ಕೆಸರಿನಲ್ಲಿ ಸಿಕ್ಕಿಬಿದ್ದ ಗಾಡಿಯನ್ನು ಕಾರಿನ ಮೂಲಕ ತಗೆಯಲು ಹೋದಾಗ ಕಾರಿನ ಪರಸ್ಥಿತಿ ಏನಾಯಿತು ಅಂತ ನೀವೇ ನೋಡಿ ವಿಡಿಯೋದಲ್ಲಿ !!!!!
ಸಹಾಯ ಮಾಡುವ ಗುಣ ಎಲ್ಲರ ಹತ್ತಿರ ಇರುತ್ತೆ ಅಂತ ಹೇಳಲು ಬರುವದಿಲ್ಲ. ನಾವು ಬೇರೊಬ್ಬರಿಗೆ ಸಹಾಯ ಮಾಡಿದರೆ ಮತ್ತೊಬ್ಬರು ನಮಗೆ ಸಹಾಯ ಮಾಡುವರು ಇದು ಖಚಿತ. ಏಕೆಂದರೆ ಇಂದಿನ ಕಲಿಯುಗದಲ್ಲಿ ಎಷ್ಟೋ ಜನ ಸ್ವಾರ್ಥಕ್ಕಾಗಿ ಸಹಾಯ ಮಾಡುವರು ಆದರೆ ನಿಸ್ವಾರ್ಥದಿಂದ ಮಾಡಿದ ಸಹಾಯ ಮಾತ್ರ ಲೆಕ್ಕದಲ್ಲಿ ಬರುವದು. ನಮ್ಮ ಸದ್ಯದ ಪರಸ್ಥಿತಿ ನೋಡಿದರೆ ನಿಸ್ವಾರ್ಥದಿಂದ ಸಹಾಯ ಮಾಡುವ ಜನರ ಸಂಖ್ಯೆ ತುಂಬಾ ಕಡಿಮೆ ಇದೆ. ಯಾವುದೇ ಕಾರ್ಯ ಮಾಡುವಲ್ಲಿ ತಮಗೆ ಲಾಭ ವಾಗುತ್ತದೆ ಅಂದರೆ ಮಾತ್ರ ಇಂದಿನ ಜನರು ಸಹಾಯ ಮಾಡುತ್ತಾರೆ. ಆದರೆ ಕೆಲವೊಮ್ಮೆ ಸಹಾಯ ಮಾಡುವಾಗ ತುಂಬಾ ಎಡವಟ್ಟು ಸಹ ಉಂಟಾಗುತ್ತದೆ. ಅದರಿಂದ ಸಹಾಯ ಮಾಡಲು ಹೋದ ವ್ಯಕ್ತಿಗೆ ತುಂಬಾನೇ ನಷ್ಟ ಉಂಟಾಗುತ್ತದೆ. ಈ ಉದಾಹರಣೆಗೆ ತಕ್ಕಂತೆ ಒಂದು ವೀಡಿಯೋ ಸದ್ಯಕ್ಕೆ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಕೆಲವು ಜನರು ಒಂದು ನೀರಿನ ಹೊಂಡವನ್ನು ಮೂರು ಚಕ್ರದ ವಾಹನದಲ್ಲಿ ತಗೆದುಕೊಂಡು ಬರುತ್ತಿರುತ್ತಾರೆ ಅಷ್ಟರಲ್ಲಿ ಅವರ ಗಾಡಿ ಕೆಸರಿನಲ್ಲಿ ಸಿಕ್ಕಿ ಬೀಳುತ್ತದೆ. ಅವರು ಎಷ್ಟೇ ಪ್ರಯತ್ನ ಮಾಡಿದರು ಅದು ಕೇಸರಿನಿಂದ ಹೊರಗಡೆ ಬರುವದೆಯೇ ಇಲ್ಲ. ತದನಂತರ ಅವರು ಒಂದು ಉಪಾಯ ಮಾಡುತ್ತಾರೆ ಅದೇನೆಂದರೆ ಕೆಲವು ಜನರು ಆ ಸಿಲುಕಿರುವ ವಾಹನದ ಹಿಂದುಗಡೆ ತಳ್ಳಲು ನಿಂತುಕೊಂಡು ಆ ವಾಹನವನ್ನು ಒಂದು ಕಾರಿಗೆ ಹಗ್ಗದಿಂದ ಕಟ್ಟುತ್ತಾರೆ. ಹಗ್ಗದಿಂದ ಕಟ್ಟಿದ ನಂತರ ಹಿಂದೆ ನಿಂತ ಎಲ್ಲರೂ ಕೆಸರಿನಲ್ಲಿ ಸಿಲುಕಿರುವ ವಾಹನವನ್ನು ತಳ್ಳಲು ಶುರು ಮಾಡುತ್ತಾರೆ ಅದೇ ವೇಳಗೆ ಕಾರಿನ ಮಾಲೀಕ ಸಹ ತನ್ನ ಕಾರನ್ನು ಮುಂದೆ ಓಡಿಸಲು ಪ್ರಯತ್ನ ಮಾಡುತ್ತಾನೆ ಆದರೂ ಸಹ ಸಿಕ್ಕಿಬಿದ್ದ ವಾಹನ ಹೊರಗೆ ಬರಲೇ ಇಲ್ಲ ಆಗ ಕಾರಿನ ಮಾಲೀಕ ಇಂತಹ ಒಂದು ಸಾಧಾರಣ ವಾಹನ ಕೇಸರಿನಿಂದ ಹೊರಗೆ ತಗೆಯದೆ ಹೋದರೆ ತನ್ನ ಪ್ರತಿಷ್ಠೆ ಕಡಿಮೆ ಯಾಗುತ್ತೆ ಹೇಗಾದರೂ ಮಾಡಿ ಈ ಗಾಡಿಯನ್ನು ಕೇಸರಿನಿಂದ ಹೊರಗೆ ತರಲೇಬೇಕು ಅಂತ ಮನದಲ್ಲಿ ಯೋಚಿಸಿ ಜೋರಾಗಿ ಎಕ್ಸೆಲೇಟರ್ ಒತ್ತುತ್ತಾನೆ ಆಗ ಅಲ್ಲಿ ಒಂದು ವಿಚಿತ್ರವಾದ ಘಟನೆಯ ನಡೆಯುತ್ತದೆ.
ವೀಡಿಯೋ ನೋಡಿ.
View this post on Instagram
ಕಾರಿನ ಮಾಲೀಕ ಜೋರಾಗಿ ರೇಸ್ ಮಾಡಿದಾಗ ಕಾರು ಚೂರು ಸಹ ಮುಂದಕ್ಕೆ ಹೋಗದೆ ಕಾರು ಎರಡು ತುಂಡುಗಳಾಗಿ ಕತ್ತರಿಸಿ ಬೀಳುತ್ತದೆ. ಪಾಪ ಸಹಾಯ ಮಾಡಬೇಕು ಅಂತ ಮಾಲೀಕ ತನ್ನ ಕಾರನ್ನು ಎರಡೂ ತುಂಡುಗಳನ್ನಾಗಿ ಮಾಡಿಕೊಂಡು ಸಂಕೋಚ ಪಡುತ್ತಾನೆ. ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ naturalphotographyunique ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಇದುವರೆಗೆ ಈ ವೀಡಿಯೋಗೆ ಸುಮಾರು ಎರಡು ಮಿಲಿಯನ್ ನಷ್ಟು ಲೈಕ್ ಬಂದಿವೆ.