ಕಸವೆಂದು ಅಮೂಲ್ಯ ವಜ್ರವನ್ನು ಕಸದ ಬುಟ್ಟಿಗೆ ಎಸೆದ ಮಹಿಳೆ!

ಲಂಡನ್: ಕಲ್ಲಿದ್ದಲು ಗಣಿಗಳಲ್ಲಿ ವಜ್ರಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಈ ವಜ್ರವನ್ನೂ ಮೆಚ್ಚಲೇ ಬೇಕು. ಲಂಡನ್ ನಲ್ಲಿ ಮಹಿಳೆಯೊಬ್ಬರು ತಮ್ಮ ಮನೆಯಲ್ಲಿ ಸಿಕ್ಕ ವಜ್ರದ ಮಹತ್ವ ಅರಿಯದೆ ಕಸದ ಬುಟ್ಟಿಗೆ ಎಸೆದಿದ್ದಾರೆ.

ಈ ಚಿಕ್ಕ ನಾಣ್ಯದ ಆಕಾರದ ವಜ್ರವು ತನ್ನ ಡ್ರೆಸ್ ಒಂದರ ಮೇಲೆ ಮುರಿದ ಗುಂಡಿಯಂತೆ ಭಾಸವಾಯಿತು, ಗುಂಡಿಯಂದು ಬಾವಿಸಿ ಈ ಮಹಿಳೆ ಅದನ್ನು ಕಸದ ಬುಟ್ಟಿಗೆ ಎಸೆದಳು. ಬಿಬಿಸಿ ಪ್ರಕಾರ, ವಜ್ರದ ಮೌಲ್ಯವು ಎರಡು ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚು ಎಂದು ನಂತರ ಕಂಡುಹಿಡಿಯಲಾಯಿತು. ಈ ಪ್ರಕರಣದಲ್ಲಿ ಮಹಿಳೆಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಆದರೆ ಪ್ರಸ್ತುತ ಮಹಿಳೆ ಲಂಡನ್ ಮಾರುಕಟ್ಟೆಯಲ್ಲಿ ಸ್ವತಃ ವಜ್ರ ಖರೀದಿ ಮಾಡಿದ್ದಳು.

ಆದರೆ ಮೊದಲು ಖರೀದಿ ಮಾಡಿದ ಕುರಿತು ಕೊಂಚ ಸಹ ನೆನಪಿರಲಿಲ್ಲ ಈ ಮಹಿಳೆಗೆ. ಈ ಎಲ್ಲ ಘಟನೆ ನಡೆದಾಗ ಅವಳ ಜ್ಞಾಪಕಕ್ಕೆ ಬಂದಿತು. ತಾನು ಈ ವಸ್ತುವನ್ನು ಲಂಡನ್‌ನ ಮಾರುಕಟ್ಟೆಯಿಂದ ಖರೀದಿಸಿರುವುದಾಗಿ ಹೇಳುತ್ತಾಳೆ. ಅವಳು ತನ್ನ ಮನೆಯನ್ನು ಸ್ವಚ್ಛಗೊಳಿಸುತ್ತಿದ್ದಾಗ ವಜ್ರವನ್ನು ನೋಡಿದಳು. ಅದು ತನ್ನ ಡ್ರೆಸ್ ಮೇಲೆ ಸಡಿಲವಾದ ಬಟನ್ ಇದ್ದಿರಬಹುದು ಎಂದು ಭಾವಿಸಿ ಅದನ್ನು ಇತರ ಕಸದ ಜೊತೆಗೆ ಕಸದ ಬುಟ್ಟಿಗೆ ಎಸೆದಳು.

ತದನಂತರ ಆ ಕಸದ ಬುಟ್ಟಿಗೆ ಎಸೆದ ವಜ್ರವನ್ನು ತಗೆದು ಅದನ್ನು ವಸ್ತುಗಳನ್ನು ಹರಾಜು ಹಾಕುವ ವ್ಯಕ್ತಿ ಮಾರ್ಕ್ ಲೇನ್ ಸಹಾಯದಿಂದ ವಜ್ರದ ಮೌಲ್ಯವನ್ನು ಚೌಕಸಿ ಮಾಡಲು ಹೇಳಿದಳು. ಈ ಮಹಿಳೆ ತನ್ನ ಇತರ ಆಭರಣಗಳೊಂದಿಗೆ ಇದನ್ನು ತಂದಿದ್ದರಿಂದ ಆತನಿಗೆ ಇದರ ಮೌಲ್ಯ ಸಾಧರಣವಾಗಿ ಇರಬಹುದು ಎಂದು ಅಂದುಕೊಂಡನು. ತದನಂತರ ಎಷ್ಟೋ ದಿವಸಗಳ ಕಾಲ ಕಳೆದರೂ ಸಹ ವಜ್ರದ ಮೌಲ್ಯ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಇದನ್ನು ಬೆಲ್ಜಿಯಂಗೆ ಕಳುಹಿಸಿದನು. ಆಗ ನಿಜವಾದ ವಜ್ರದ ವ್ಯಾಪಾರ ಬಳಿಯಲ್ಲಿ ಹೋಗಿ ವಜ್ರ ತಲುಪಿತು. ಲಂಡನ್ನಲ್ಲಿಯ ಕೇಂದ್ರದಲ್ಲಿ 30 ನವೆಂಬರ್ ರಂದು ಈ ವಜ್ರದ ಹರಾಜು ಆಗಲಿದ್ದು ಈ ವಜ್ರಕ್ಕೆ ಸುಮಾರು ಇಪ್ಪತ್ತರಿಂದ ಮೂವತ್ತು ಲಕ್ಷ ಡಾಲರ್ ನಷ್ಟು ಮೌಲ್ಯ ಬರಬಹುದು ಎಂಬುದು ತಜ್ಞರ ಅಂದಾಜಾಗಿದೆ.