ಕೇವಲ 15 ಅಡಿ ಜಾಗದಲ್ಲಿ ಕೇಸರಿ ಕೃಷಿ ಮಾಡಿ ಲಕ್ಷಾವಧಿ ರೂಪಾಯಿಗಳನ್ನು ಗಳಿಸುತ್ತಿರುವ ಸಹೋದರರು!
ಇಂದಿನ ಕಾಲದಲ್ಲಿ ನೌಕರಿ ಸಿಗುವದು ತುಂಬಾ ಸಮಸ್ಯೆಯಾಗಿದೆ. ಸಿಕ್ಕರೂ ಇನ್ನೊಬ್ಬರ ಕೈಕೆಳಗೆ ಬಾಸಿಂಗ್ ಮಾಡಿಸಿ ಕೊಳ್ಳುವುದು ಕೆಲವರಿಗೆ ಇಷ್ಟವಾಗುವುದಿಲ್ಲ. ಈ ಕಾರಣದಿಂದ ಅನೇಕ ತರುಣ ತರುಣಿಯರು ಸ್ವಂತ ವ್ಯವಸಾಯದಲ್ಲಿ ಮಗ್ನರಾಗುತ್ತಿದ್ದಾರೆ. ಇಲ್ಲವಾದರೆ ಕೃಷಿಯಲ್ಲಿ ಏನಾದರೂ ಹೊಸ ಹೊಸ ಪ್ರಯೋಗಗಳನ್ನು ಮಾಡಿ ಲಕ್ಷಾವಧಿ ರೂಪಾಯಿಗಳನ್ನು ಗಳಿಸುತ್ತಿದ್ದಾರೆ.
ಇಂದಿನ ಲೇಖನದಲ್ಲಿ ಇಬ್ಬರು ಸಹೋದರರು ಕೂಡಿ ಬರಿ 15 ಅಡಿ ಭೂಮಿಯಲ್ಲಿ ಸಾಫ್ರೋನ್ ಕೃಷಿ ಮಾಡಿ ಲಕ್ಷಾವಧಿ ರೂಪಾಯಿಗಳ ಆದಾಯ ಪಡೆಯುತ್ತಿರುವುದರ ಬಗ್ಗೆ ತಿಳಿದುಕೊಳ್ಳುವ.
ಇಬ್ಬರೂ ಸಹೋದರರು ಮನೆಯ ಮಾಳಿಗೆಯ ಮೇಲೆ 15 ಅಡಿ ಜಾಗದಲ್ಲಿ ಸಾಫ್ರೋನ್ ಕೃಷಿ ಮಾಡಿದ್ದಾರೆ. ಹರ್ಯಾಣದ ಹಿಸಾರ್ ಜಿಲ್ಲೆಯ ಕೋಥಕಾಲಾ ಹೆಸರಿನ ಊರಿನಲ್ಲಿಯ ನವೀನ್ ಮತ್ತು ಪ್ರವೀಣ್ ಹೆಸರಿನ ಇಬ್ಬರು ತರುಣರು ಕೂಡಿಕೊಂಡು ಈ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ಈ ಕೃಷಿಯನ್ನು ಅವರು ಏರೋಪೋನಿಕ್ ಪದ್ಧತಿಯಲ್ಲಿ ಮಾಡಿದ್ದಾರೆ. ಇದರಿಂದ ಸುಮಾರು 6 ರಿಂದ 9 ಲಕ್ಷ ರೂಪಾಯಿಗಳವರೆಗೆ ಆದಾಯ ಸಂಪಾದಿಸಿದ್ದಾರೆ. ಈ ಇಬ್ಬರು ಗೆಳೆಯರು ಪ್ರಾರಂಭಿಸಿದ ಈ ಪ್ರೋಜಕ್ಟ ನವೆಂಬರ್ 2020 ರಲ್ಲಿ ಮುಗಿಯಿತು. ಈ ಪ್ರಯೋಗದ ಮುಖಾಂತರ ಸುಮಾರು ಒಂದುವರೆ ಕೆಜಿ ಸಾಫ್ರೋನ್ ಉತ್ಪಾದನೆ ಮಾಡಿಕೊಂಡಿದ್ದರು. ವೈಶಿಷ್ಟ ಪೂರ್ಣವಾದ ವಿಷಯವೇನೆಂದರೆ ಪ್ರಯೋಗ ಮಾಡಲು ನಿಮಗೆ ಬೇರೆ ಜಾಗದ ಅವಶ್ಯಕತೆ ಇರುವುದಿಲ್ಲ.

ಸಾಫ್ರೋನ್ ಕೃಷಿ ಮಾಡಲು ಹಗಲು ಹೊತ್ತಿನಲ್ಲಿ ಇದಕ್ಕೆ 20 ಡಿಗ್ರಿ ಸೆಲ್ಸಿಯಸ್ ಮತ್ತು ರಾತ್ರಿಯಲ್ಲಿ 10 ಡಿಗ್ರಿ ಸೆಲ್ಸಿಯಸ್ ವಾತಾವರಣದ ಅವಶ್ಯಕತೆ ಇದೆ. ಹಾಗೆಯೇ 90% ಹ್ಯೂಮಸ್ ಇರುವುದು ಅವಶ್ಯಕತೆ ಇದೆ

ಈ ಕೃಷಿಗಾಗಿ ಸೂರ್ಯ ಪ್ರಕಾಶದ ಅವಶ್ಯಕತೆ ಇದೆ. ಆದ್ದರಿಂದ ಸರಿಯಾಗಿ ಸೂರ್ಯಪ್ರಕಾಶ ಬೀಳುವ ಸ್ಥಳದಲ್ಲಿಯೇ ಇದರ ಪ್ರಯೋಗ ಮಾಡಬೇಕು. ಒಂದು ವೇಳೆ ಸೂರ್ಯ ಪ್ರಕಾಶವು ಸಾಧ್ಯವಾಗದಿದ್ದರೆ ಅಲ್ಲಿ ಲೈಟನ್ನು ಉಪಯೋಗಿಸಬಹುದು. ಆದರೆ ಉಪಯೋಗಿಸುವ ಲೈಟ್ ಬ್ಯಾಕ್ಟೀರಿಯಾ ಫ್ರೀ ಆಗಿರುವುದು ಅಷ್ಟೇ ಅಗತ್ಯ.

ಮಾರ್ಕೆಟಿನಲ್ಲಿ ಸಾಫ್ರೋನ್ ತುಂಬಾ ಬೇಡಿಕೆ ಇದೆ. ಆದ್ದರಿಂದ ಸರಿಯಾದ ನಿಯೋಜನೆಯ ಮುಖಾಂತರ ಈ ಪ್ರಯೋಗವನ್ನು ಮಾಡಿದರೆ ಇದರಿಂದ ಲಕ್ಷ ರೂಪಾಯಿಗಳನ್ನು ಗಳಿಸಬಹುದಾಗಿದೆ. ಈ ಸಾಫ್ರೋನ್ ನಿಂದ ಸಾಬೂನು, ಫೇಸ್ ಮಾಸ್ಕ್ ಈ ರೀತಿಯ ಅನೇಕ ಪದಾರ್ಥಗಳನ್ನು ತಯಾರಿಸುತ್ತಾರೆ.