ಕಾಡಿನ ರಸ್ತೆಯ ಮಧ್ಯದಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿ, ಬೃಹದಾಕಾರದ ಆನೆ ಹಿಂದಿನಿಂದ ಬಂದು ಮಾಡಿದ್ದೇನು? ವಿಡಿಯೋದಲ್ಲಿ ನೋಡಿ……!!
ಅರಣ್ಯದಲ್ಲಿ ಎಲ್ಲಕ್ಕಿಂತ ಹೆಚ್ಚು ದಷ್ಟಪುಷ್ಟವಾದ ಪ್ರಾಣಿ ಎಂದರೆ ಅದು ಆನೆ. ಆನೆಯನ್ನು ಕಂಡರೆ ಸಾಕು ನಾವು ಹೆದರಿ ಅಲ್ಲಿಂದ ಪಲಾಯನ ಮಾಡುತ್ತೇವೆ. ಏಕೆಂದರೆ ಆನೆಯ ಭಾರವೇ ಅಷ್ಟೊಂದು ಇರುತ್ತದೆ ಅದು ಒಂದು ಹೆಜ್ಜೆ ಮನುಷ್ಯನ ಮೇಲೆ ಇಟ್ಟರೆ ಕೆಳಗಿದ್ದ ಮನುಷ್ಯ ಚೂರು ಚೂರಾಗುತ್ತಾನೆ. ಆದ್ದರಿಂದಲೇ ಈ ಪ್ರಾಣಿಯನ್ನು ಕಂಡಾಗ ಅಲ್ಲಿಂದ ದೂರ ಹೋಗುವದೇ ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಆನೆಯನ್ನು ಸಹ ಮನೆಯಲ್ಲಿ ಸಾಕುತ್ತಾರೆ. ಆನೆಯನ್ನು ಸಾಕಿ ಅವುಗಳಿಂದ ತಮಗೆ ಬೇಕಾದ ಭಾರವಾದ ಕೆಲಸ ಸಹ ಮಾಡಿಸಿಕೊಳ್ಳುತ್ತಾರೆ ಹೀಗಾಗಿ ಆನೆ ಇದೊಂದು ಸಹಾಯ ಮಾಡುವ ಪ್ರಾಣಿ ಸಹ ಎಂದು ತಿಳಿಯಲಾಗುತ್ತದೆ. ಆದರೆ ಆನೆ ಒಮ್ಮೊಮ್ಮೆ ತನ್ನ ಸಿಟ್ಟಿನಿಂದ ಏನೆಲ್ಲಾ ಮಾಡಬಹುದು ಎಂಬುದು ನಾವು ಎಷ್ಟೋ ಸಲ ನೋಡಿದ್ದೇವೆ.
ಆನೆಯನ್ನು ಯಾವ ಪ್ರಾಣಿಯು ಸಹ ಕೆಣಕುವದಿಲ್ಲ ಏಕೆಂದರೆ ಆನೆಯ ಶಕ್ತಿ ಮತ್ತು ತೂಕ ನೋಡಿಯೇ ಇತರ ಪ್ರಾಣಿಗಳು ದೂರ ಹೋಗುತ್ತವೆ. ಆನೆಯ ಒಂದು ಹೆಜ್ಜೆ ಇಟ್ಟರೆ ಸಾಕು ಕೆಳಗಿನ ಪ್ರಾಣಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುತ್ತದೆ. ಅಂತಹದರಲ್ಲಿ ಆನೆಯ ಬೇರೆಯಾದ ರೂಪದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಮೊದಲಿಗೆ ನೋಡಿದರೆ ಆನೆ ಏನಾದರೂ ಮಾಡಿ ಬಿಡುತ್ತೆ ಅನ್ನೋ ಯೋಚನೆ ನಮ್ಮ ಮನದಲ್ಲಿ ಬರುವದು. ಆದರೆ ನಿಜವಾಗಿ ಅಲ್ಲಿ ಆನೆ ಮಾಡಿರುವ ಪ್ರತಿಕ್ರಿಯೆ ನೋಡಿದರೆ ಆಶ್ಚರ್ಯ ವಾಗದೆ ಇರಲಾರಿರಿ.
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಕಾಡಿನ ಮಧ್ಯದಲ್ಲಿ ಒಂದು ರಸ್ತೆಯ ಬದಿಯಲ್ಲಿ ನಿಂತು ಮೂತ್ರ ವಿಸರ್ಜನೆ ಮಾಡುತ್ತಿರುತ್ತಾನೆ. ಆದರೆ ಅದೇ ರಸ್ತೆಯ ಮೂಲಕ ಒಂದು ಬೃಹದಾಕಾರದ ಆನೆ ಕಾಡಿನ ಮಧ್ಯದಲ್ಲಿ ಬರುತ್ತದೆ. ಬರುವಾಗ ರಸ್ತೆಯ ಮಧ್ಯದಲ್ಲಿ ಈ ವ್ಯಕ್ತಿ ಮೂತ್ರ ವಿಸರ್ಜನೆ ಮಾಡುತ್ತಿರುವದು ನೋಡುತ್ತದೆ. ಆಗ ಕೋಪಗೊಂಡ ಆನೆ ಆ ವ್ಯಕ್ತಿಯನ್ನು ಏನಾದರೂ ಮಾಡಿ ತನ್ನ ರಸ್ತೆಯಿಂದ ದೂರ ಸರಿಸಬೇಕು ಎಂದು ಜೋರಾಗಿ ಓಡುತ್ತ ಬಂದು ತನ್ನ ಸೊಂಡಿಲನ್ನು ಎತ್ತಿ ಹೊಡೆಯಬೇಕು ಎಂದು ಯೋಚಿಸಿ ವ್ಯಕ್ತಿಯ ಹತ್ತಿರ ಬರುತ್ತಿದ್ದ ಹಾಗೆ ಆನೆ ಏನಾಗುತ್ತದೆ ಎಂಬುದು ಗೊತ್ತಾಗುವದಿಲ್ಲ. ಆನೆ ಒಮ್ಮಿಂದೊಮ್ಮೆಲೆ ಶಾಂತವಾಗಿ ನಿಲ್ಲುತ್ತದೆ. ಆದರೆ ಇಷ್ಟೆಲ್ಲ ನಡೆಯುತ್ತಿದ್ದರೂ ಸಹ ಆ ವ್ಯಕ್ತಿಗೆ ಯಾವುದೇ ರೀತಿಯ ಭಯವಿಲ್ಲದೆ ಹಾಗೆ ತನ್ನ ಪಾಡಿಗೆ ತಾನು ಮೂತ್ರ ವಿಸರ್ಜನೆ ಮಾಡುತ್ತಲೇ ಇರುತ್ತಾನೆ. ಯಾವಾಗ ಆನೆ ತನ್ನ ಹಿಂದೆ ಬಂದು ನಿಂತಾಗ ಮರಳಿ ಹಿಂದೆ ನೋಡುತ್ತಾನೆ. ಆಗ ಮಾತ್ರ ಆತನು ಹೌಹಾರಿ ಅಲ್ಲಿಂದ ಓಡಿ ಹೋಗುತ್ತಾನೆ. ಆನೆಯ ಸಿಟ್ಟು ಒಮ್ಮೆಲೇ ಕಡಿಮೆ ಆಗಿದ್ದು ನೋಡಿದರೆ ತುಂಬಾ ಆಶ್ಚರ್ಯ ವೆನಿಸುತ್ತೆ.
ಯಾವುದೇ ಪ್ರಾಣಿ ಸುಮ್ಮನೆ ಮನುಷ್ಯರ ಮೇಲೆ ದಾಳಿ ಮಾಡುವದಿಲ್ಲ. ಹೊರತಾಗಿ ಅವುಗಳ ಜೀವಕ್ಕೆ ಅಪಾಯ ಮತ್ತು ವ್ಯಕ್ತಿಯಿಂದ ತನಗೆ ತೊಂದರೆ ನಿರ್ಮಾಣ ವಾಗುತ್ತಿದೆ ಅಂದರೆ ಮಾತ್ರ ಆ ಪ್ರಾಣಿಗಳು ಮನುಷ್ಯರ ಮೇಲೆ ದಾಳಿ ಮಾಡುತ್ತವೆ. ಈ ವಿಡಿಯೋ ನೋಡಿದರೆ ಪ್ರಾಣಿಗಳಿಗೂ ಸಹ ಮಾನವೀಯತೆ ಇರುತ್ತದೆ ಅನ್ನೋ ಸಂಗತಿ ಗೊತ್ತಾಗುತ್ತೆ.
ವಿಡಿಯೋ ನೋಡಿ.
The gentle giant at its gentle best☺️☺️
Asks the man to give side to move on. pic.twitter.com/Y0OInjIU5L— Susanta Nanda IFS (@susantananda3) June 30, 2022