ಕಾಡಿನ ರಸ್ತೆ ಮಧ್ಯೆ ಕದಲದೆ ಕಲ್ಲಿನಂತೆ ಕುಳಿತ ಹುಲಿ: ಆಗ ಅಲ್ಲಿಗೆ ಬಂದ ಜಿಂಕೆ.. ಮುಂದೇನಾಯ್ತು? ರೋಚಕವಾದ ಕ್ಷಣಗಳವು Viral Video

ವನ್ಯಪ್ರಾಣಿಗಳ ಜೀವನ ಹಾಗೂ ಅವುಗಳು ವಾಸಿಸುವ ಸ್ಥಳಗಳು ಅಂದರೆ ಅರಣ್ಯಗಳ ಪರಿಸರ ಯಾವಾಗಲೂ ಕೂಡಾ ಬಹಳ ರೋಚಕ ಹಾಗೂ ಆಕರ್ಷಕ ಎನಿಸುತ್ತದೆ. ವನ್ಯಜೀವಿಗಳ ಜೀವನವಂತೂ ಒಂದು ಸಾಹಸ ಯಾತ್ರೆಯಂತೆ ಎನ್ನಬಹುದು ಏಕೆಂದರೆ ಅವುಗಳು ಯಾವಾಗ, ಯಾವ ದಿಕ್ಕಿನಿಂದ ಪ್ರಾ ಣಾ ಪಾ ಯ ಎದುರಾಗುವುದು ಎಂಬುವುದು ತಿಳಿದಿರುವುದಿಲ್ಲ. ಹೀಗೆ ಅ ಪಾ ಯದ ನಡುವೆಯೇ ಜೀವನವನ್ನು ನಡೆಸುವ ವನ್ಯ ಜೀವಿಗಳ ಬದುಕು ಒಂದು ವಿಸ್ಮಯದಂತೆ ಗೋಚರಿಸುತ್ತದೆ. ಅದರಲ್ಲೂ ವಿಶೇಷವಾಗಿ ಸಸ್ಯಾಹಾರಿ ಪ್ರಾಣಿಗಳು ಪ್ರತಿಯೊಂದು ಹೆಜ್ಜೆಯನ್ನು ಇಡಬೇಕಾದರೂ ಕೂಡಾ ತಮ್ಮ ಮೈಯೆಲ್ಲಾ ಕಣ್ಣಾಗಿ ಇರಬೇಕಾಗುತ್ತದೆ. ಏಕೆಂದರೆ ಹುಲಿ, ಸಿಂಹ ಚಿರತೆ ಗಳಂತಹ ಕ್ರೂ ರ ಪ್ರಾಣಿಗಳು ತಮ್ಮ ಆಹಾರಕ್ಕಾಗಿ ಈ ಪ್ರಾಣಿಗಳನ್ನು ಬೇಟೆಯಾಡಲು ಸದಾ ಹೊಂಚುಹಾಕಿ ಕುಳಿತಿರುತ್ತವೆ.

ಕಾಡಿನಲ್ಲಿ ಹುಲಿ, ಸಿಂಹ, ಚಿರತೆ ಗಳಂತಹ ಪ್ರಾಣಿಗಳು ಬೇಟೆಯಾಡುವ ವಿಧಾನ ಬಹಳ ವೈವಿಧ್ಯಮಯ ಹಾಗೂ ರೋಚಕವಾಗಿರುತ್ತದೆ. ಅವುಗಳ ಕೈಗೆ ಸಿಕ್ಕ ಪ್ರಾಣಿಗಳನ್ನು ನೋಡಿ ಅನೇಕ ಸಂದರ್ಭಗಳಲ್ಲಿ ಜನ ಅಯ್ಯೋ ಪಾಪ ಎನ್ನುತ್ತಾರೆ, ಅಲ್ಲದೇ ವೀಡಿಯೋ ಮಾಡಿದವರನ್ನು ನಿಂದನೆ ಮಾಡುತ್ತಾರೆ. ಆದರೆ ಇದು ಪ್ರಕೃತಿಯ ನಿಯಮ ಎನ್ನುವುದನ್ನು ಅನೇಕ ಸಂದರ್ಭಗಳಲ್ಲಿ ಮರೆತು ಬಿಡುತ್ತಾರೆ. ಇಂತಹ ಭಾವನೆಯನ್ನು ಬಿಟ್ಟು ಪ್ರಕೃತಿಯಲ್ಲಿ ಆಹಾರ ಸರಪಣಿಯ ಭಾಗವಾಗಿ ನಡೆಯುವ ಈ ದೃಶ್ಯಗಳೆಂದು ಇವುಗಳನ್ನು ನೋಡಿದಾಗ ನಮ್ಮ ಪ್ರಕೃತಿಯ ಅದ್ಭುತವಾದ ಕ್ಷಣಗಳು, ಉಳಿವಿಗಾಗಿ ಹೋ ರಾ ಟ ಎನ್ನುವ ಸಿದ್ಧಾಂತ ನಮ್ಮ‌ ಕಣ್ಮುಂದೆ ಬರುವುದು ಖಂಡಿತ. ಮತ್ತೊಮ್ಮೆ ಬೇಟೆಯ ವಿಷಯಕ್ಕೆ ಬಂದರೆ ಹುಲಿ, ಸಿಂಹ, ಚಿರತೆಗಳಂತಹ ಪ್ರಾಣಿಗಳು ತಮ್ಮದೇ ಆದಂತಹ ಚಾಣಾಕ್ಷತನವನ್ನು ಉಪಯೋಗಿಸುತ್ತವೆ.

ಸೋಶಿಯಲ್ ಮೀಡಿಯಾದಲ್ಲಿ ಇಂತಹದೊಂದು ವಿಡಿಯೋ ವೈರಲ್ ಆಗಿದ್ದು ಹುಲಿಯೊಂದು ಬೇ ಟೆ ಯಾಡಲು ಅನುಸರಿಸಿದ ಚಾಣಾಕ್ಷತನವನ್ನು ನೋಡಿ ನೆಟ್ಟಿಗರು ಬೆರಗಾಗಿದ್ದಾರೆ. ಆದರೆ ಅದೇ ವೇಳೆ ಹುಲಿಯ ಚಾಣಾಕ್ಷತನವನ್ನು ಪತ್ತೆ ಹಚ್ಚಿದ ಜಿಂಕೆಯು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದನ್ನು ಕೂಡಾ ನೆಟ್ಟಿಗರು ಬಹಳವಾಗಿ ಮೆಚ್ಚಿ ಕೊಂಡಿದ್ದಾರೆ. ಈ ವಿಡಿಯೋ ನಿಜಕ್ಕೂ ಬಹಳ ರೋಚಕವಾಗಿದ್ದು, ಪ್ರತಿಯೊಬ್ಬರನ್ನು ತನ್ನತ್ತ ಸೆಳೆಯುತ್ತಿದೆ ಮಾತ್ರವಲ್ಲದೇ ಕೆಲವೇ ಸೆಕೆಂಡ್ ಗಳ ವೀಡಿಯೋದಲ್ಲಿ ಮುಂದೆ ಏನಾಗುತ್ತದೆಂದು ನೋಡುವ ಕುತೂಹಲವನ್ನು ಹುಟ್ಟಿಸುತ್ತದೆ. ಈಗ ವೈರಲ್ ವಿಡಿಯೋ ವಿಷಯಕ್ಕೆ ಬಂದರೆ, ವೀಡಿಯೋದಲ್ಲಿ ಕಾಡಿನ ರಸ್ತೆಯಲ್ಲಿ ನಾವು ಗಮನಿಸಿದರೆ ರಸ್ತೆಯ ಮಧ್ಯೆ ಒಂದು ದೊಡ್ಡ ಗಾತ್ರದ ಕಲ್ಲು ಬಿದ್ದಿದೆಯೇನೋ ಎನ್ನುವಂತೆ ಕಾಣುತ್ತದೆ.

ಅದೇ ವೇಳೆಗೆ ಸ್ವಲ್ಪ ಮುಂದೆ ಕಾಡಿನ ಒಂದು ಬದಿಯಿಂದ ಜಿಂಕೆಯೊಂದು ಬಂದು ರಸ್ತೆಯನ್ನು ದಾಟಿ ಇನ್ನೊಂದು ಬದಿಗೆ ಹೋಗುವುದಕ್ಕೇನೋ ಎನ್ನುವಂತೆ ನೋಡುತ್ತಿರುವಾಗಲೇ ಅದಕ್ಕೆ ಅನುಮಾನ ಬಂದು ಅಲ್ಲೇ ನಿಂತುಬಿಡುತ್ತದೆ. ಅದೇ ಸಮಯಕ್ಕೆ ಕಾಡಿನಲ್ಲಿ ಜಿಂಕೆಗೆ ಎಚ್ಚರಿಕೆಯ ಸಂದೇಶವನ್ನು ನೀಡುತ್ತಿದೆಯೇನೋ ಎನ್ನುವಂತೆ ಯಾವುದೋ ಒಂದು ಹಕ್ಕಿಯ ಅಥವಾ ಪ್ರಾಣಿಯ ದೊಡ್ಡ ಧ್ವನಿ ಕೇಳಿಸುತ್ತದೆ. ಆಗ ಇಷ್ಟು ಹೊತ್ತು ರಸ್ತೆಯಲ್ಲಿ ಚಲನೆ ಇಲ್ಲದೆ ಬಿದ್ದಿದ್ದ ಕಲ್ಲಿನಲ್ಲಿ ಚಲನೆ ಕಾಣುತ್ತದೆ. ಅದೇನೆಂದು ಗಮನಿಸಿದರೆ ವಾಸ್ತವವಾಗಿ ಅದು ಕಲ್ಲಲ್ಲ ಬದಲಿಗೆ ಕಲ್ಲಿನಂತೆ ಚಲನೆಯಿಲ್ಲದೇ ಅಲ್ಲಿ ಕುಳಿತಿರುವುದು ಒಂದು ಹುಲಿ, ಕದಲಿದ್ದು ಅದರ ಬಾಲ ಎಂದು ಗೊತ್ತಾಗುತ್ತದೆ. ಹುಲಿಯೊಂದು ತನ್ನನ್ನು ಹಿಡಿಯಲು ಕಾದು ಕುಳಿತಿದೆ ಎಂದು ಗಮನಿಸಿದ ಜಿಂಕೆಯು ಒಂದು ಕ್ಷಣ ಕೂಡಾ ತಡಮಾಡದೆ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿ ಅ ಪಾ ಯದಿಂದ ಪಾರಾಗುತ್ತದೆ.

ಜಿಂಕೆ ಓಡಿ ಹೋದ ಮೇಲೆ ತನ್ನ ಬುದ್ಧಿವಂತಿಕೆ ಸಫಲವಾಗಲಿಲ್ಲ ಎಂದು ತಿಳಿದ ಹುಲಿಯು ನಿಧಾನವಾಗಿ ಮೇಲೆದ್ದು ಅತ್ತ ಇತ್ತ ನೋಡುತ್ತಾ ಮುಂದೆ ಹೋಗುತ್ತದೆ. ಒಟ್ಟಾರೆ ಹುಲಿ ಅನುಸರಿಸಿದ ಚಾಣಾಕ್ಷತನ ಎಲ್ಲರ ಗಮನವನ್ನು ಸೆಳೆದಿದೆ. ಟ್ವಿಟರ್ ನಲ್ಲಿ ಶೇರ್ ಆದ ಈ ವಿಡಿಯೋವನ್ನು ಈಗಾಗಲೇ 3 ಲಕ್ಷ 30 ಸಾವಿರಕ್ಕಿಂತ ಅಧಿಕ ಮಂದಿ ವೀಕ್ಷಣೆಯನ್ನು ಮಾಡಿದ್ದಾರೆ. ಸುಮಾರು 13000 ದಾಟಿದ ಲೈಕ್ ಗಳನ್ನು ಈ ವೀಡಿಯೋ ಪಡೆದುಕೊಂಡಿದೆ. ವೀಡಿಯೋ ನೋಡಿದ ಆನೇಕ ಮಂದಿ ಕಾಮೆಂಟ್ ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಿಡಿಯೋ ಶೇರ್ ಮಾಡಿ ಕೊಂಡ ಟ್ವಿಟರ್ ಬಳಕೆದಾರರು ವಿಡಿಯೋದ ಶೀರ್ಷಿಕೆಯಲ್ಲಿ, “ಕಾಡಿನಲ್ಲಿ ಒಂದು ಕಲ್ಲು ಕೂಡಾ ಚಲಿಸುತ್ತದೆ” ಎಂದು ಬರೆದುಕೊಂಡಿದ್ದಾರೆ

ವೀಡಿಯೋ ನೋಡಿದ ಟ್ವಿಟರ್ ಬಳಕೆದಾರರೊಬ್ಬರು , ವನ್ಯ ಜೀವಿಗಳ ಪೀಳಿಗೆಯನ್ನು ಪಳಗಿಸಿದ ನಂತರವೂ ಕಾಡಿನ ನಿಜವಾದ ಪ್ರವೃತ್ತಿ ಹಾಗೇ ಉಳಿದಿದೆ ಎಂದು ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು ಹಾಸ್ಯ ಮಾಡುತ್ತಾ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಬಂದಾಗ ಬ್ಯಾಕ್ ಬೆಂಚರ್ಸ್ ಇಂತಹುದೇ ಕೆಲಸವನ್ನು ಮಾಡುವರು ಎಂದಿದ್ದಾರೆ. ಮತ್ತೆ ಕೆಲವು ಟ್ವಿಟರ್ ಬಳಕೆದಾರರು ಹುಲಿ ಪಾಪ ಬಹಳ ಬೇಸರದಿಂದ ಜಿಂಕೆಗೆ ಸದ್ದು ಮಾಡಿ ಸೂಚನೆ ಕೊಟ್ಟರವನ್ನು ಬೈದು ಕೊಂಡು ಅಲ್ಲಿಂದ ಹೋಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.‌