ಕ್ರ್ಯಾಷ್ ಟೆಸ್ಟ್ ನಲ್ಲಿ ಮಿಂಚಿದ ದೇಸಿ ಕಂಪನಿ ಮಹೀಂದ್ರಾ ಕಾರುಗಳು: ಸೇಫ್ಟಿ ವಿಚಾರದಲ್ಲಿ ಮಹಿಂದ್ರಾ ಕಾರುಗಳೇ ಬೆಸ್ಟ್!

ಗ್ಲೋಬರ್ ಕ್ರ್ಯಾಶ್ ಟೆಸ್ಟ್ ಸೇಫ್ಟಿ ರೇಟಿಂಗ್ ನಲ್ಲಿ ದೇಶಿಯ ಕಂಪನಿಯಾದ ಮಹಿಂದ್ರ ಅಂಡ್ ಮಹಿಂದ್ರ ತಯಾರಿಸಿರುವ ಕಾರುಗಳು ತಮ್ಮ ಜೋರು ಹಾಗೂ ಜಬರ್ದಸ್ತು ಏನೆಂಬುದನ್ನು ಪ್ರದರ್ಶನ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿವೆ ಹಾಗೂ ವಿದೇಶಿ ಕಾರುಗಳಿಗೆ ಸಡ್ಡು ಹೊಡೆಯುತ್ತಿವೆ‌. ಮಹಿಂದ್ರ ಕಂಪನಿಯ ಅದ್ಭುತ ತಯಾರಿಕೆ ಆಗಿರುವ ಸಬ್ ಕಾಂಪ್ಯಾಕ್ಟ್ ಎಸ್ ಯು ವಿ , ಮಹೀಂದ್ರಾ ಎಸ್.ಯು.ವಿ. 300 ಕಾರಿಗೆ ಕ್ರ್ಯಾಶ್ ಟೆಸ್ಟ್ ನಲ್ಲಿ 5 ಸ್ಟಾರ್ ಗಳ ರೇಟಿಂಗ್ ಬಂದಿದೆ. ಇದೇ ಸಂದರ್ಭದಲ್ಲಿ ಇದೇ ಕಂಪನಿಯ ಮಹಿಂದ್ರ ತಾರ್ ಮತ್ತು ಮಹಿಂದ್ರ ಮರಾಜ್ಜೋ ಕಾರುಗಳಿಗೆ 4.4 ಸ್ಟಾರ್ ರೇಟಿಂಗ್ ದಕ್ಕಿದ್ದು, ಈ ಮೂಲಕ ಮಹೀಂದ್ರ ಕಾರುಗಳು ಸುರಕ್ಷತೆಯ ವಿಚಾರದಲ್ಲಿ ಉತ್ಕೃಷ್ಟ ದರ್ಜೆಯವು ಎನ್ನುವ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿವೆ.

ಮಹಿಂದ್ರ ಕಂಪನಿಯ ಕಾರಗಳನ್ನು ಬಳಸುವ ಬಳಕೆದಾರರಿಗೆ ಈ ಸುದ್ದಿ ಸಂತೋಷವನ್ನು ನೀಡುವಂತಿದ್ದು, ಇದರ ನಂತರ ಮತ್ತೊಂದು ದೇಶೀಯ ಕಂಪನಿಯಾದ ಟಾಟಾ ಕೂಡ ತನ್ನ ಕಾರುಗಳ ಕ್ರ್ಯಾಶ್ ಟೆಸ್ಟಿಂಗ್ ವಿಷಯದಲ್ಲಿ ಕೂಡ ಉತ್ತಮ ರೇಟಿಂಗ್ ತನ್ನದಾಗಿಸಿಕೊಂಡಿದೆ ಎನ್ನಲಾಗಿದೆ. ವಾಸ್ತವದಲ್ಲಿ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಬಳಕೆದಾರರು ಕೂಡ ಕಾರುಗಳನ್ನು ಕೊಳ್ಳುವಾಗ ಸುರಕ್ಷತೆಗೆ ಹೆಚ್ಚಿನ ಮಹತ್ವವನ್ನು ಹಾಗೂ ಗಮನವನ್ನು ನೀಡುತ್ತಿದ್ದಾರೆ. ಆದ ಕಾರಣ ಕಾರು ಉತ್ಪಾದನೆ ಮಾಡುವ ಕಂಪನಿಗಳು ಕೂಡ ಹಿಂದೆಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ಕಾರುಗಳ ಸುರಕ್ಷತೆಯ ಕಡೆ ಗಮನ ಹರಿಸುತ್ತಿವೆ. ಕಾರುಗಳಲ್ಲಿರುವ ಸುರಕ್ಷತಾ ವೈಶಿಷ್ಟತೆಗಳನ್ನು ಕಾಲಕಾಲಕ್ಕೆ ಪರೀಕ್ಷಿಸಲು ಗ್ಲೋಬಲ್ ಎನ್ ಸಿ ಎ ಪಿ ಟೆಸ್ಟ್ ಗಳನ್ನು ಕೂಡ ನಡೆಸಲಾಗುತ್ತಿದೆ.

Mahindra xuv 300

ಕ್ರ್ಯಾಶ್ ಟೆಸ್ಟ್ ನಡೆಸುವ ಮೂಲಕ ವಿವಿಧ ಕಂಪನಿಗಳ ಕಾರುಗಳಲ್ಲಿ ಅಳವಡಿಸಲಾಗಿರುವ ಸುರಕ್ಷತೆಯ ವ್ಯವಸ್ಥೆಯನ್ನು ಪರಿಶೀಲಿಸಿ, ಅವುಗಳ ಸಾಮರ್ಥ್ಯಕ್ಕನುಗುಣವಾಗಿ ಸ್ಟಾರ್ ರೇಟಿಂಗ್ ನೀಡಲಾಗುತ್ತಿದೆ. ಈಗ ಆ ಟೆಸ್ಟ್ ಗಳ ಪರಿಣಾಮವಾಗಿ ದೇಶದ ಅತ್ಯುತ್ತಮ ಕಾರುಗಳಲ್ಲಿ ಮಹಿಂದ್ರ ಕಂಪನಿಯ ಮಹೀಂದ್ರಾ ಎಸ್ ಯು ವಿ ಕೂಡಾ ಒಂದು ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಕಾರಿನ ಕ್ರ್ಯಾಶ್ ಟೆಸ್ಟ್ ವೇಳೆಯಲ್ಲಿ ವಯಸ್ಕರ ಆಕ್ಯುಪೆಂಟ್ ಪ್ರೋಟೆಕ್ಷನ್ ವಿಭಾಗದಲ್ಲಿ ಈ ಕಾರು
5 ಸ್ಟಾರ್ ಗಳನ್ನು ಪಡೆದುಕೊಂಡಿದ್ದರೆ, ಮಕ್ಕಳ ಅಕ್ಯುಪೆಂಟ್ ಪ್ರೊಟೆಕ್ಷನ್ ವಿಭಾಗದಲ್ಲಿ 4 ಸ್ಟಾರ್ ಗಳನ್ನು ತನ್ನದಾಗಿಸಿಕೊಂಡಿದೆ.

Mahindra Thar

ತಲೆ ಕುತ್ತಿಗೆ ಹಾಗೂ ಮೊಣಕಾಲಿನ ರಕ್ಷಣೆಗೆ ಈ ಕಾರುಗಳು ಅತ್ಯುತ್ತಮ ಎನ್ನಲಾಗುತ್ತಿದೆ. ಅದೇ ಸಂದರ್ಭದಲ್ಲಿ ಪ್ರಯಾಣಿಕರ ದೃಷ್ಟಿಯಿಂದಲೂ ಕೂಡ ಈ ಕಾರು ಬಹಳಷ್ಟು ಸುರಕ್ಷಿತ ಎಂದು ಕೂಡಾ ಹೇಳಲಾಗಿದೆ. ಇತ್ತೀಚೆಗಷ್ಟೇ ಮಹೇಂದ್ರ ಕಂಪನಿ ಬಿಡುಗಡೆ ಮಾಡಿರುವ ನೆಕ್ಸ್ಟ್ ಜನರೇಶನ್ ಮಹಿಂದ್ರ ಥಾರ್ ಕಾರು ಕೂಡ ಗ್ಲೋಬಲ್ ಎನ್ ಸಿ ಎ ಪಿ ಪರೀಕ್ಷೆಯಲ್ಲಿ 4 ಸ್ಟಾರ್ ಗಳನ್ನು ಪಡೆದುಕೊಂಡಿದೆ. ಈ ಕಾರು ವಯಸ್ಕರ ಆಕ್ಯುಪೆಂಟ್ ಪ್ರೊಟೆಕ್ಷನ್ ವಿಭಾಗದಲ್ಲಿ 17 ಕ್ಕೆ 12.52 ಅಂಕಗಳನ್ನು ಪಡೆದುಕೊಂಡಿದ್ದು, ಮಕ್ಕಳ ಆಕ್ಯುಪೆಂಟ್ ಪ್ರೊಟೆಕ್ಷನ್ ವಿಭಾಗದಲ್ಲಿ 49 ಕ್ಕೆ 41.11 ಅಂಕಗಳನ್ನು ತನ್ನದಾಗಿಸಿಕೊಂಡಿದೆ.

Mahindra Morazzo

ಈ ಕಾರಿನ ಸುರಕ್ಷತಾ ವ್ಯವಸ್ಥೆಯಿಂದ ಕ್ರ್ಯಾಶ್ ಟೆಸ್ಟ್ ವೇಳೆಯಲ್ಲಿ ಚಾಲಕ ಹಾಗೂ ಪ್ರಯಾಣಿಕರ ತಲೆ, ಕುತ್ತಿಗೆ ಹಾಗೂ ಎದೆಯ ಭಾಗಗಳಿಗೆ ಗಾಯಗಳಾಗದಂತೆ ರಕ್ಷಿಸಲು ಸಾಧ್ಯವಾಗಿದೆ. ಇದೆ ಗ್ಲೋಬಲ್ ಎನ್ ಸಿ ಎ ಪಿ ಕ್ರ್ಯಾಷ್ ಟೆಸ್ಟ್ ನಲ್ಲಿ ಮಹಿಂದ್ರ ಕಂಪನಿಯ ಮತ್ತೊಂದು ಕಾರು ಮಹಿಂದ್ರ ಮರಾಜ್ಜೋ ಕಾರು 4 ಸ್ಟಾರ್ ಗಳನ್ನು ಪಡೆದುಕೊಂಡಿದೆ. 7 ಆಸನಗಳ ಈ ಕಾರಿನಲ್ಲಿ ಸುರಕ್ಷತೆಗೆ ವಿಶೇಷವಾದ ಗಮನವನ್ನು ನೀಡಲಾಗಿದೆ ಎನ್ನಲಾಗಿದ್ದು ವಯಸ್ಕರ ಆಕ್ಯುಪೆಂಟ್ ಪ್ರೊಟೆಕ್ಷನ್ ವಿಭಾಗದಲ್ಲಿ ಇದು 4 ಸ್ಟಾರ್ ಗಳನ್ನು ಪಡೆದಿದೆ ಎನ್ನಲಾಗಿದೆ. ಟೆಸ್ಟ್ ವೇಳೆ ಕಾರಿನಲ್ಲಿ ಇರಿಸಲಾಗಿದ್ದ ನಕಲಿ ಮಾನವ ಆಕೃತಿಯ ತಲೆ ಹಾಗೂ ಕುತ್ತಿಗೆಗೆ ಯಾವುದೇ ರೀತಿಯ ಡ್ಯಾ ಮೇ ಜ್ ಆಗಿಲ್ಲ ಎಂದು ತಿಳಿದುಬಂದಿದೆ.