‘ಕೇವಲ ತಾಯಿಯ ಗರ್ಭ ಮತ್ತೆ ಸ್ಮಶಾನ ಮಾತ್ರ ಸುರಕ್ಷಿತವಾಗಿವೇ”: ಸೊ#ಸೈಡ್ ನೋಟ್ ಬರೆದು ಆತ್ಮಹ#ತ್ಯೆ ಮಾಡಿಕೊಂಡ ಕಾಲೇಜ್ ವಿದ್ಯಾರ್ಥಿನಿ!!
‘ಶಿಕ್ಷಕರನ್ನು ನಂಬಬೇಡಿ ಮತ್ತು ಸಂಬಂಧಿಕರನ್ನು ನಂಬಬೇಡಿ …” ಈಗ ಹೆಣ್ಣುಮಕ್ಕಳಿಗೆ ತಾಯಿಯ ಗರ್ಭ ಮತ್ತು ಸ್ಮಶಾನ ಮಾತ್ರ ಸುರಕ್ಷಿತವಾಗಿದೆ”. ಆ#ತ್ಮಹತ್ಯೆ ಪತ್ರದಲ್ಲಿನ ಅತ್ಯಂತ ಭಾವನಾತ್ಮಕ ಮತ್ತು ಹೃದ#ಯವಿದ್ರಾವಕ ಸಾಲುಗಳಿವು. ಚೆನ್ನೈನ ಹೊರವಲಯದಲ್ಲಿ ವಾಸವಾಗಿರುವ 11ನೇ ತರಗತಿ ವಿದ್ಯಾರ್ಥಿಯೊಬ್ಬಳು ಸೂ#ಸೈಡ್ ನೋಟ್ ಬರೆದಿಟ್ಟು ಆ#ತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೋಲಿಸರು ನೀಡಿದ ಮಾಹಿತಿಯ ಪ್ರಕಾರ, ಚೆನ್ನೈ ಹೊರವಲಯದಲ್ಲಿ ಒಂದು ಕುಟುಂಬ ವಾಸವಾಗಿತ್ತು. ಅವರ ಮಗಳು 11 ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಳು. ಈ ಹುಡುಗಿ ಕಳೆದ ಶನಿವಾರ ಮನೆಯ ಛಾವಣಿಯ ಮೇಲೆ ನೇತಾ#ಡುವ ಅವಸ್ಥೆಯಲ್ಲಿ ಕಾಣಿಸಿಕೊಂಡಿದ್ದಾಳೆ. ಘಟನೆಯ ಕುರಿತು ತಪಾಸಣೆ ನಡೆಸಿದಾಗ ಪೊಲೀಸರಿಗೆ ಆ ಹುಡುಗಿಯ ಕೋಣೆಯಲ್ಲಿ ಒಂದು ಸೂ#ಸೈಡ್ ನೋಟ್ ದೊರಕಿದೆ. ಅದರಲ್ಲಿ’ ಕೇವಲ ತಾಯಿಯ ಗರ್ಭ ಮತ್ತು ಸ್ಮಶಾನ ಮಾತ್ರ ಸುರಕ್ಷಿತವಾಗಿವೆ’ ಎಂಬ ಸಾಲನ್ನು ಬರೆದದ್ದು ಕಂಡು ಬಂದಿದೆ ಹೀಗಾಗಿ ಈ ಸಾಲು ತುಂಬಾನೇ ವೈರಲ್ ಆಗುತ್ತಿದೆ.
ಛಾವಣಿಯ ಮೇಲೆ ತಮ್ಮ ಮಗಳು ನೇ#ತಾಡುತ್ತಿರುವದನ್ನು ಕಂಡು ದಂಪತಿಗಳಿಗೆ ತುಂಬಾ ಆ#ಘಾತ ಉಂಟಾಯಿತು. ತಕ್ಷಣ ಅವರು ಈ ಕುರಿತು ಪೊಲೀಸರಿಗೆ ತಿಳಿಸಿದರು. ತದನಂತರ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ತಲುಪಿದರು. ತದನಂತರ ಆ ಹುಡುಗಿಯ ಕೋಣೆಯನ್ನು ತಪಾಸಣೆ ಮಾಡಲು ಶುರು ಮಾಡಿದರು. ತಪಾಸಣೆ ಮಾಡುವಾಗ ಅವರಿಗೆ ಕೋಣೆಯಲ್ಲಿ ಒಂದು ಸೊ#ಸೈಡ್ ನೋಟ್ ಸಿಕ್ಕಿತು. ಈ ಕುರಿತು ಆಕೆಯ ಗೆಳೆಯ-ಗೆಳತಿಯರನ್ನು ವಿಚಾರಣೆ ಮಾಡಲಾಯಿತು. ಈ ವಿಚಾರಣೆಯಲ್ಲಿ ‘ಸ್ವತಃ ಈ ಹುಡುಗಿ ಗೆಳೆಯರ ಬಳಗದಿಂದ ದೂರ ಹೋಗಲು ಪ್ರಯತ್ನ ಮಾಡುತ್ತಿದ್ದಳು ಅಷ್ಟೇ ಅಲ್ಲ ಕೆಲವು ದಿವಸಗಳ ಹಿಂದೆ ತನ್ನಷ್ಟಕ್ಕೆ ತಾನೇ ಏಕಾಂತದಿಂದ ಇರುತ್ತಿದ್ದಳು’ ಎಂದು ತಿಳಿದು ಬಂದಿದೆ.
ರಾತ್ರಿ ಸಮಯದಲ್ಲಿ ಕೆಟ್ಟ ಕನಸ್ಸುಗಳು ಬರುತ್ತಿದ್ದವು, ನಿದ್ದೇನೆ ಬರುತ್ತಿರಲಿಲ್ಲ:-
‘Stop Sexual Harrasment’ ಈ ಶಬ್ದಗಳಿಂದ ಸೂಸೈಡ್ ನೋಟ್ ಪ್ರಾರಂಭವಾಗಿದ್ದು. ಈ ಹುಡುಗಿ ತನ್ನ ನೋಟ್ ನಲ್ಲಿ ಮುಂದೆ ಬರೆದದ್ದು ಏನೆಂದರೆ’ ನನಗೆ ಮುಂದೆ ಇದನ್ನು ಸಹಿಸಿಕೊಳ್ಳುವ ತಾಕತ್ತು ಇಲ್ಲದಾಗಿದೆ. ನನಗೆ ತುಂಬಾ ನೋವಾಗುತ್ತಿದೆ. ಇದಕ್ಕೆ ಯಾವುದೇ ತರಹದ ಮದ್ದು ಇಲ್ಲ. ನನ್ನಲ್ಲಿ ಕಲಿಯುವ ಕ್ಷಮತೆ ಸಹ ಉಳಿದಿಲ್ಲ. ಸತತವಾಗಿ ಕೆಟ್ಟ ಕನಸ್ಸು ಬರುತ್ತಿವೆ. ಪ್ರತಿಯೊಬ್ಬ ತಾಯಿ ತಂದೆಯರು ತಮ್ಮ ಮಕ್ಕಳನ್ನು( ಹುಡುಗರನ್ನು) ಹೆಣ್ಣು ಮಕ್ಕಳ ಕುರಿತು ಆದರದಿಂದ ನೋಡುವದನ್ನು ಕಲಿಸಬೇಕು, ಯಾವುದೇ ಸಂಬಂಧಿಕರ ಮತ್ತು ಶಿಕ್ಷಕರ ಮೇಲೆ ವಿಶ್ವಾಸ ತೋರಬೇಡಿ. ಕೇವಲ ಸುರಕ್ಷಿತವಾದ ಸ್ಥಳವೆಂದರೆ ತಾಯಿಯ ಗರ್ಭ ಮತ್ತು ಸ್ಮಶಾನ! ಅಷ್ಟೇ ಅಲ್ಲ ಹುಡುಗಿಯರ ಸಲುವಾಗಿ ಶಾಲೆಯು ಸಹ ಸುರಕ್ಷಿತವಾಗಿ ಉಳಿದಿಲ್ಲ”. ಎಂದು ತನ್ನ ಸೊ#ಸೈಡ್ ಲೆಟರ್ ನಲ್ಲಿ ಹುಡುಗಿ ಬರೆದಿದ್ದಳು.
ಈ ಪ್ರಕರಣದ ಕುರಿತು ತಪಾಸಣೆಯ ಸಲುವಾಗಿ ಮಾಂಗಡು ಪೊಲೀಸರು 4 ವಿಶೇಷ ಪಡೆಯನ್ನು ತಯಾರಿಸಿದ್ದಾರೆ. ಈ ಪಡೆಗಳು ಹುಡುಗಿಯ ಮೊಬೈಲ್ ಡಿಟೇಲ್ಸ್ ನಿಂದ ಅನೇಕ ವಿಷಯಗಳ ಕುರಿತು ತಪಾಸಣೆ ನಡೆಸುತ್ತಿದ್ದಾರೆ. ಆ ಹುಡುಗಿಯ ಮೊಬೈಲ್ ನಲ್ಲಿ ಯಾರು ಕರೆ ಮಾಡಿದ್ದಾರೆಯೋ ಅವರೆಲ್ಲರನ್ನೂ ಕರೆಸಿ ವಿಚಾರಣೆ ನಡೆಯುತ್ತಿದ್ದು, ಸಂಬಂಧಿತ ಯುವತಿ ಆ#ತ್ಮಹತ್ಯೆ ಏಕೆ ಮಾಡಿಕೊಂಡಿದ್ದಾಳೆ ಎಂಬುದು ಇನ್ನೂ ತಿಳಿದು ಬಂದಿಲ್ಲ.