Articles

ಕೊಟ್ಯಾವಧಿ ₹ ಗಳ ಸಂಪತ್ತಿನ ಉದ್ಯಮಿಯ ಪತ್ನಿ ಓಡಿ ಹೋದಳು ಆಟೋ ಡ್ರೈವರ್ ಜೊತೆಗೆ, ಹೋಗುವಾಗ ಜೊತೆಯಲ್ಲಿ 47 ಲಕ್ಷವನ್ನೂ…

ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಅನೇಕ ಚಿತ್ರ ವಿಚಿತ್ರ ಘಟನೆಗಳು ಕೇಳಲು ಸಿಗುತ್ತವೆ. ಇಂಥದ್ದೇ ಒಂದು ಘಟನೆ ಮಧ್ಯಪ್ರದೇಶದ ಇಂದೋರ್ ನಿಂದ ವರದಿಯಾಗಿದೆ. ಇಲ್ಲಿಯ ಒಬ್ಬ ದೊಡ್ಡ ಉದ್ಯಮಿಯ ಹೆಂಡತಿ ಆಟೋ ಡ್ರೈವರ್ ಜೊತೆಗೆ ಓಡಿ ಹೋಗಿದ್ದಾಳೆ. ಇನ್ನೊಂದು ಮಹತ್ವದ ವಿಷಯವೆಂದರೆ ಆಟೋ ಚಾಲಕ ಈಕೆಗಿಂತಲೂ 13 ವರ್ಷ ಚಿಕ್ಕವನಿದ್ದಾನೆ.

ಈ ಘಟನೆ ಅಕ್ಟೋಬರ್ 13 ರಂದು ನಡೆದಿದೆ. ಘಟನೆ ನಡೆದ ಎರಡು ವಾರಗಳ ನಂತರ ಈಗ ಪತಿಯು ಪೊಲೀಸರ ಕಡೆಗೆ ತಕರಾರು ದಾಖಲು ಮಾಡಿದ್ದಾನೆ. ಪತ್ನಿ ಕಾಣೆಯಾಗಿದ್ದಾಳೆ ಎಂದು ಉದ್ಯಮಿ ಪತಿಯು ತಕರಾರನ್ನು ದಾಖಲಿಸಿದ್ದಾನೆ. ತನ್ನ ತಕರಾರಿನಲ್ಲಿ ಪತ್ನಿಯು ಓಡಿ ಹೋಗುವಾಗ ಜೊತೆಯಲ್ಲಿ 47 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಹೋಗಿದ್ದಾಳೆ ಎಂದು ಉದ್ಯಮಿ ಹೇಳಿದ್ದಾನೆ.

ಮಾಹಿತಿಯ ಪ್ರಕಾರ ಆಟೋ ಚಾಲಕ ಉದ್ಯಮಿಯ ಪತ್ನಿಗೆ ಕಾಯಂ ಮನೆಗೆ ತಂದು ಬಿಡುತ್ತಿದ್ದನು. ಹೀಗಿರುವಾಗ ಅಕ್ಟೋಬರ್ 13 ರಂದು ಈ ಮಹಿಳೆಯು ಮನೆಗೆ ಬರಲಿಲ್ಲ. ಅದಾದ ನಂತರ ಮನೆಯಲ್ಲಿಟ್ಟಿದ್ದ ನಗದು 47 ಲಕ್ಷ ರೂಪಾಯಿಗಳು ಸಹ ಕಾಣಲಿಲ್ಲ. ಆಗ ತನ್ನ ಪತ್ನಿ ಓಡಿ ಹೋಗಿದ್ದಾಳೆ ಎಂಬ ಸಂಶಯ ಆ ಉದ್ಯಮಿಗೆ ಬಂದಿದೆ.

ಟೈಮ್ಸ್ ನೌ ನೀಡಿದ ವರದಿಯ ಪ್ರಕಾರ ಈತನ ಹತ್ತಿರ ದೊಡ್ಡ ಪ್ರಮಾಣದಲ್ಲಿ ಜಮೀನು ಇದೆಯಂತೆ. ಇದೇ ಕಾರಣಕ್ಕೆ ಮನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹಣ ಇಡುತ್ತಿದ್ದನಂತೆ. ಸದ್ಯ ಪೊಲೀಸರು ಈ ಕೇಸಿನ ತನಿಖೆ ನಡೆಸಿದ್ದಾರೆ. ಮತ್ತು ಪ್ರಾಥಮಿಕ ಹಂತದಲ್ಲಿ ಪೊಲೀಸರು ಉದ್ಯಮಿಯ ಹೆಂಡತಿ ಹಾಗೂ ಆಕೆಯ ಪ್ರಿಯಕರನಿಗೆ ಶೋಧಿಸುವ ಕಾರ್ಯ ಜೋರಾಗಿ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆಟೋ ಚಾಲಕನ ಹೆಸರು ಇಮ್ರಾನ್ ಇದ್ದು ಆತನ ವಯಸ್ಸು 32 ಇದೆಯಂತೆ. ಸದ್ಯ ಆತ ವಾಸಿಸುವ ಎಲ್ಲ ಸ್ಥಳಗಳಲ್ಲಿ ರೇಡ್ ಹಾಕಲಾಗಿದೆ. ಇನ್ನೊಂದು ಆಘಾತಕಾರಿ ವಿಷಯವೇನೆಂದರೆ, ಈ ರೇಡ್ ನಲ್ಲಿ ಆತನ ಮಿತ್ರನ ಮನೆಯಲ್ಲಿ 33 ಲಕ್ಷ ರೂಪಾಯಿಗಳ ನಗದು ಹಣ ಸಿಕ್ಕಿದೆ.

Leave a Comment

Your email address will not be published. Required fields are marked *