Articles

ಈ ದೇಶದಲ್ಲಿನ ಕಾಫಿ, ಟೀ, ಬಾಳೆಹಣ್ಣಿನ ಬೆಲೆ ಕೇಳಿದರೆ ನಿಮಗೆ ಶಾಕ್ ಆಗುವುದು ಸತ್ಯ! ದಿವಾಳಿಯೇಳುವ ಕೊನೆಯ ಹಂತದಲ್ಲಿದೆ ಈ ರಾಷ್ಟ್ರ!

ಉತ್ತರ ಕೊರಿಯಾದ ಸುಪ್ರೀಂ ನಾಯಕ ಕಿಮ್ ಜೊಂಗ್ ಉನ್ ತಮ್ಮ ದೇಶವು ಗಂಭೀರ ಆಹಾರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ಕೊನೆಗೂ ಒಪ್ಪಿಕೊಂಡಿದ್ದಾರೆ. ಸಿಎನ್ಎನ್ ವರದಿಯ ಪ್ರಕಾರ, ಇತ್ತೀಚಿನ ಸಭೆಯಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಮತ್ತು ಪರಿಸ್ಥಿತಿ ಹದಗೆಡುತ್ತಿದೆ ಎಂದು ಕಿಮ್ ಒಪ್ಪಿಕೊಂಡರು. ಆಹಾರ ಧಾನ್ಯಗಳ ಕೊರತೆಯಿಂದಾಗಿ ಉತ್ತರ ಕೊರಿಯಾದಲ್ಲಿ ಹಣದುಬ್ಬರವು ಉತ್ತುಂಗಕ್ಕೇರಿದೆ ಮತ್ತು ಆಹಾರ ಪದಾರ್ಥಗಳು ಸಾಮಾನ್ಯ ಜನರಿಗೆ ತಲುಪಲು ಸಾಧ್ಯವಾಗುತ್ತಿಲ್ಲ.

ಉತ್ತರ ಕೊರಿಯಾದಲ್ಲಿ 860,000 ಟನ್ ಆಹಾರ ಧಾನ್ಯಗಳ ಕೊರತೆ ಇದೆ ಎಂದು ಇತ್ತೀಚೆಗೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಹೇಳಿದೆ. ದೇಶದಲ್ಲಿ ಕೇವಲ ಎರಡು ತಿಂಗಳ ಆಹಾರ ಧಾನ್ಯಗಳ ಪೂರೈಕೆ ಉಳಿದಿದೆ. ಗೊಬ್ಬರ ಉತ್ಪಾದನೆಗೆ ಉತ್ತರ ಕೊರಿಯಾದ ರೈತರಿಗೆ ಪ್ರತಿದಿನ 2 ಲೀಟರ್ ಮೂತ್ರವನ್ನು ನೀಡುವಂತೆ ಕೇಳಲಾಗಿದೆ ಎಂದು ರೇಡಿಯೋ ಫ್ರೀ ಏಷ್ಯಾದ ವರದಿಯಲ್ಲಿ ಹೇಳಲಾಗಿದೆ.

ಚಿಂತಾಜನಕ ಪರಿಸ್ಥಿತಿಯ ಹೊರತಾಗಿಯೂ ಗಡಿಗಳು ಮುಚ್ಚಲ್ಪಡುತ್ತವೆ ಮತ್ತು ಸಾಂಕ್ರಾಮಿಕ ರೋಗದ ವಿರುದ್ಧ ಅನ್ವಯವಾಗುವ ನಿಯಮಗಳು ಜಾರಿಯಲ್ಲಿರುತ್ತವೆ ಎಂದು ಕಿಮ್ ಹೇಳಿದ್ದಾರೆ. ಕರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಉತ್ತರ ಕೊರಿಯಾ ತನ್ನ ಗಡಿಗಳನ್ನು ಮುಚ್ಚಿದೆ. ಹೀಗಾಗಿ ಆರ್ಥಿಕ ಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ದೇಶದ ಸ್ವಂತ ಉತ್ಪಾದನೆ ಸಾಕಾಗುವುದಿಲ್ಲವಾದ್ದರಿಂದ ಉತ್ತರ ಕೊರಿಯಾ ಆಮದುಗಳ ಮೇಲೆ ಅವಲಂಬಿತವಾಗಿದೆ ಮತ್ತು ಜನರಿಗೆ ಆಹಾರವನ್ನು ನೀಡಲು ಚೀನಾದಿಂದ ಸಹಾಯ ಪಡೆಯುತ್ತದೆ. ಪ’ರ’ಮಾ’ಣು ಕಾರ್ಯಕ್ರಮಗಳಿಂದಾಗಿ ಉತ್ತರ ಕೊರಿಯಾವನ್ನು ಹಲವಾರು ಅಂತರರಾಷ್ಟ್ರೀಯ ನಿರ್ಬಂಧಗಳಿಗೆ ಒಳಪಡಿಸಲಾಗಿದೆ. ತುಂಬಾ ದೇಶಗಳು ಅದರೊಂದಿಗೆ ವ್ಯವಹರಿಸುವುದಿಲ್ಲ.

ಇಲ್ಲಿ ಈಗಿರುವ ದರದ ಬಗ್ಗೆ ಕೇಳಿದರೆ ನೀವು ನಂಬಲಾರದ ಹಾಗಿವೆ. ಉದಾಹರಣೆಗೆ ಹೇಳುವುದಾದರೆ : ರಾಜಧಾನಿ ಪ್ಯೊಂಗ್ಯಾಂಗ್‌ ನಲ್ಲಿ ಒಂದು ಸಣ್ಣ ಪ್ಯಾಕೆಟ್ ಬ್ಲಾಕ್ ಟೀ ಗೆ $ 70 ಇದೆ! ಅಂದರೆ ನಮ್ಮ ರುಪಾಯಿಯಲ್ಲಿ ಸುಮಾರು 5,167 ರೂ.!, ಒಂದು ಕಾಫಿ ಪ್ಯಾಕೆಟ್‌ ಗೆ $ 100 (ರೂ. 7,381) ಮತ್ತು 1 ಕೆಜಿ ಬಾಳೆಹಣ್ಣಿನ ಬೆಲೆ $ 45 (ಸುಮಾರು 3,300 ರೂ.) ಇದೆ!

ಈಗ ಹೇಳಿ ಅಲ್ಲಿನ ಈ ಬೆಲೆಯನ್ನು ನಂಬ್ತಿರಾ? ಕಿಮ್ ನ ಹುಚ್ಚಾಟ, ಬೇಕಾಬಿಟ್ಟಿ ಆದೇಶ, ಆರ್ಥಿಕ ದುಂದು ವೆಚ್ಚ, ಪ್ರಜೆಗಳನ್ನು ಮುಕ್ತವಾಗಿ ದುಡಿಯಲು ಬಿಡದೇ ಇರುವುದು, ಇತ್ಯಾದಿ ಕಾರಣಗಳಿಗಾಗಿ ಆ ದೇಶ ಇಂದು ಪಾಕಿಸ್ತಾನಕ್ಕಿಂತಲೂ ದಿವಾಳಿಯಾಗಿದೆ. ಅದರ ಮೇಲೆ ಕೊರೋನ ಹೊಡೆತ ಬಿದ್ದು ಕಿಮ್ ನ ಸಿಂಹಾಸನವನ್ನೇ ಅಲುಗಾಡಿಸುತ್ತಿದೆ.

Leave a Comment

Your email address will not be published. Required fields are marked *