ಕೇವಲ ಮೂರೂವರೆ ಗಂಟೆಯಲ್ಲಿ ತನ್ನ ತಾಯಿಯ ಅಂತ್ಯಕ್ರಿಯೆ ಮುಗಿಸಿ ದೇಶದ ಸೇವೆಗೆ ಮತ್ತೆ ಹಾಜರಾದ ಪ್ರಧಾನಮಂತ್ರಿ ಮೋದಿಜಿ!!

ನಮ್ಮ ದೇಶಕ್ಕೆ ಒಬ್ಬ ಉತ್ತಮ ನಾಯಕನ ಅವಶ್ಯಕತೆ ಇತ್ತು. ಅದು ಮೋದಿ ರೂಪದಲ್ಲಿ ಪೂರ್ಣವಾಯಿತು. ಮೋದಿಯವರನ್ನು ಇಂದು ಇಡೀ ಜಗತ್ತೇ ಗುರುತಿಸುತ್ತೆ. ಒಂದು ಕಾಲದಲ್ಲಿ ಭಾರತ ಅನ್ನೋ ಹೆಸರು ಕೇಳಿದರೆ ಕೀಳು ಮಟ್ಟದಿಂದ ನೋಡುತ್ತಿದ್ದ ಪರದೇಶದ ಜನರು ಇಂದು ಭಾರತ ಅಂದಕೂಡಲೇ ಕೈಗೆ ಕೈ ಕೊಟ್ಟು ಸ್ವಾಗತಿಸುವರು ಅದೆಲ್ಲ ಸಾಧ್ಯವಾದದ್ದು ನಮ್ಮ ಮೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ.

ನಮ್ಮ ದೇಶದ ಇಡೀ ಜನತೆಗೆ ಇಂದಿನ ದಿವಸ ಕರಾಳದಿವಸ ವೆಂದು ಹೇಳಬಹುದು. ಏಕೆಂದರೆ ಇಂದು ನಮ್ಮ ಮೆಚ್ಚಿನ ಪ್ರಧಾನಿಯವರ ತಾಯಿ ದೈವ ವಾಸಿಯಾಗಿದ್ದಾರೆ. ಸುದ್ಧಿ ಕೇಳಿ ಇಡೀ ದೇಶದ ಜನರೆಲ್ಲಾ ಅವರಿಗೆ ಶ್ರದ್ಧಾಂಜಲಿಯನ್ನು ಸೋಶಿಯಲ್ ಮೀಡಿಯಾ ಮುಖಾಂತರ ಸಲ್ಲಿಸಿದ್ದಾರೆ. ವಿಶೇಷ ವೆಂದರೆ ಒಬ್ಬ ಪ್ರಧಾನಿಯ ತಾಯಿ ಮರಣ ಹೊಂದಿದರೆ ಅವರ ಅಂತ್ಯಕ್ರಿಯೆ ಎಷ್ಟೊಂದು ಭವ್ಯದಿವ್ಯವಾಗಿ ಆಚರಿಸುತ್ತಾರೆ ಆದರೆ ನಮ್ಮ ದೇಶದ ಪ್ರಧಾನಿಯವರು ಎಲ್ಲರಿಗಿಂತಲೂ ವಿಭಿನ್ನ ಅಂತ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ನರೇಂದ್ರ ಮೋದಿಯವರ ತಾಯಿ ಹಿರಾಬೆನ್ ಅವರು ಕಳೆದ ಮೂರು ದಿವಸಗಳಿಂದ ಅವರ ಆರೋಗ್ಯ ತುಂಬಾನೇ ಹದಗೆಟ್ಟಿತ್ತು ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಇಂದು ನಸುಕಿನ ಸುಮಾರು ಆರು ಗಂಟೆಯ ಸಮಯದಲ್ಲಿ ಅವರು ಇಹಲೋಕ ತ್ಯಜಿಸಿದರು. ಈ ಸುದ್ಧಿಯನ್ನು ಕೇಳಿ ಮೋದಿಯವರ ದುಃಖ ಪಟ್ಟರು. ಅವರ ದುಃಖದಲ್ಲಿ ಇಡೀ ದೇಶದ ಜನರು ಸಹ ಸಹಭಾಗಿಯಾದರು. ಆದರೆ ಮುಂಜಾನೆ ಸುಮಾರು ಒಂಬತ್ತೂವರೆ ಸಮಯದವರೆಗೆ ಪ್ರಧಾನಿಯವರ ತಾಯಿಯ ಅಂತ್ಯಕ್ರಿಯೆ ಮುಗಿದಿತ್ತು. ಇದನ್ನು ಕೇಳಿ ನಿಮಗೂ ಆಶ್ಚರ್ಯವೆನಿಸಿರಬಹುದು ಆದರೆ ಇದು ಸತ್ಯ 6 ಗಂಟೆಗೆ ನಿಧನರಾದ ಪ್ರಧಾನಿ ತಾಯಿಯ ಅಂತ್ಯಕ್ರಿಯೆ 9:30 ಗಂಟೆಗೆ ಮುಗಿದಿತ್ತು ಕೇವಲ ಮೂರೂವರೆ ಗಂಟೆಯಲ್ಲಿ ಒಬ್ಬ ಪ್ರಧಾನಿ ತಾಯಿಯ ಅಂತ್ಯಕ್ರಿಯೆ ಮುಗಿದಿದೆ ಎಂದರೆ ಎಂಥ ಆಶ್ಚರ್ಯವಲ್ಲವೇ. ಇಷ್ಟೇ ಏಕೆ ಇಂದಿನ ಅಂತ್ಯಕ್ರಿಯೆ ಊಹೆಗೆ ನಿಲುಕದ್ದು ಮತ್ತು ಇಡೀ ಜಗತ್ತಿಗೆ ಮಾದರಿಯಾದದ್ದು.

*ದೇಶದ ಪ್ರಧಾನಿಯವರ ತಾಯಿಯ ಅಂತ್ಯಕ್ರಿಯೆಯ ಸಮಯದಲ್ಲಿ ಯಾವುದೇ ಆಡಂಬರ ನಡೆಯಲಿಲ್ಲ.
*ಬೆಳ್ಳಿಗೆಯಿಂದ ಸಂಜೆಯವರೆಗೆ ಯಾವುದೇ ರೀತಿಯ ಲೈವ್ ಶೋ ಸಹ ನಡೆಸಲಿಲ್ಲ.
* ಪ್ರಧಾನಿಯವರ ತಾಯಿಯ ಶವಯಾತ್ರೆಯನ್ನು ಯಾವುದೇ ರೀತಿಯ ನಿಯೋಜಿತ ಅಥವಾ ದೊಡ್ಡ ಮಟ್ಟದಲ್ಲಿ ನಡೆಸಲಿಲ್ಲ.
* ವಿ ಐಪಿ ತರಹ ಶವ ಯಾತ್ರೆಯ ಮಧ್ಯದಲ್ಲಿ ಯಾವುದೇ ಟ್ರಾಫಿಕ್ ಜಾಮ್ ಸಹ ಉದ್ಭವವಾಗಲಿಲ್ಲ.
* ಸಾರ್ವಜನಿಕರ ದರ್ಶನಕ್ಕಾಗಿ ಯಾವುದೇ ರೀತಿಯ ವ್ಯವಸ್ಥೆ ಸಹ ಮಾಡಲಿಲ್ಲ.
* ಶವ ಯಾತ್ರೆಯ ಸಮಯದಲ್ಲಿ ಯಾವುದೇ ರೀತಿಯ ಘೋಷಣೆ ಸಹ ಇರಲಿಲ್ಲ.
* ಅತ್ಯಸಂಸ್ಕಾರಕ್ಕಾಗಿ ಎಕರೆಗಟ್ಟಲೆ ಸ್ಥಳದ ವ್ಯವಸ್ಥೆ ಸಹ ಮಾಡಲಿಲ್ಲ.
* ಎಲ್ಲಕ್ಕೂ ಮುಖ್ಯವಾಗಿ ಶವದ ಮೇಲೆ ರಾಷ್ಟ್ರೀಯ ಧ್ವಜ ಸಹ ಹೊದಿಸಲಿಲ್ಲ.
* ಅಗ್ನಿಸ್ಪರ್ಶಕ್ಕಾಗಿ ಶ್ರೀಗಂಧದ ಕಟ್ಟಿಗೆ ಸಹ ಇರಲಿಲ್ಲ.
* ಸಾಮಾನ್ಯ ಜನರನ್ನು ಅಂತ್ಯಕ್ರಿಯೆ ಮಾಡುವ ಸ್ಥಳದಲ್ಲೇ ಇವರ ಅಂತ್ಯಕ್ರಿಯೆ ಮಾಡಲಾಯಿತು.

ಈ ರೀತಿಯಾದ ಅಂತ್ಯಕ್ರಿಯೆ ದೇಶದ ಜನತೆಗೆ ಒಂದು ಮಾದರಿಯಾಗಲಿದೆ. ಏಕೆಂದರೆ ಅಂತ್ಯಸಂಸ್ಕಾರದ ಹೆಸರಲ್ಲಿ ಏನೇನೋ ಮಾಡುವ ಜನರು ಇದನ್ನು ನೋಡಿ ತಿಳಿದುಕೊಳ್ಳಬೇಕು. ಸಾಮಾನ್ಯರಲ್ಲಿ ಒಬ್ಬ ಸಾಮಾನ್ಯ ಜನರಂತೆ ಇಂದು ಹಿರಾಬೆನ್ ಅವರ ಅಂತ್ಯಕ್ರಿಯೆ ನಡೆಯಿತು. ಈ ಕ್ರಿಯೆಯ ನಂತರ ತಕ್ಷಣವೇ ಮೋದಿಜಿಯವರು ದೇಶ ಸೇವೆ ಮಾಡಲು ಮರಳಿ ಹೋದರು. ಮೋದಿಜಿಯವರ ತಾಯಿ ಇನ್ನಿಲ್ಲ ಅನ್ನೋ ದುಃಖ ಒಂದೊಡೆ ಇದ್ದರೆ, ಮೋದಿಜಿಯವರಂತಹ ಉತ್ತಮ ನಾಯಕ ಪಡೆದಿದ್ದೇವೆ ಅನ್ನೋ ಖುಷಿ ಮತ್ತೊಂದೆಡೆ ಇದೆ. ಒಟ್ಟಾರೆಯಾಗಿ ತಾಯಿಯ ದುಃಖ ಸಹಿಸಿಕೊಳ್ಳುವ ಶಕ್ತಿ ಆ ದೇವರು ಮೋದಿಜಿಯರಿಗೆ ಕೊಡಲಿ ಎಂದು ದೇವರಲ್ಲಿ ಬೇಡಿಕೊಳ್ಳೋಣ.