Articles

ಎರಡು ಮುಗ್ಧ, ಪುಟ್ಟ ಜೀವಿಗಳ ಈ ಸುಂದರ ಆಟ ಅವಶ್ಯವಾಗಿ ನೋಡಿ ; ಬಾನೆತ್ತರಕ್ಕೂ ಪ್ರೀತಿ ತುಂಬಿ ಚೆಲ್ಲುವ, ಮನಸ್ಸು ಹಗುರ ಮಾಡುವ ನಿಷ್ಕಲ್ಮಶ ವಿಡಿಯೋ…

ಸೋಶಿಯಲ್ ಮೀಡಿಯಾ ಅಂದರೆ ವೈರಲ್ ಫೋಟೋ ಮತ್ತು ವಿಡಿಯೋಗಳ ಖಜಾನೆ. ಇಲ್ಲಿ ವೈರಲ್ ಆಗುವ ಅನೇಕ ಒಳ್ಳೆಯ ವಿಡಿಯೋಗಳು ಮತ್ತು ಫೋಟೋಗಳು ನೆಟಿಜನ್ಸ್ ಗಳ ಮನಸ್ಸಿನ ಮೇಲೆ ಗಾಢವಾದ ಮತ್ತು ವಿಶೇಷವೆಂದರೆ ಧನಾತ್ಮಕ ಪರಿಣಾಮವನ್ನು ಬೀರುತ್ತವೆ. ಈಗ ಇದೇ ರೀತಿಯ ಸುಂದರವಾದ ವಿಡಿಯೋ ಒಂದು ಸದ್ಯ ನೀವು ನೊಡಲಿದ್ದಿರಿ.

ಈ ವೀಡಿಯೋವನ್ನು ಐಎಫ್ಎಸ್ ಅಧಿಕಾರಿಯಾದ ಸುಶಾಂತ್ ನಂದಾ ಅವರು ತಮ್ಮ ಟ್ವಿಟರ್ ಹ್ಯಾಂಡಲ್ ನಿಂದ ಶೇರ್ ಮಾಡಿದ್ದಾರೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 1 ಲಕ್ಷಕ್ಕೂ ಮೇಲ್ಪಟ್ಟು ಜನರು ನೋಡಿದ್ದಾರೆ. ಮತ್ತು ಸಾವಿರಾರು ಜನರಿಗೆ ಈ ವಿಡಿಯೋ ತುಂಬಾ ಇಷ್ಟವಾಗಿ ಲೈಕ್ ಮಾಡಿದ್ದಾರೆ.

ವಿಡಿಯೋದಲ್ಲಿ ಎರಡು ಪುಟ್ಟ ಜೀವಗಳು ಗಾರ್ಡನ್ ಒಂದರ ಸ್ಲೈಡಿಂಗ್ ಹತ್ತಿರ ಆಡುತ್ತಿವೆ. ಆಟ ಆಡುವಾಗ ಪುಟ್ಟ ಮಗು ನಾಯಿಯ ಪುಟ್ಟ ಮರಿಗೆ ನಿಲುಕದಿದ್ದರೂ ಕಾಲುಗಳನ್ನು ಎತ್ತರಿಸಿ ಪ್ರಯತ್ನ ಮಾಡಿ ಸ್ಲೈಡಿಂಗ್ ಬೋರ್ಡ್ ಮೇಲೆ ಕುಳ್ಳಿರಿಸುತ್ತಾನೆ. ತದನಂತರ ಪುಟ್ಟ ನಾಯಿಮರಿಯು ಸ್ಲೈಡಿಂಗ್ ಮೇಲಿಂದ ತುಂಬಾ ಚೆನ್ನಾಗಿ ಖುಷಿಯಿಂದ ತನ್ನ ಗೆಳಯನಿದ್ದ ಕಡೆಗೆ ಜಾರುತ್ತ ಇಳಿದು ಬರುತ್ತದೆ. ಇಲ್ಲಿ ಗಮನಿಸುವ ಮಹತ್ವದ ವಿಷಯ ಒಂದಿದೆ. ನಾಯಿಯ ಪುಟ್ಟ ಮರಿ ಜಾರುತ್ತ ಸ್ಲೈಡಿಂಗ್ ಮುಖಾಂತರ ಕೆಳಗೆ ಬಂದ ನಂತರ ಮತ್ತೆ ತನ್ನನ್ನು ಎತ್ತಿ ಸ್ಲೈಡಿಂಗ್ ಬೋರ್ಡ್ ಮೇಲೆ ಕೂಡಿಸುವಂತೆ ಪುಟ್ಟನ ಮುಂದೆ ಕುಣಿಯುತ್ತ ಹಠ ಮಾಡುತ್ತದೆ.

ವಿಡಿಯೋ ನೋಡಿ

ಈ ಸುಂದರ ನಿಷ್ಕಲ್ಮಶವಾದ ವಿಡಿಯೋ ನಿಜಕ್ಕೂ ತುಂಬಾ ಸೊಗಸಾಗಿದೆ. ಈ ವಿಡಿಯೋ ನೋಡಿದಾಗ ಮನಸ್ಸಿಗೆ ಒಂದು ರೀತಿಯ ಖುಷಿ ಮತ್ತು ಸಮಾಧಾನ ಸಿಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ನಮ್ಮ ಬಾಲ್ಯದ ಜೀವನ ನೆನಪಾಗದೆ ಇರದು, ಅಲ್ವಾ?

Leave a Comment

Your email address will not be published. Required fields are marked *