ಕೊರೆಯುವ ಛಳಿಯಿಂದ ರಕ್ಷಿಸಿಕೊಳ್ಳಲು ನಾಯಿ ಮಾಡಿದ ವಿಶೇಷ ಐಡಿಯಾದ ವಿಡಿಯೋ ಆಗುತ್ತಿದೆ ವೈರಲ್! ನೋಡಿ.
ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನಲ್ಲಿ ಯಾವಾಗ ಎಂಥ ವಿಡಿಯೋಗಳು ಸಂಚಲನ ಮೂಡಿಸುತ್ತವೆ ಎಂಬುದು ಹೇಳಲು ಸಾಧ್ಯವಿಲ್ಲ. ಇಲ್ಲಿ ಸದ್ಯಕ್ಕಂತೂ ಮನುಷ್ಯರ ವಿಡಿಯೋಗಳಿಗಿಂತ ಪ್ರಾಣಿಗಳ ವಿಡಿಯೋ ಹೆಚ್ಚು ಫೇಮಸ್ ಆಗುತ್ತಿರುವುದು ಕಂಡುಬರುತ್ತಿದೆ. ಯಾಕೆಂದರೆ ಮನುಷ್ಯನಿಗಷ್ಟೇ ಬುದ್ಧಿ ಇದೆ ಎಂಬುದು ಎಲ್ಲರೂ ತಿಳಿದುಕೊಳ್ಳುತ್ತೇವೆ. ಆದರೆ ನಿಸರ್ಗ ಪ್ರಾಣಿಗಳಿಗೂ ಸಹ ಅದ್ಭುತವಾದ ಬುದ್ಧಿ ನೀಡಿದ್ದಾನೆ ಎಂದು ಅನೇಕ ಪ್ರಾಣಿಗಳ ವಿಡಿಯೋಗಳಿಂದ ಸಾಬೀತಾಗಿದೆ.
ಈಗ ಈ ವಿಡಿಯೋದಲ್ಲಿ ನಾಯಿಯೊಂದು ಕೊರೆಯುವ ಚಳಿಯಿಂದ ರಕ್ಷಣೆ ಪಡೆಯಲು ಮಾಡಿದ ಐಡಿಯಾ ನೇಟಿಜನ್ಸ್ ಗಳ ಮನ ಗೆದ್ದಿದೆ.
ಹೇಗೆ ಅಂತೀರಾ?
ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನಾಯಿಯು ಹಿಂದಿನ ಎರಡು ಕಾಲುಗಳನ್ನು ಮೇಲಕ್ಕೆತ್ತಿ ಬರೀ ಮುಂದಿನ ಎರಡೇ ಕಾಲುಗಳ ಮೇಲೆ ನಡೆಯುತ್ತಿರುವುದು ಕಂಡು ಬರುತ್ತಿದೆ. ತೀವ್ರ ಚಳಿ ಮತ್ತು ಕೆಳಗೆ ಇರುವ ಹಿಮದಿಂದ ನಾಯಿಯು ತನ್ನ ಕಾಲನ್ನು ಹಿಮದ ಮೇಲೆ ಇಡಲು ಹಿಂಜರಿಯುತ್ತಿದೆ. ಇದರಿಂದ ಹೇಗಾದರೂ ಮಾಡಿ ರಕ್ಷಣೆ ಪಡೆದುಕೊಳ್ಳಬೇಕೆಂಬ ಉದ್ದೇಶದಿಂದ ನಾಯಿಯು ಈ ರೀತಿಯಾಗಿ ಬರೀ ಮುಂದಿನ ಕಾಲುಗಳ ಮೇಲೆ ಅಷ್ಟೇ ನಡೆಯಬೇಕೆಂದು ಪ್ರಯತ್ನ ಮಾಡುತ್ತಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಐಡಿಯಾದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೀ ಈ ನಾಯಿಯ ಚರ್ಚೆಯೇ ನಡೆಯುತ್ತಿದೆ. ಇದರ ಈ ತಮಾಷೆಯ ವರ್ತನೆಯನ್ನು ನೋಡಿ ನೆಟ್ಟಿಗರು ಲೈಕ್ ಮತ್ತು ಕಾಮೆಂಟ್ಸ್ ಗಳನ್ನು ಮಾಡುತ್ತಿದ್ದಾರೆ.
ವಿಡಿಯೋ ನೋಡಿ
Cold.. cold.. cold.. 😂 pic.twitter.com/uGvHjrfwg9
— Buitengebieden (@buitengebieden_) December 30, 2021
ಪ್ರಸ್ತುತ ವಿಡಿಯೋವನ್ನು Buitengebieden ಹೆಸರಿನ ಅಕೌಂಟ್ ನಿಂದ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ ಈ ವಿಡಿಯೋವನ್ನು 1 ಲಕ್ಷ 30 ಸಾವಿರವರೆಗೆ ವೀಕ್ಷಿಸಲಾಗಿದೆ. ಈ ತಮಾಷೆಯ ವಿಡಿಯೋ ನೋಡಿ ಅನೇಕರು ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ಮೂಲಕ ಹೊರಹಾಕಿದ್ದಾರೆ. ಒಬ್ಬನು ಅದ್ಭುತವಾದ ವಿಡಿಯೋ ಎಂದರೆ, ಇನ್ನೊಬ್ಬ ಇಂತಹ ವಿಡಿಯೋಗಳು ತುಂಬಾ ಕಡಿಮೆ ನೋಡಲು ಸಿಗುತ್ತವೆ ಎಂದಿದ್ದಾನೆ.