Articles

ಜುಲೈನಲ್ಲಿ ಆಂದ್ರಪ್ರದೇಶದ ರಾಜ್ಯಪಾಲರಾಗಿ ಯಡಿಯೂರಪ್ಪ?!

ಹೌದು, ಇಂಥದೊಂದು ಸುದ್ದಿ ಭರ್ಜರಿಯಾಗಿ ಹರಿದಾಡುತ್ತಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಗಾಳಿ ದಿನೆ ದಿನೇ ಹೆಚ್ಚಾಗುತ್ತಿದ್ದು, ಕೊರೊನ ಸಂಕಷ್ಟದಲ್ಲೂ ಬಿಜೆಪಿಯ ಕೆಲ ಶಾಸಕರು ಇದೇ ವಿಷಯ ಹಿಡಿದು ಜಗ್ಗಾಡಿ ಜನರ ದೃಷ್ಟಿಯಲ್ಲಿ ಪಕ್ಷಕ್ಕೆ ಭಾರಿ ಮುಜುಗರ ತಂದಿಟ್ಟರು. ಹಲವು ಸಲ ದಿಲ್ಲಿ ಪ್ರವಾಸ ಮಾಡಿದ ನಂತರವೂ ಯಡಿಯೂರಪ್ಪ ವಿರೋಧಿಗಳಿಗೆ ಹೋದ ದಾರಿಗೆ ಸುಂಕ ಸಿಗಲಿಲ್ಲ.

ಇನ್ನು ಕಳೆದ ಸಲದ ಹಾಗೆ ಈ ಸಲವೂ ಯಡಿಯೂರಪ್ಪನವರನ್ನು ಎದುರು ಹಾಕಿಕೊಳ್ಳುವುದು ಹೈಕಮಾಂಡಿಗೆ ಬೇಕಾಗಿಲ್ಲ. ಅದು ಎಷ್ಟೊತ್ತಿದ್ದರೂ ಅವರನ್ನು ಮನವೊಲಿಸಿಯೇ ಕೆಳಗಳಿಸಬೇಕು. ಬೇರೆ ಯಾವುದಾದರೂ ಅಡ್ಡ ದಾರಿ ಹಿಡಿದರೆ ಕರ್ನಾಟಕದಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬೀಳುವುದು ನಿಶ್ಚಿತ.

ಇದೇ ಕಾರಣಕ್ಕೇ ಹೈಕಮಾಂಡ್ ಸಿ.ಎಂ ರವರ ಜೊತೆ ರಾಜಿ ಸಂದಾನಕ್ಕಿಳಿದು ಅವರನ್ನು ಆಂದ್ರಪ್ರದೇಶ ರಾಜ್ಯಪಾಲರನ್ನಾಗಿಸುವ ಆಫರ್ ಮುಂದಿಡಬಹುದು. ಅದಕ್ಕೆ ಯಡಿಯೂರಪ್ಪ ಒಪ್ಪುತ್ತಾರಾ ಎನ್ನುವುದು ಮುಖ್ಯ ವಿಷಯ. ಅವರನ್ನು ಹತ್ತಿರದಿಂದ ಬಲ್ಲವರಿಗೆ ಯಡಿಯೂರಪ್ಪ ಯಾವ ಕಾರಣಕ್ಕೂ ರಾಜ್ಯಪಾಲರಾಗಲು ಒಪ್ಪುವುದಿಲ್ಲ.

ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾಗಿದ್ದ ನಾಯಕತ್ವ ಬದಲಾವಣೆ ಕೂಗನ್ನು ತಣ್ಣಗಾಗಿಸಲು ಬಂದಿದ್ದ ಅರುಣ್ ಸಿಂಗ್ ರವರು ಇಲ್ಲಿ ಎಲ್ಲರ ಜೊತೆ ಮಾತುಕತೆ ನಡೆಸಿ, ಕೆಲವರಿಗೆ ಕೂಲ್ ಮಾಡಿ ಮತ್ತೆ ಕೆಲವರಿಗೆ ವಾರ್ನ್ ಮಾಡಿ ತೆರಳಿದರು.

ಅತ್ತ ಅವರು ದೆಹಲಿಗೆ ಹೋಗುತ್ತಿದ್ದಂತೆ, ಯಡಿಯೂತಪ್ಪನವರು ಆಂದ್ರ ರಾಜ್ಯಪಾಲರಾಗುತ್ತಾರೆ ಎಂಬ ಸುದ್ದಿ ಹಬ್ಬಿದೆ. ಸದ್ಯ ಆಂದ್ರದ ರಾಜ್ಯಪಾಲರ ಅವಧಿ ಜುಲೈನಲ್ಲಿ ಮುಕ್ತಯವಾಗಲಿದ್ದು, ಅವರ ನಂತರ ಯಡಿಯೂರಪ್ಪನವರು ಆ ಸ್ಥಾನ ಅಲಂಕರಿಸುತ್ತಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *