ಎಂದಿದ್ದಾನೆ.

Leave a Comment

Your email address will not be published. Required fields are marked *