Articles

ಪ್ರಸಿದ್ಧ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರು ‘ಕಚ್ಚಾ ಬಾದಾಮ್ ಸಾಂಗ್ ಮೇಲೆ ಮಾಡಿದ ಭರ್ಜರಿ ಡ್ಯಾನ್ಸ್ ಆಯಿತು ವೈರಲ್! ಒಂದು ಸಲ ನೋಡಿಯೇ ಬಿಡಿ.

ಬಂಗಾಳಿ ಹಾಡಾದ ಕಚ್ಚಾ ಬಾದಾಮ್ ಇನ್ನೂವರೆಗೂ ಸೋಶಿಯಲ್ ಮೀಡಿಯಾದಲ್ಲಿ ತನ್ನ ಪ್ರಭಾವ ಕಡಿಮೆ ಮಾಡಿಲ್ಲ. ಇಲ್ಲಿಯವರೆಗೆ ಈ ಹಾಡಿನ ಮೇಲೆ ಅನೇಕ ರೀಲ್ಸ್ ಗಳು ತಯಾರಾಗುತ್ತಲೇ ಇವೆ. ಈ ಹಾಡಿನ ಮೇಲೆ ಇಲ್ಲಿಯವರೆಗೆ ಅನೇಕ ಸೆಲೆಬ್ರಿಟಿ ಗಳು ಡ್ಯಾನ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಈಗಾಗಲೇ ಹರಿಬಿಟ್ಟಿದ್ದಾರೆ. ಈಗ ಈ ಪಟ್ಟಿಗೆ ಪ್ರಸಿದ್ಧ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಅವರೊಬ್ಬರು ಸೇರಿದ್ದಾರೆ. ಇವರು ಮಾಡಿದ ಕಚ್ಚಾ ಬಾದಾಮ್ ಹಾಡಿನ ಮೇಲಿನ ಡ್ಯಾನ್ಸ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ವೈರಲ್ ಆಗುತ್ತಿದೆ.

ಈ ಹಾಡಿನ ಮೇಲೆ ಸಿಂಧು ಅವರು ಡ್ಯಾನ್ಸ್ ಮಾಡುವಾಗ ಹಳದಿ ಬಣ್ಣದ ಡ್ರೆಸ್ ತೊಟ್ಟಿದ್ದಾರೆ. ಈ ಡ್ರೆಸ್ ನಲ್ಲಿ ಪಿವಿ ಸಿಂಧು ಅವರು ತುಂಬಾ ಚೆನ್ನಾಗಿಯೂ ಕಾಣುತ್ತಿದ್ದಾರೆ. ಈ ಹಾಡನ್ನು ನೇಟಿಜನ್ಸ್ ಗಳು ತುಂಬಾ ಇಷ್ಟಪಟ್ಟಿದ್ದಾರೆ. ಬರೀ ಎರಡೇ ದಿನಗಳ ಹಿಂದೆ ಪಿವಿ ಸಿಂಧು ಅವರು ಶೇರ್ ಮಾಡಿದ ಈ ವಿಡಿಯೋವನ್ನು ಇಲ್ಲಿಯವರೆಗೆ ಸುಮಾರು 5 ಲಕ್ಷ ಜನರು ವೀಕ್ಷಿಸಿದ್ದಾರೆ. ಮತ್ತು ಸಾವಿರಾರು ಜನರು ಲೈಕ್ ಮಾತು ಕಾಮೆಂಟ್ ಮಾಡಿದ್ದಾರೆ.

ವಿಡಿಯೋ ನೋಡಿ

ಪ್ರಸ್ತುತ ಈ ಹಾಡನ್ನು ಹಾಡಿದ ವ್ಯಕ್ತಿ ಯಾವುದೇ ಸೆಲೆಬ್ರಿಟಿ ಇರದೆ ರಸ್ತೆಯ ಮೇಲೆ ಹಾಡು ಹಾಡಿಕೊಂಡು ಕಡಲೆಕಾಯಿ ಮಾರುವ ಸಾಮಾನ್ಯ ವ್ಯಕ್ತಿಯಾಗಿದ್ದಾನೆ. ಆತನ ಹೆಸರು ಭುವನ್ ಬದ್ಯಾಕರ್ ಅಂತ ಇದೆ. ಈತನು ಹಾಡುತ್ತಾ ತನ್ನ ಕಸಬನ್ನು ಮಾಡಿಕೊಂಡಿದ್ದಾಗ ಯಾವನೋ ಒಬ್ಬನು ಆತನ ಹಾಡಿನ ಯೂನಿಕ್ ಸ್ಟೈಲ್ ನೋಡಿ ವಿಡಿಯೋ ಮಾಡಿ ಇಂಟರ್ನೆಟ್ ನಲ್ಲಿ ವೈರಲ್ ಮಾಡಿದ್ದಾನೆ. ಇದರ ನಂತರ ಈ ಹಾಡಿನ ಮೇಲೆ ಜನರು ಮತ್ತು ಸೆಲೆಬ್ರಿಟಿಗಳು reels ಮತ್ತು ಡ್ಯಾನ್ಸ್ ಮಾಡಿ ಭುವನ್ ಗೆ ಒಂದೇ ರಾತ್ರಿಯಲ್ಲಿ ಪ್ರಸಿದ್ಧಿಯನ್ನು ತಂದುಕೊಟ್ಟು ಆತನ ಜೀವನವನ್ನೇ ಬದಲಾಯಿಸಿದರು.

Leave a Comment

Your email address will not be published. Required fields are marked *