ಕ್ರಾಸಿಂಗ್ ನಲ್ಲಿ ಟ್ರೈನ್ ಕಾರಿಗೆ ಹೊಡೆಯಿತು ಡಿಕ್ಕಿ; ಒಳಗೆ ಲೇಡಿ ಡ್ರೈವರ್! ಭೀಕರ ದೃಶ್ಯದ ಫೋಟೋ ವೈರಲ್

ರೈಲ್ವೆ ಕ್ರಾಸಿಂಗ್ ನಲ್ಲಿ ಅನೇಕ ಭೀಕರ ಘಟನೆಗಳು ನಡೆಯುತ್ತವೆ. ಇದರ ಬಗ್ಗೆ ರೈಲ್ವೆ ಡಿಪಾರ್ಟ್ ಮೆಂಟ್ ಎಷ್ಟೇ ಕಾಳಜಿ ಮತ್ತು ಜಾಗೃತಿ ವಹಿಸಲು ಹೇಳಿದರೂ ಸಹ ಏನಾದರೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಎಷ್ಟೋ ಜನರು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಅದೃಷ್ಟವಶಾತ್ ರೀತಿಯಲ್ಲಿ ಬಚಾವ್ ಆಗಿರುತ್ತಾರೆ. ಇಂಥದ್ದರಲ್ಲಿ ಕಾರಿಗೆ ಟ್ರೈನ್ ಡಿಕ್ಕಿ ಹೊಡೆದಾಗ ಏನಾಗುತ್ತದೆ? ಎಂಬುದರ ಬಗ್ಗೆ ಸ್ವಲ್ಪ ವಿಚಾರ ಮಾಡಿದರೂ ಸಾಕು ಮೈ ಜುಂ ಎನ್ನುತ್ತದೆ. ಅದರಲ್ಲೂ ವ್ಯಕ್ತಿಗೆ ಸ್ವಲ್ಪವೂ ಗಾಯವಾಗದೆ ಉಳಿಯುವುದು ಎಂದರೆ ದೇವರ ದೊಡ್ಡ ಕೃಪೆಯೇ ಎನ್ನಬಹುದು.

ಇದೇ ರೀತಿಯ ಘಟನೆಯೊಂದು ಇಂಗ್ಲೆಂಡ್ ನಿಂದ ವರದಿಯಾಗಿದೆ. ಇಲ್ಲಿ ಮಹಿಳಾ ಡ್ರೈವರ್ ಸಾವಿನಿಂದ ಸ್ವಲ್ಪದರಲ್ಲಿಯೇ ತಪ್ಪಿಸಿಕೊಂಡಿದ್ದಾಳೆ. ಈ ದುರ್ಘಟನೆಯಲ್ಲಿ ಆದ ಕಾರಿನ ಅವಸ್ಥೆ ನೋಡಿದರೆ ಯಾರೇ ಆಗಲಿ ಡ್ರೈವರ್ ಮಟಾಷ್ ಎನ್ನುತ್ತಾರೆ. ಆದರೆ ಈ ಘಟನೆಯಲ್ಲಿ ಮಹಿಳೆಗೆ ಚಿಕ್ಕ ಪುಟ್ಟ ಗಾಯವು ಸಹ ಆಗಿಲ್ಲ. ಪ್ರಸ್ತುತ ಘಟನೆ ಎಕ್ಸ್ ಪ್ರೆಸ್ ವೇ ನಲ್ಲಿಯ ರೈಲ್ವೆ ಕ್ರಾಸಿಂಗ್ ಮೇಲೆ ಘಟಿಸಿದೆ.

ಏನು ಮತ್ತು ಹೇಗೆ ನಡೆಯಿತು?

ಮೀಡಿಯಾ ರಿಪೋರ್ಟ್ ಪ್ರಕಾರ, ಸ್ಯಾಂಡ್ರಾ ರೋಕೊ ಹೆಸರಿನ ಮಹಿಳೆಯು ಕಾರು ಚಲಾಯಿಸುತ್ತಿರುವಾಗ ಕ್ರಾಸಿಂಗ್ ಪೂರ್ವದಲ್ಲೇ ನಿಲ್ಲಿಸಲು ಯತ್ನಿಸಿದ್ದಾಳೆ, ಆದರೆ ಕಾರಿನ ಮೇಲಿನ ನಿಯಂತ್ರಣ ತಪ್ಪಿದೆ. ಮಹಿಳೆಯು ಹೇಳುವ ಹಾಗೆ, ಅಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಿಮವೃಷ್ಟಿಯಾಗಿದ್ದರಿಂದ ಕಾರಿಗೆ ನಾನು ಎಷ್ಟೇ ಬ್ರೇಕ್ ಹಚ್ಚಿದರೂ ಕಾರು ನನ್ನ ನಿಯಂತ್ರಣದಲ್ಲಿ ಬರಲೇ ಇಲ್ಲ. ಅದು ಜಾರುತ್ತ ಜಾರುತ್ತ ನೇರ ರೈಲಿನ ಟ್ರ್ಯಾಕ್ ಮೇಲೆಯೇ ಹೋಗಿ ನಿಂತಿದೆ. ಕಾರು ಅಲ್ಲಿ ಹೋಗಿ ನಿಂತಿದೆ ಎನ್ನುವಷ್ಟರಲ್ಲಿ ಬದಿಗೆ ಟ್ರೈನ್ ವೇಗವಾಗಿ ಬರುತ್ತಿರುವುದು ಕಂಡು ಬಂದಿದೆ. ಇಷ್ಟೆಲ್ಲ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿಯೇ ನಡೆಯಿತು, ಅಲ್ಲಿ ವಿಚಾರ ಮಾಡುವಷ್ಟು ಸಹ ಸಮಯ ನನ್ನಲ್ಲಿ ಇರಲಿಲ್ಲ ಎಂದು ಮಹಿಳೆ ತನ್ನ ಅನುಭವವನ್ನು ಶೇರ್ ಮಾಡಿದ್ದಾಳೆ.

ಒಂದು ಮಾತ್ರ ನಿಜ ಆ ಸಮಯದಲ್ಲಿ ನನ್ನ ಅಂತರಂಗದಲ್ಲಿ ಯಾವುದೋ ಒಂದು ಶಕ್ತಿ ಸಂಚಾರವಾಯಿತು ಎನ್ನುವ ಹಾಗೆ ನಾನು ಕಾರಿನಿಂದ ಹೊರಗೆ ಬಿದ್ದೆನು ಎನ್ನುವಷ್ಟರಲ್ಲಿ ಟ್ರೈನ್ ಕಾರಿಗೆ ಜೋರಾಗಿ ಡಿಕ್ಕಿ ಹೊಡೆದಾಗಿತ್ತು. ರೈಲಿನ ಜೋರಾದ ಹೊಡೆತದಲ್ಲಿ ಕಾರಿನ ಅರ್ಧಭಾಗ ಸಂಪೂರ್ಣವಾಗಿ ಪೀಸ್ ಪೀಸ್ ಆದರೆ ಇನ್ನರ್ಧ ಭಾಗ ಟ್ರ್ಯಾಕಿನ ಹೊರಗೆ ಬಂದಿತ್ತು. ಅಲ್ಲಿ ಬರೀ ಒಂದು ಕ್ಷಣ ಲೇಟಾಗಿದ್ದರೂ ನಾನು ಉಳಿಯುತ್ತಿರಲಿಲ್ಲ ಎಂದು ಸ್ಯಾಂಡ್ರಾ ಹೇಳುತ್ತಾಳೆ.