Articles

NO ಪೆಟ್ರೋಲ್, NO ಚಾರ್ಜಿಂಗ್; ಆದರೂ ಓಡುವದು ಬೈಕ್! ರೈತನ ಮಗ ಮಾಡಿದನು ಅದ್ಭುತ ದೇಶಿ ಸಾಧನೆ…

ಸದ್ಯ ನಡೆಯುತ್ತಿರುವ ರಶಿಯಾ ಮತ್ತು ಯುಕ್ರೇನ್ ಯುದ್ಧದಿಂದಾಗಿ ಪೆಟ್ರೋಲ್ ಬೆಲೆ ಗಗನಕ್ಕೆ ಮುಟ್ಟಲಿದೆ ಎಂಬ ಸುದ್ದಿಗಳು ಈಗಾಗಲೇ ಮೀಡಿಯಾದಲ್ಲಿ ಓಡಾಡುತ್ತಿವೆ. ಸದ್ಯದ ಪರಿಸ್ಥಿತಿಯಲ್ಲಿ ಕಾಮನ್ ಮ್ಯಾನ್ ಈ ಊಹಾಪೋಹದ ಸುದ್ದಿಗಳನ್ನು ಕೇಳಿ ಹೆದರಿ ಹೆಪ್ಪುಗಟ್ಟಿದ್ದಾನೆ. ಆದರೆ ಈ ಎಲ್ಲವೂಗಳ ಮೇಲೆ ರೈತನ ಹುಡುಗನೊಬ್ಬ ಯಶಸ್ವಿಯಾದ ದೇಸಿ ಐಡಿಯಾ ಒಂದನ್ನು ಶೋಧಿಸಿದ್ದಾನೆ. ಈತ ತಯಾರಿಸಿದ ಬೈಕ್ ನೀವು ಎಷ್ಟೇ ಓಡಿಸಿದರೂ ಇಂಧನಕ್ಕಾಗಿ ಒಂದೇ ಒಂದು ರೂಪಾಯಿ ಖರ್ಚಾಗುವುದಿಲ್ಲ. ಈ ಹುಡುಗ ತಯಾರಿಸಿದ ಬೈಕ್ ಒಂದು ವೇಳೆ ರಸ್ತೆ ಮೇಲೆ ಓಡಾಡಲು ಶುರುಮಾಡಿದರೆ ಸದ್ಯ ಎಲೆಕ್ಟ್ರಿಕ್ ಬೈಕ್ ಗಳನ್ನು ತಯಾರಿಸುತ್ತಿರುವ ಕಂಪನಿಗಳಿಗೆ ದೊಡ್ಡ ತಲೆನೋವಾಗಲಿದೆ.

ನಮ್ಮ ನೆರೆಯ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ನಿವಾಸಿಯಾದ ದೀಪಕ್ ನಾಯಕನವರೆ ಹೆಸರಿನ ವ್ಯಕ್ತಿಯೊಬ್ಬ ಮೇಲಿಂದ ಮೇಲೆ ಪ್ರಯೋಗಗಳನ್ನು ಮಾಡುತ್ತಾ ಈ ಶೋಧವನ್ನು ಮಾಡಿದ್ದಾನೆ. ಆತ ಇದರ ಮೇಲೆ ಸದ್ಯ ವಿವಿಧ ಕೆಲಸಗಳನ್ನು ಸಹ ಮಾಡುತ್ತಿದ್ದಾನೆ. ಎಲೆಕ್ಟ್ರಿಕ್ ಸಹಾಯದಿಂದ ಓಡಾಡುವ ಅನೇಕ ಬೈಕ್ಗಳು ಸದ್ಯ ಮಾರುಕಟ್ಟೆಯಲ್ಲಿ ಬಂದಿವೆ. ಆದರೆ ಅದಕ್ಕೆ ಚಾರ್ಜ್ ಮಾಡುವ ಸಲುವಾಗಿ ಸಾಕಷ್ಟು ಸಮಯ ಬೇಕಾಗುತ್ತಿದೆ. ಈ ಹಳ್ಳಿ ಹೈದ ಇದೇ ದೋಷವನ್ನು ದೂರ ಮಾಡುತ್ತಾ ಸರಿಯಾಗಿ ಅದರ ಮೇಲೆಯೇ ಉಪಾಯವನ್ನು ಹುಡುಕಿದ್ದಾನೆ. ವಾಹನ ನಿಂತಿರಬೇಕಾದರೂ ಸಹ ಚಾರ್ಜ್ ಆಗುತ್ತಲೇ ಇರಬೇಕು ಆ ರೀತಿಯ ವ್ಯವಸ್ಥೆಯನ್ನು ತನ್ನ ಬೈಕ್ನಲ್ಲಿ ಮಾಡಿದ್ದಾನೆ. ಇನ್ನೊಂದು ವಿಶೇಷವೆಂದರೆ ಇದು ತಯಾರಿಸಿದ ಬೈಕ್ ಎಲ್ಲಿ ಬೇಕಾದಲ್ಲಿ ಎಷ್ಟು ಕಿಲೋಮೀಟರ್ ಬೇಕಾದರೂ ಹಣವಿಲ್ಲದೆ ಪುಗಸಟ್ಟೆಯಾಗಿ ತೆಗೆದುಕೊಂಡು ತಿರುಗಾಡಬಹುದಾಗಿದೆ. ಅಷ್ಟೇ ಅಲ್ಲ ಮನೆಯಲ್ಲಿ ಕರೆಂಟ್ ಹೋದರೂ ಸಹ ಇದೇ ಗಾಡಿಯ ವೈರ್ ಕನೆಕ್ಷನ್ ನೀಡಿ ಮನೆಯಲ್ಲಿಯ ಬಲ್ಬುಗಳನ್ನು ಸಹ ಪ್ರಜ್ವಲಿಸಬಹುದಾಗಿದೆ. ದೀಪಕ್ ತೋಟದಲ್ಲಿಯ ಬೆಳೆಗಳಿಗೆ ಔಷಧಿಯನ್ನು ಸಿಂಪಡಿಸುವ ಸಲುವಾಗಿಯೂ ಇದರ ಸಹಾಯವನ್ನು ತೆಗೆದುಕೊಂಡಿದ್ದಾನೆ.

ದೀಪಕ್ ತನ್ನ ಬೈಕ್ ನಲ್ಲಿ 48 ವೋಲ್ಟ್ ನ ಬ್ಯಾಟರಿ ಕೂಡಿಸಿದ್ದಾನೆ. ಇದರ ಹೊರತಾಗಿ ಬ್ಯಾಟರಿ ಚಾರ್ಜ್ ಮಾಡುವ ಸಲುವಾಗಿ ಕೆಲವೊಂದು ವಿದ್ಯುತ್ ಉಪಕರಣಗಳನ್ನು ಮತ್ತು 750 ವ್ಯಾಟ್ ನ ಮೋಟಾರ್ ಸಹ ಸೆಟ್ ಮಾಡಿದ್ದಾನೆ. ಇದರ ಮೇಲೆ ಆತನ ಬೈಕ್ ಓಡಿಯೇ ಓಡುತ್ತದೆ.

ಮನೆಯಲ್ಲಿ ಇದ್ದ ಹಳೆಯ ಹೀರೋ ಹೋಂಡಾ ಬೈಕ್ ಮೇಲೆ ದೀಪಕ್ ಈ ಎಲ್ಲ ಪ್ರಯೋಗಗಳನ್ನು ಮಾಡಿದ್ದಾನೆ. ವಾಹನ ಚಲಿಸದೆ ನಿಂತಾಗಲೂ ಸಹ ಚಾರ್ಜ್ ಆಗುತ್ತಿರುತ್ತದೆ, ಇನ್ನು ಚಲಿಸುವಾಗಲಂತೂ ಚಾರ್ಜ್ ಆಗುತ್ತದೆ ಎಂದು ಹೇಳುವ ಅವಶ್ಯಕತೆಯೇ ಇಲ್ಲ. ಇದನ್ನು ಟೆಸ್ಟ್ ಮಾಡುವ ಸಲುವಾಗಿ ದೀಪಕ್ ಸುಮಾರು 100 ಕಿಲೋಮೀಟರ್ ಪ್ರವಾಸಮಾಡಿ ಬಂದಿದ್ದಾನೆ. ಈಗ ಆತನ ಬೈಕ್ ನಲ್ಲಿ ಯಾವುದೇ ರೀತಿಯ ಇಂಧನ ಅಥವಾ ಆಯಿಲ್ ಇಲ್ಲವೇ ಇಲ್ಲ. ಇದೇ ಕಾರಣದಿಂದ ಆತನ ಬೈಕ್ 100% ಪೊಲ್ಯೂಷನ್ ಫ್ರೀ ವಾಹನವಾಗಿದೆ. ಜೊತೆಗೆ ಇಂಧನಕ್ಕಾಗಿ ಒಂದೇ ಒಂದು ರೂಪಾಯಿಗಳನ್ನು ಖರ್ಚುಮಾಡದೆ ನಿಮಗೆ ಎಷ್ಟು ಬೇಕೋ ಅಷ್ಟು ಪುಗಸಟ್ಟೆಯಾಗಿ ತಿರುಗಾಡಬಹುದು. ಮೊದಮೊದಲು ದೀಪಕ್ ನಿಗೆ ಹಳೆಯ ವಾಹನಕ್ಕಾಗಿ 40 ರಿಂದ 50 ಸಾವಿರ ರೂಪಾಯಿಗಳು ಖರ್ಚು ಮಾಡಬೇಕಾಯಿತು. ಒಂದು ವೇಳೆ ಇದರ ಪೇಟೆಂಟ್ ಸಿಕ್ಕರೆ ಇದು ತುಂಬಾ ಕಡಿಮೆ ಖರ್ಚಿನಲ್ಲಿ ಆಗುತ್ತದೆ. ಅಷ್ಟೇ ಅಲ್ಲ ಇದನ್ನು ಇನ್ನಷ್ಟು ಲೇಟೆಸ್ಟ್ ಮಾಡೆಲ್ ನಲ್ಲಿ ತಯಾರಿಸಲು ಸಾಧ್ಯವಿದೆ ಎಂದು ದೀಪಕ್ ಹೇಳುತ್ತಾನೆ. ಸದ್ಯ ದೀಪಕ್ ನ ಈ ವಾಹನ ರೈತವರ್ಗದಲ್ಲಿ ಚರ್ಚೆಯ ವಿಷಯವಾಗಿದೆ. ದೀಪಕ್ ನಿಗೆ ಒಂದು ವೇಳೆ ದೊಡ್ಡ ದೊಡ್ಡ ಕಂಪನಿಗಳ ಸಹಯೋಗ ಸಿಕ್ಕಿದ್ದೇ ಆದರೆ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ವಾಹನಗಳಲ್ಲಿ ನಂಬರ್ ವನ್ ಆಗುವುದು. ಸದ್ಯ ಯುದ್ಧ ಪರಿಸ್ಥಿತಿಯ ಈ ಅಸ್ಥಿರ ಸಮಯದಲ್ಲಿ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಸಂದರ್ಭದಲ್ಲಿ ದೀಪಕ್ ತಯಾರಿಸಿದ ಈ ದೇಶಿ ಐಡಿಯಾದ ಬೈಕ್ ನಿಜಕ್ಕೂ ಅದ್ಭುತವಾಗಿದೆ ಎಂದೇ ಹೇಳಬಹುದು. ಈ ಬೈಕ್ ಚಲಿಸದೆ ಹಾಗೇಯೆ ನಿಂತರೂ ಸಹ ಚಾರ್ಜಿಂಗ್ ಆಗುತ್ತಲೇ ಇರುತ್ತದೆ. ಮತ್ತು ಅದರಲ್ಲಿ 150 ವೊಲ್ಟ್ ವಿದ್ಯುತ್ ನಿರ್ಮಿತಿ ಆಗುತ್ತಿರುತ್ತದೆ. ಇದು ಸುಮ್ಮನೆ ಹಾಗೆಯೇ ಹೇಳುತ್ತಿಲ್ಲ, ಮಲ್ಟಿಮೀಟರ್ ತಾಗಿಸಿ ನೋಡಿದಾಗ ಗೊತ್ತಾಗುತ್ತದೆ. ಒಟ್ಟಿನಲ್ಲಿ ಮಾರ್ಕೆಟ್ ನಲ್ಲಿ ಬರಲಿರುವ ಎಲೆಕ್ಟ್ರಿಕ್ ಬೈಕ್ ಗಳ ಸಲುವಾಗಿ ಅನೇಕ ಇಂಜಿನಿಯರ್ಗಳು ವಿವಿಧ ರೀತಿಯ ಪ್ರಯೋಗ ಮಾಡುತ್ತಿರುವಾಗ ರೈತನ ಮಗನೊಬ್ಬ ಮಾಡಿದ ಅದ್ಭುತ ಸಂಶೋಧಕರಿಗೆ ನಿಜಕ್ಕೂ ವಿಚಾರಮಾಡಲು ಹಚ್ಚುತ್ತಿದೆ.

Leave a Comment

Your email address will not be published. Required fields are marked *