Articles

ಪ್ರೀತಿಸಿದವನಿಗಾಗಿ ಪ್ಯಾರಿಸ್ ನಿಂದ ಭಾರತದ ಹಳ್ಳಿಗೆ ಬಂದ ಹುಡುಗಿ: ಹೇಗಿದ್ದ ಜೀವನ ಈಗ ಹೇಗಾಗಿದೆ?? ನೀವೇ ನೋಡಿ

ಭಾರತೀಯ ಸಂಸ್ಕೃತಿ ಜಗತ್ತಿನಲ್ಲಿಯೇ ತುಂಬಾ ಮಹತ್ವ ಪಡೆದ ಸಂಸ್ಕೃತಿಯಾಗಿದೆ. ನಮ್ಮ ದೇಶದ ಸಂಸ್ಕೃತಿ ಮತ್ತು ಪರಂಪರೆಗಳನ್ನು ವಿವಿಧ ದೇಶಗಳ ಜನರು ಸಹ ತುಂಬಾ ಗೌರವಿಸುತ್ತಾರೆ. ನಮ್ಮ ದೇಶ ವಿವಿಧ ಪರಂಪರೆ ಮತ್ತು ಸಂಸ್ಕೃತಿಗಳ ಪ್ರತಿಬಿಂಬವಾಗಿದೆ.

ದುರದೃಷ್ಟವೆಂದರೆ ಭಾರತೀಯರು ವಿದೇಶಿ ಸಂಸ್ಕೃತಿಯ ಕಡೆಗೆ ಆಕರ್ಷಿತರಾದರೆ, ಆಶ್ಚರ್ಯದ ಸಂಗತಿ ಮಾತ್ರ ವಿದೇಶಿಗರು ಭಾರತದ ಸಂಸ್ಕೃತಿಯ ಕಡೆಗೆ ಆಕರ್ಷಿತರಾಗುತ್ತಿದ್ದಾರೆ.

ವಿದೇಶದ ಹುಡುಗಿಯರು ಭಾರತೀಯರನ್ನು ಪ್ರೀತಿಸಿ ಮದುವೆಯಾದ ಅನೇಕ ಸುದ್ದಿಗಳನ್ನು ನಾವು ಓದಿದ್ದೇವೆ. ಆದರೆ ಪ್ಯಾರಿಸ್ ನ ಹುಡುಗಿಯೊಬ್ಬಳು ಭಾರತೀಯ ಗೈಡ್ ನನ್ನು ಮದುವೆಯಾಗಿ ನಂತರ ಪ್ಯಾರಿಸ್ ತೊರೆದು ತನ್ನ ಜೀವನವನ್ನು ಭಾರತದಲ್ಲಿಯೇ ಕಳೆಯುತ್ತಿದ್ದಾಳೆ ಎಂದರೆ ನಿಜಕ್ಕೂ ಅಚ್ಚರಿಯೇ ಸರಿ. ಈಗ ಒಬ್ಬಳು ಭಾರತೀಯ ಮಹಿಳೆಯ ಹಾಗೆ ತನ್ನ ಕುಟುಂಬವನ್ನು ಪ್ರೀತಿಸುತ್ತಿದ್ದಾಳೆ ಹಾಗೂ ಸಂಗೋಪನೆ ಮಾಡುತ್ತಿದ್ದಾಳೆ. ಏನಿದು ಸ್ಟೋರಿ ನೋಡಿ….

ಏಳು ವರ್ಷಗಳ ಹಿಂದೆ ಪ್ಯಾರಿಸ್ಸಿನ ಮೇರಿ ಹೆಸರಿನ ಹುಡುಗಿಯು ಭಾರತಕ್ಕೆ ಸುತ್ತಾಡಲು ಬಂದಳು. 33 ವರ್ಷದ ಮೇರಿ ಇಲ್ಲಿ ಬಂದಮೇಲೆ ಭಾರತವನ್ನು ಸುತ್ತಾಡಲು, ಅಭ್ಯಸಿಸಲು ಒಬ್ಬ ಗೈಡ್ ನನ್ನ ಜೊತೆಗೆ ಬಾಡಿಗೆಗೆ ತೆಗೆದುಕೊಂಡಳು. ಭಾರತ ಸುತ್ತಾಡುವಾಗ ಮೇರಿ ಅದೇ ಗೈಡ್ ನ ಪ್ರೀತಿಯಲ್ಲಿ ಬಿದ್ದಳು.

ದೊರೆತ ಮಾಹಿತಿಗಳ ಪ್ರಕಾರ, ಸದ್ಯ ಮೇರಿಯು ಮಾಂಡು ಹೆಸರಿನ ಚಿಕ್ಕ ಊರಲ್ಲಿ ಜೀವನವನ್ನು ನಡೆಸುತ್ತಿದ್ದಾಳೆ. ಈಗ ಮೇರಿಯು ಸ್ವಲ್ಪ ಸ್ವಲ್ಪ ಹಿಂದಿ ಮಾತನಾಡುತ್ತಿದ್ದಾಳೆ. ಮಹತ್ವದ ವಿಷಯವೆಂದರೆ ಭಾರತದ ಸಂಸ್ಕೃತಿಯಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾಳೆ. ಅವಳು ಧರಿಸುವ ಉಡುಪುಗಳು ಸಹ ಸೀರೆ ಮತ್ತು ಸಲ್ವಾರ್ ಕಮೀಜ್ ಗಳಾಗಿವೆ.

ಎಲ್ಲ ಭಾರತೀಯ ಹಬ್ಬ-ಹರಿದಿನಗಳನ್ನು ಸರಿಯಾದ ವಿಧಿ-ವಿಧಾನಗಳೊಂದಿಗೆ ಮತ್ತು ಕುಟುಂಬದ ಜೊತೆಗೆ ಆಚರಿಸುತ್ತಾಳೆ. ತನ್ನ ಕುಟುಂಬದ ಸದಸ್ಯರಿಗಾಗಿ ಸ್ವತಃ ತಾನೇ ಅಡುಗೆಯನ್ನು ಮಾಡುತ್ತಾಳೆ. ಮೇರಿ ಹಬ್ಬ-ಹರಿದಿನಗಳಲ್ಲಿ ಸೀರೆಯುಟ್ಟು ತಯಾರಾಗುತ್ತಾಳೆ. ಸೀರೆಯುಡುವುದು ಮೇರಿಗೆ ತುಂಬಾ ಇಷ್ಟವಾದದ್ದು. ಮೇರಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಆಕೆಯ ತಂದೆ ಡಾಕ್ಟರ್ ಮತ್ತು ತಾಯಿ ಶಿಕ್ಷಕಿಯಾಗಿ ಕೆಲಸ ಮಾಡಿದವರು. ಮೇರಿ ಈಗಲೂ ಫ್ರಾನ್ಸ್ ನಲ್ಲಿಯ ಮಕ್ಕಳಿಗೆ ಆನ್ಲೈನ್ ಶಿಕ್ಷಣವನ್ನು ನೀಡುತ್ತಾರೆ.

Leave a Comment

Your email address will not be published. Required fields are marked *