ಕ್ಷೌರಿಕನಿಂದ ಶೇವ್ ಮಾಡಿಸಿಕೊಂಡಿದ್ದು ಯುವಕನಿಗೆ ಬಿತ್ತು ದುಬಾರಿ; ಕ್ಷೌರಿಕ ಖುಷ್; ಗ್ರಾಹಕ ಫುಸ್! ನೋಡಿ ಈ ವಿಡಿಯೋ…

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಅನೇಕ ವಿಡಿಯೋಗಳು ಶೇರ್ ಮಾಡಲಾಗುತ್ತಿದೆ. ಸೋಶಿಯಲ್ ಮೀಡಿಯಾ ಜಗತ್ತಿನಲ್ಲಿ ಮನೋರಂಜನೆ ಮತ್ತು ವಿಚಿತ್ರವಾದ ವಿಡಿಯೋಗಳಿಗೆ ತುಂಬಾನೇ ಮೆಚ್ಚುಗೆ ದೊರೆಯುತ್ತಿದೆ. ಹಾಗಾಗಿ ಜನರು ಪ್ರಸಿದ್ಧಿಯನ್ನು ಪಡೆದುಕೊಳ್ಳುವ ಸಲುವಾಗಿ ಅನೇಕ ಪ್ರಕಾರದ ವಿಡಿಯೋ ಮಾಡಿ ಅವುಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ.

ಅಲ್ಲದೆ ಸದ್ಯಕ್ಕೆ ಫ್ರ್ಯಾಂಕ್ ವೀಡಿಯೋ ಮಾಡುವದು ಅಂತೂ ತುಂಬಾ ಟ್ರೆಂಡ್ ನಲ್ಲಿದೆ. ಯಾರು ಯಾವಾಗ ಫ್ರ್ಯಾಂಕ್ ಮಾಡಿ ಅದರ ವೀಡಿಯೋ ಮಾಡುತ್ತಿರುತ್ತಾರೆ ಅನ್ನೋದು ಹೇಳೋಕೆ ಸಾಧ್ಯಾನೆ ಇಲ್ಲ. ಕೆಲವು ಫ್ರ್ಯಾಂಕ್ ವಿಡಿಯೋಗಳು ತುಂಬಾ ಆಶ್ಚರ್ಯಚಕಿತ ಮತ್ತು ಮನೋರಂಜನೆ ಭರಿತ ವಾಗಿರುತ್ತವೆ, ಅವುಗಳನ್ನು ನೋಡಿದ ನಂತರ ಜನರು ಆ ವೀಡಿಯೋಗಳನ್ನು ತಮ್ಮ ಗೆಳೆಯರೊಂದಿಗೆ ಅಥವಾ ಗೆಳತಿಯರೊಂದಿಗೆ ಶೇರ್ ಮಾಡುತ್ತಿದ್ದಾರೆ.

ಸದ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ಆತಹದೇ ಒಂದು ಫ್ರ್ಯಾಂಕ್ ವಿಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋ ನೋಡಿದ ನಂತರ ನೀವು ಸಹ ನಿಮ್ಮ ನಗೆಯನ್ನು ತಡೆಯಲು ಸಾಧ್ಯವೇ ಆಗುವದಿಲ್ಲ. ಏಕೆಂದರೆ ಈ ವೀಡಿಯೋ ತುಂಬಾ ಡೇಂ#ಜರ್ ದೊಂದಿಗೆ ಮನರಂಜನೆಯ ವೀಡಿಯೋ ಇದಾಗಿದೆ.

ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ನೀವು ನೋಡಬಹುದು, ಒಬ್ಬ ವ್ಯಕ್ತಿ ಸಲೂನ್ ನಲ್ಲಿ ತನ್ನ ಗಡ್ಡ ಶೇವಿಂಗ್ ಮಾಡಿಕೊಳ್ಳಲು ಕುರ್ಚಿಯ ಮೇಲೆ ಕುಳಿತುಕೊಂಡಿರುತ್ತಾನೆ. ಆ ಸಮಯದಲ್ಲಿ ಈ ವ್ಯಕ್ತಿಯೊಂದಿಗೆ ಒಂದು ಪ್ರಕಾರದ ಫ್ರ್ಯಾಂಕ್ ಮಾಡಲಾಗುತ್ತದೆ ಅದನ್ನು ಕಂಡು ಈ ವ್ಯಕ್ತಿ ಕೆಲವು ಸೆಕೆಂಡ್ ಗಳ ಸಲುವಾಗಿ ಉಸಿರಾಡುವದೇ ನಿಲ್ಲಿಸಿ ಜಾಗದಲ್ಲೇ ಬೇಶುದ್ದ ಅವಸ್ಥೆಯಲ್ಲಿ ಬೀಳುತ್ತಾನೆ.

ಅಷ್ಟಕ್ಕೂ ಅಲ್ಲಿ ನಡೆದದ್ದು ಏನೆಂದರೆ ಈ ಯುವಕ ಕಣ್ಣು ಮುಚ್ಚಿಕೊಂಡು ಕುಳಿತುಕೊಂಡಿರುತ್ತಾನೆ. ಇದನ್ನು ಕಂಡು ಶೇವಿಂಗ್ ಮಾಡುವ ವ್ಯಕ್ತಿ ಮನದಲ್ಲಿಯೇ ನಕ್ಕು ಈತನ ಜೊತೆಗೆ ಫ್ರ್ಯಾಂಕ್ ಮಾಡಬೇಕು ಎಂದು ನಿರ್ಧಾರ ಮಾಡಿ ಆತನ ಕುತ್ತಿಗೆಯ ಮೇಲೆ ಕೆಂಪು ಬಣ್ಣದ ದ್ರವ ಪದಾರ್ಥ ಸಿಂಪಡಿಸುತ್ತಾನೆ. ಆ ಪದಾರ್ಥ ಆ ಯುವಕನ ಕುತ್ತಿಗೆ ಮತ್ತು ಮೈ ಮೇಲೆ ಹೊದಿಸಿದ ಬಟ್ಟೆಯ ಮೇಲೆ ಸಿಂಪಡಿಸುತ್ತಾನೆ. ಅದನ್ನು ಕಂಡರೆ ಏನೋ ನಿಜವಾಗಿ ಕುತ್ತಿಗೆಯಿಂದ ರ#ಕ್ತ ಹರಿಯುತ್ತಿದೆ ಅನ್ನೋ ಹಾಗೆ ಕಾಣುತ್ತಿರುತ್ತದೆ. ತದನಂತರ ಸಲೂನ್ ವ್ಯಕ್ತಿ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಶೇವ್ ಮಾಡುತ್ತಿರುವ ತರಹ ನಾಟಕ ಮಾಡುತ್ತಾನೆ ಆಗ ಕತ್ತಿ ಕುತ್ತಿಗೆಗೆ ಹತ್ತಿದ ಹಾಗೆ ಆಕ್ಟ್ ಮಾಡಿ ರ#ಕ್ತ ಹರಿಯುತ್ತಿದೆ ಅಂದುಕೊಂಡು ಕೈಯಲ್ಲಿ ವಸ್ತ್ರವನ್ನು ಹಿಡಿದು ಅದನ್ನು ಒರೆಸಲು ಪ್ರಯತ್ನ ಮಾಡುತ್ತಾನೆ ಆಗ ಹೌಹಾರಿ ಕಣ್ಣು ತೆರೆದ ವ್ಯಕ್ತಿ ತನ್ನ ಮೈತುಂಬಾ ರ#ಕ್ತವನ್ನು ಕಂಡು ತನ್ನ ಕುತ್ತಿಗೆಗೆ ಜೋರಾಗಿ ಕತ್ತಿ ಹತ್ತಿದೆ ಅಂದುಕೊಂಡು ಬಹಳಷ್ಟು ಹೆದರುತ್ತಾನೆ ಅಲ್ಲದೆ ಗಾಬರಿಯಾಗಿ ಜೋರಾಗಿ ಚಿರಾಡಿ ಜಾಗದಲ್ಲೇ ಬೇಶುದ್ದ ಬೀಳುತ್ತಾನೆ. ಆಗ ಶೇವಿಂಗ್ ಮಾಡುವ ವ್ಯಕ್ತಿ ಎಷ್ಟೋ ಎಬ್ಬಿಸಲು ಪ್ರಯತ್ನ ಪಟ್ಟರು ಆ ಯುವಕ ಏಳುವದೇ ಇಲ್ಲ. ಪಾಪ ಆ ವ್ಯಕ್ತಿಗೆ ಇದು ಫ್ರ್ಯಾಂಕ್ ಅಂತ ಗೊತ್ತೇ ಇರಲಿಲ್ಲ ಆತ ಕೆಲ ಸೆಕೆಂಡ್ ಗಳ ವರೆಗೆ ಬೇಶುದ್ದ ಅವಸ್ಥೆಯಲ್ಲಿ ಬೀಳುತ್ತಾನೆ.

ವೀಡಿಯೋ ನೋಡಿ.

 

View this post on Instagram

 

A post shared by JATTS LAND 🏝 (@jatts.land)

ಈ ಫ್ರ್ಯಾಂಕ್ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ jatt._.landd ಎಂಬ ಹೆಸರಿನ ಖಾತೆಯ ಮೂಲಕ ಶೇರ್ ಮಾಡಲಾಗಿದೆ. ಒಂದೇ ದಿವಸದ ಹಿಂದೆ ಅಪ್ಲೋಡ್ ಮಾಡಿರುವ ಈ ವೀಡಿಯೋ ಇದುವರೆಗೆ ಐದೂವರೆ ಲಕ್ಷಕ್ಕಿಂತಲೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ನೆಟ್ಟಿಗರಿಗೆ ಈ ಫ್ರ್ಯಾಂಕ್ ವೀಡಿಯೋ ತುಂಬಾ ಇಷ್ಟ ವಾಗುತ್ತಿದೆ.