ಕೇದಾರನಾಥ ಮಂದಿರದ ಸುಂದರ ವೀಡಿಯೋ ನೋಡಿ ವಿಸ್ಮಯ ಎಂದ ನೆಟ್ಟಿಗರು: ಬಾಲಿವುಡ್ ನಟ ಶೇರ್ ಮಾಡಿದ ವೀಡಿಯೋ ವೈರಲ್!

ಸಿನಿಮಾ ನಟ ನಟಿಯರಲ್ಲಿ ಬಹುತೇಕ ಎಲ್ಲರೂ ಕೂಡಾ ಸೋಶಿಯಲ್ ಮೀಡಿಯಾ ಗಳಲ್ಲಿ ಆ್ಯಕ್ಟೀವ್ ಆಗಿರುವುದು ನಮಗೆ ತಿಳಿದ ವಿಚಾರವೇ ಆಗಿದೆ‌. ಹೀಗೆ ಸೋಶಿಯಲ್ ಮೀಡಿಯಾ ದಲ್ಲಿ ಸಕ್ರಿಯವಾಗಿರುವ ನಟರ ಸಾಲಿನಲ್ಲಿ ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಕೂಡಾ ಇದ್ದಾರೆ. ಸದಾ ನಗುವಿನಿಂದ ಜನರ ಮುಂದೆ ಕಾಣುವ ರಿತೇಶ್ ಬಾಲಿವುಡ್ ನಲ್ಲಿ ತನ್ನದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ರಿತೇಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಆಗಾಗ ವಿಶೇಷ ಫೋಟೋಗಳನ್ನು ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿ ಇರುತ್ತಾರೆ. ಕೆಲವೇ ದಿನಗಳ ಹಿಂದೆ ರಿತೇಶ್ ಅವರು ಒಂದು ಬಹಳ ಸುಂದರವಾದ ವೀಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ರಿತೇಶ್ ಅವರು ಈ ಬಾರಿ ಶೇರ್ ಮಾಡಿರುವುದು ಹಿಂದೂಗಳ ಪಾಲಿನ ಪವಿತ್ರ ಪುಣ್ಯ ಧಾಮಗಳಲ್ಲಿ ಒಂದಾದ ಕೇದಾರ್ ನಾಥ್ ದೇವಾಲಯದ ಒಂದು ಅಪರೂಪ ಹಾಗೂ ಅತಿ ಸುಂದರ ಎನಿಸುವ ವೀಡಿಯೋ ಇದಾಗಿದ್ದು, ನೋಡಿದವರು ಆಶ್ಚರ್ಯಚಕಿತರಾಗಿದ್ದಾರೆ. ಈಗಾಗಲೇ ಈ ವೀಡಿಯೋವನ್ನು 5 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ ಎಂದರೆ ಅದು ಎಷ್ಟು ಸುಂದರವಾದ ವೀಡಿಯೋ ಅಥವಾ ವಿಶೇಷ ವೀಡಿಯೋ ಎಂದು ನಮಗೆ ತಿಳಿಯುತ್ತದೆ‌. ಈ ವೀಡಿಯೋದಲ್ಲಿ ನಾವು ಗಮನಿಸಿದರೆ ಅದು ಕೇದಾರನಾಥ ದಲ್ಲಿ ಮುಂಜಾನೆಯ ಸುಂದರವಾದ ವಾತಾವರಣವನ್ನು ಬಿಂಬಿಸುವ ವೀಡಿಯೋ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ರಿತೇಶ್ ದೇಶ್ ಮುಖ್ ಅವರು ಈ ಸುಂದರ ವೀಡಿಯೋ ಶೇರ್ ಮಾಡಿಕೊಂಡು, ಶೀರ್ಷಿಕೆಯಲ್ಲಿ
“ಕೇದಾರನಾಥ ಮಂದಿರ, ಅತ್ಯಂತ ಸುಂದರ ಓಂ ನಮಃ ಶಿವಾಯ” ಎಂದು ಬರೆದುಕೊಂಡಿದ್ದಾರೆ. ಕೇದಾರನಾಥ ಮಂದಿರದ ನಾಲ್ಕು ದಿಕ್ಕುಗಳಲ್ಲಿ ಕೂಡಾ ಶಾಂತಿ ಎನ್ನುವುದು ತಾಂಡವವಾಡಿದೆ. ವೀಡಿಯೋದಲ್ಲಿ ನಾವು ಕೇವಲ ದೇವಾಲಯದ ಆರತಿ ವೇಳೆ ನಡೆಯುತ್ತಿರುವ ಶಬ್ಧಗಳನ್ನು ಮಾತ್ರವೇ ಕೇಳಬಹುದು. ಇನ್ನು ದೇವಾಲಯದ ಹಿಂದೆ ಇರುವ ಪರ್ವತವು ಬಹಳ ಸುಂದರವಾಗಿ ಕಾಣುತ್ತಿದೆ. ರಿತೇಶ್ ಶೇರ್ ಮಾಡಿರುವ ಇಂತಹ ಸುಂದರವಾದ ವೀಡಿಯೋ ನೋಡಿದ ನೆಟ್ಟಿಗರು ಕೂಡಾ ಭರ್ಜರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

ರಿತೇಶ್ ಈ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೂಡಾ ಶೇರ್ ಮಾಡಿದ್ದು ನೆಟ್ಟಿಗರು ಅದಕ್ಕೆ ಪ್ರತಿಕ್ರಿಯೆಗಳನ್ನು ನೀಡುವುದು ಮಾತ್ರ ಇನ್ನೂ ನಿಲ್ಲಿಸಿದೆ ಪ್ರತಿಕ್ರಿಯೆಗಳು ಕೂಡಾ ಹರಿದು ಬರುತ್ತಲೇ ಇದೆ. ರಿತೇಶ್ ದೇಶ್ ಮುಖ್ ಸಿನಿಮಾದ ಜೊತೆ ಜೊತೆಗೆ ತಮ್ಮದೇ ಆದ ಸ್ಟೈಲ್ ಹಾಗೂ ವ್ಯಕ್ತಿತ್ವದಿಂದ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ತಮ್ಮ ಪತ್ನಿ ಜೆನಿಲಿಯಾ ಜೊತೆಗೆ ಕಪಿಲ್ ಶರ್ಮಾ ಅವರ ಕಾಮೆಡಿ ಟಾಕ್ ಶೋ ನಲ್ಲಿ ಭಾಗವಹಿಸಿದ್ದರು‌. ಈ ಸಂದರ್ಭದಲ್ಲಿ ರಿತೇಶ್ ತಮ್ಮ ವಿವಾಹ ಜೀವನದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ರಿತೇಶ್ ಬಾಲಿವುಡ್ ನಲ್ಲಿ ಹೆಸರು ಮಾಡಿದ್ದರೆ ಅವರ ಪತ್ನಿ ಜೆನಿಲಿಯಾ ದಕ್ಷಿಣದ ಸ್ಟಾರ್ ನಟಿಯಾಗಿ ಹೆಸರು ಮಾಡಿದ್ದಾರೆ. ಪತಿ ಪತ್ನಿ ಇಬ್ಬರೂ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ತಾವು ಜೊತೆಯಾಗಿರುವ, ತಮ್ಮ ಮಕ್ಕಳ ಜೊತೆ ಸಮಯ ಕಳೆಯುವ ಸುಂದರವಾದ ಫೋಟೋ ಹಾಗೂ ವೀಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ರಿತೇಶ್ ಹಾಗೂ ಜೆನಿಲಿಯಾ ಮರಾಠಿಯಲ್ಲಿ ಸಿನಿಮಾ ನಿರ್ಮಾಣ ಕೂಡಾ ಮಾಡುತ್ತಿದ್ದಾರೆ. ಪತಿ ಪತ್ನಿ ಇಬ್ಬರೂ ಕೂಡಾ ತಮ್ಮ ಅಂಗಾಂಗ ದಾನ ಮಾಡುವುದಕ್ಕೂ ನಿರ್ಧರಿಸಿ ಮಾದರಿಯಾಗಿದ್ದಾರೆ. ರಿತೇಶ್ ಕಡೆಯ ಬಾರಿ ಬಾಲಿವುಡ್ ನ ಬಾಗಿ-3 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.