Articles

ಫೋಟೋಗ್ರಾಫರ್ ಸೆರೆ ಹಿಡಿದ ಮೋಸ್ಟ್ ಕನ್ಫ್ಯೂಸ್ಡ್ ಪಿಕ್ಚರ್! ಚಿತ್ರದಲ್ಲಿ ಝೀಬ್ರಾಗಳು ಎಷ್ಟಿವೆ? Pic ಸರಿಯಾಗಿ ನೋಡಲು ಫೋಟೋ ಮೇಲೆ ಕ್ಲಿಕ್ ಮಾಡಿ…

ಸೋಶಿಯಲ್ ಮೀಡಿಯಾದಲ್ಲಿ ದಿನಂಪ್ರತಿ ಅನೇಕ ಫೋಟೋ ಮತ್ತು ವಿಡಿಯೋಗಳು ನೇಟಿಜನ್ಸ್ ಗಳ ತಲೆ ಕೆಡಿಸುತ್ತವೆ. ಈಗ ಇದೇ ರೀತಿಯ ಒಂದು ಮೋಸ್ಟ್ ಕನ್ಫ್ಯೂಸ್ಡ್ ಪಿಕ್ಚರ್ ಸೋಶಿಯಲ್ ಸೈಟ್ ನಲ್ಲಿ ತುಂಬಾನೇ ಸಂಚಲನ ಮೂಡಿಸಿದೆ. ಇದರ ಹಿಂದೆ ನಿಜಕ್ಕೂ ಫೋಟೋಗ್ರಾಫರ್ ನ ಅದ್ಭುತವಾದ ಪರಿಶ್ರಮವಿದೆ ಎಂದು ತಿಳಿದು ಬರುತ್ತದೆ.

ಕಾಡಿನಲ್ಲಿ ಸೆರೆ ಹಿಡಿದ ಈ ಫೋಟೋದಲ್ಲಿ ಝೀಬ್ರಾಗಳು ಕಂಡು ಬರುತ್ತಿವೆ. ಸರಿಯಾಗಿ ನೋಡಲು ಈ ಫೋಟೋ ತುಂಬಾನೇ ನಾರ್ಮಲ್ ಆಗಿದೆ ಎನಿಸುತ್ತದೆ. ನಂತರ ಈ ಫೋಟೋ ತನ್ನ ಕಡೆಗೆ ಒಮ್ಮೆಲೆ ನಮ್ಮ ದೃಷ್ಟಿಯನ್ನು ಸೆಳೆದುಕೊಳ್ಳುತ್ತದೆ ಆಗ ಮಾತ್ರ ಕನ್ಫ್ಯೂಸ್ ಆಗಲು ಶುರು ಆಗುತ್ತದೆ. ಮೊದಮೊದಲು ನೋಡಲು ಈ ಚಿತ್ರದಲ್ಲಿ ಏನೋ ಒಂದು ವಿಚಿತ್ರ ಸನ್ನಿವೇಶವೇ ಕಂಡು ಬರುತ್ತದೆ ಮತ್ತು ಚಿತ್ರದಲ್ಲಿ ಎಷ್ಟು ಝೀಬ್ರಾಗಳು ಇವೆ ಹಾಗೂ ಅವು ಹೇಗೆ ನಿಂತಿವೆ ಎಂಬುದೇ ಸರಿಯಾಗಿ ಗೊತ್ತಾಗುವುದ ಕಾರಣ ಅದೇ ಪ್ರಶ್ನೆಯಾಗಿ ಸತಾಯಿಸುತ್ತದೆ.

ಸರಿಯಾಗಿ ಮತ್ತು ಸೂಕ್ಷ್ಮವಾಗಿ ಫೋಟೋವನ್ನು ಗಮನಿಸುತ್ತಾ ಹೋದ ಹಾಗೆ ಚಿತ್ರ ತಿಳಿಯಲು ಶುರು ಆಗುತ್ತದೆ. ಆದರೂ ಇದನ್ನು ತಿಳಿಯಲು ಕಡಿಮೆ ಎಂದರೆ 2 ನಿಮಿಷವಾದರೂ ಬೇಕೇ ಬೇಕು ಎನಿಸುತ್ತದೆ ಅಲ್ಲವೇ ಮಿತ್ರರೇ? 2 ನಿಮಿಷದ ಒಳಗೆ ತಿಳಿಯುವದು ಕಷ್ಟವಾಗುತ್ತದೆ.

ಉತ್ತರ…
ಚಿತ್ರದಲ್ಲಿ ಎರಡು ಝೀಬ್ರಾಗಳಿವೆ. ತಾಯಿ ಝೀಬ್ರಾ ಮುಂದೆ ಮುಖ ಮಾಡಿ ಹುಲ್ಲನ್ನು ತಿನ್ನುತ್ತಾ ನಿಂತರೆ ಅದರ ಮರಿ ಝೀಬ್ರಾ ತಾಯಿಗೆ ಆನಿಸಿ ಅದರ ಹಿಂದೆಯೇ ಎಡಕ್ಕೆ ಮುಖಮಾಡಿ ನಿಂತಿದೆ. ಈ ಚಿತ್ರ ಮೊದಮೊದಲು ನೋಡಲು ಸ್ವಲ್ಪವೂ ಏನು ತಿಳಿಯದೇ ಗೊಂದಲವನ್ನು ನಿರ್ಮಾಣ ಮಾಡುತ್ತದೆ. ನಂತರ ಮಾತ್ರ ಸಹಜವಾಗಿ ತಿಳಿದು ಬರುತ್ತದೆ.

ಈ ಫೋಟೋವನ್ನು ಇನ್ಸ್ಟಾಗ್ರಾಮ್ ಮುಖಾಂತರ ಶೇರ್ ಮಾಡಲಾಗಿದೆ. ಈ ಫೋಟೋ ನೋಡಿದ ನೇಟಿಜನ್ಸ್ ಗಳಲ್ಲಿ ಕೆಲವರು ತುಂಬಾ ಸುಂದರವಾದ ಕ್ಲಿಕ್ ಎಂದರೆ ಇನ್ನೂ ಕೆಲವರು ಈ ಫೋಟೋವನ್ನು ಎಡಿಟ್ ಮಾಡಿರಬೇಕು ಎಂದು ಸಂಶಯ ವ್ಯಕ್ತ ಮಾಡಿದ್ದಾರೆ. ನಿಮ್ಮ ಕಣ್ಣುಗಳಿಗೆ ಏನು ಕಂಡು ಬರುತ್ತಿದೆ ಹೇಳ್ತೀರಾ ಫ್ರೆಂಡ್ಸ್? ಇದು ಏಡಿಟ್ಟಾ? ಇಲ್ಲ ಒರಿಜಿನಲ್ ಕ್ಲಿಕ್ಕಾ?

Leave a Comment

Your email address will not be published. Required fields are marked *