ಕಳೆದ 23 ವರ್ಷದಿಂದ ಗಾಂಗೂಲಿಯ ‘ಈ’ ರೆಕಾರ್ಡ್ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ!
ಇಂದು ವಿಶ್ವ ಕ್ರಿಕೆಟ್ ನಲ್ಲಿ ಭಾರತದ ಸ್ಥಾನಮಾನ ಉಚ್ಛ ದರ್ಜೆಯಲ್ಲಿರುವ ಮುಖ್ಯ ಕಾರಣದ ಹಿಂದಿನ ವ್ಯಕ್ತಿ ಯಾರಾದರೂ ಇದ್ದರೆ ಆ ವ್ಯಕ್ತಿ ಸೌರವ ಗಾಂಗೂಲಿಯೇ ಇದ್ದಾರೆ. ಸದ್ಯದ ಟೀಮಿನಲ್ಲಿರುವ ಜಿದ್ದು, ಅಗ್ರೆಸಿವ್, ದಾದಾಗಿರಿ ಇವೆಲ್ಲವುಗಳ ಬೇಸ್ ಗಾಂಗೂಲಿಯ ಕಾಲದಲ್ಲಿಯೇ ಹಾಕಲಾಗಿದೆ.
ಭಾರತೀಯ ಕ್ರಿಕೆಟ್ ತಂಡದ ಆಕ್ರಮಕವಾದ ಮುಖ ಎಂದರೆ ಗಾಂಗೂಲಿಯೇ ನೆನಪಿಗೆ ಬರುತ್ತಾರೆ.
ಲಾರ್ಡ್ಸ್ ಗ್ಯಾಲರಿಯಲ್ಲಿ ಕ್ರಿಕೆಟ್ ಹುಟ್ಟಿಸಿದ ಸಾಹೇಬರ ಎದುರಿನಲ್ಲೇ ಗಾಂಗೂಲಿಯು ತನ್ನ ಟಿ ಶರ್ಟ್ ಕಳಚಿ ತಿರುಗಿಸಿದ ಸ್ಟೈಲ್ ಭಾರತೀಯ ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ಅಚ್ಚಳಿಯದೆ ಕಾಯಂ ಆಗಿ ಕುಳಿತಿದೆ. ಈ ರೀತಿಯ ದಾದಾಗಿರಿ ಗಾಂಗೂಲಿಯನ್ನು ಬಿಟ್ಟು ಬೇರೆ ಯಾರೂ ಮಾಡಲಿಕ್ಕೆ ಸಾಧ್ಯವಿಲ್ಲ.
ಗಾಂಗೂಲಿಯ ಒಂದು ರೆಕಾರ್ಡ್ ಆತನ ಕ್ರಿಕೆಟ್ ಸನ್ಯಾಸದ ನಂತರವೂ ಇನ್ನೂವರೆಗೆ ಯಾರಿಂದಲೂ ಬ್ರೇಕ್ ಆಗಿಲ್ಲ. ಅದು ಅವರ ಹೆಸರಲ್ಲೇ ಇದೆ.
ಹಾಗೆ ನೋಡಲಾಗಿ ಕ್ರಿಕೆಟ್ ನಲ್ಲಿ ಅನೇಕ ರೇಕಾರ್ಡ್ಸ್ ಗಳು ಆಗೇ ಆಗುತ್ತವೆ. ಹಳೆಯವು ಬ್ರೇಕ್ ಆಗಿ ಹೊಸದು ದಾಖಲಾಗುತ್ತಿರುತ್ತವೆ.

ಆದರೆ ಗಾಂಗೂಲಿಯ ಹೆಸರಲ್ಲಿದ್ದ ಈ ರೆಕಾರ್ಡ್ 23 ವರ್ಷಗಳಿಂದ ಇನ್ನೂವರೆಗೆ ಅವರ ಹೆಸರಲ್ಲೇ ಇದೆ. ಈ ರೆಕಾರ್ಡ್ ಬ್ರೇಕ್ ಮಾಡುವದಂತೂ ದೂರ, ಅದರ ಸಮೀಪವೂ ಸಹ ಯಾರು ಬಂದಿಲ್ಲ.
ವರ್ಷ 1997.
ಕೆನಡಾದ ಟೊರೆಂಟೊದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ‘ಶಾರಾಜಾ ಫ್ರೆಂಡ್ಶಿಪ್ ಕಪ್’ ಆಯೋಜಿಸಲಾಗಿತ್ತು. ಪಾಕಿಸ್ತಾನದ ನಾಯಕ ರಮೀಜ್ ರಾಜಾ ಮತ್ತು ಭಾರತದ ನಾಯಕತ್ವ ಸಚಿನ ಹೆಗಲ ಮೇಲಿತ್ತು.
ಇಲ್ಲಿ ನಡೆದ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಅನುಕ್ರಮವಾಗಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಸೌರವ ಗಾಂಗೂಲಿ ಪಡೆದಿದ್ದರು.
ಒಂದು ಸೀರಿಜ್ ನಲ್ಲಿ ಸತತವಾಗಿ ನಾಲ್ಕು ಮ್ಯಾಚ್ ಗಳಲ್ಲಿ ಮ್ಯಾನ್ ಆ ದ ಮ್ಯಾಚ್ ವಿಜೇತರಾಗುವ ದಾಖಲೆ ಇನ್ನು ಗಾಂಗೂಲಿಯ ಹೆಸರಲ್ಲೇ ಇದೆ.
ಈ ಭರ್ಜರಿ ಪ್ರದರ್ಶನದಿಂದ ಮ್ಯಾನ್ ಆಫ್ ದ ಸೀರಿಜ್ ಸಹ ಸೌರವ್ ಅವರಿಗೆ ಕೊಡಲಾಯಿತು. ಈ ಪಂದ್ಯಾವಳಿಗಳಲ್ಲಿ ಮೊದಲ ಮ್ಯಾಚ್ ಒಂದು ಬಿಟ್ಟರೆ ಗಾಂಗೂಲಿ ತಮ್ಮ ದಾದಾಗಿರಿಯಿಂದ ಉಳಿದ ನಾಲ್ಕು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ 4-1 ರ ಅಂತರದಿಂದ ಭಾರತಕ್ಕೆ ಗೆಲ್ಲಿಸಿಕೊಟ್ಟರು.