ಖುಷಿಯಲ್ಲಿದ್ದ ಪುಟ್ಟ ಮಗು ಕ್ಷಣದಲ್ಲಿ ಸ್ಟಾಚ್ಯು! ಅದು ಕೊಟ್ಟ ಸಖತ್ ರಿಯಾಕ್ಷನ್ ನೋಡಿ ಈ ಫುಲ್ ಫನ್ನಿ ವಿಡಿಯೋದಲ್ಲಿ…

ಮುಗ್ಧ ಮಕ್ಕಳ ವಿಡಿಯೋಗಳು ಯಾರನ್ನೇ ಆಗಲಿ ಮಂತ್ರಮುಗ್ದಮಾಡುತ್ತವೆ. ಈ ವಿಡಿಯೋಗಳಲ್ಲಿ ಮಕ್ಕಳ ನೈಸರ್ಗಿಕ ಮುಗ್ಧತೆ ವಿಡಿಯೋ ನೋಡುಗರನ್ನು ಕ್ಷಣದಲ್ಲಿ ಮೋಹಗೊಳಿಸುತ್ತದೆ. ಮಕ್ಕಳ ಆಟ ಚೆಂದ, ಮಕ್ಕಳ ನೋಟ ಚೆಂದ ಪುಟಾಣಿ ಮಕ್ಕಳು ಮನೆಯಲ್ಲಿ ಇದ್ದರೆ ಅಲ್ಲಿ ಬೇಸರ ಅನ್ನೋದೆ ಇರಲ್ಲ. ಹೀಗೆಲ್ಲಾ ಹೇಳೋ ನಾವು ಅನೇಕ ಸಂದರ್ಭಗಳಲ್ಲಿ ಈ ಮಕ್ಕಳು ನೀಡೋ ಎಕ್ಸ್‌ಪ್ರೆಷನ್ ಗಳನ್ನು ನೋಡಿರೋದೇ ಇಲ್ಲ. ಆದರೆ ಕೆಲವರು ಹಾಗಲ್ಲ ತಮ್ಮ ಮಕ್ಕಳಿಗೆ ತಾವು ಮಕ್ಕಳಾಗಿದ್ದಾಗ ಏನೆಲ್ಲಾ ಆಟ ಆಡಿದ್ರು, ಹೇಗೆಲ್ಲಾ ತುಂಟಾಟ ಮಾಡಿದ್ರು ಅನ್ನೋದನ್ನು ತೋರಿಸೋಕೆ, ಆ ಮಧುರವಾದ ಸ್ಮರಣೀಯ ಕ್ಷಣಗಳನ್ನು ಫೋಟೋಗಳಲ್ಲಿ, ವೀಡಿಯೋಗಳಲ್ಲಿ ತಮ್ಮ ಮಕ್ಕಳ ಮುದ್ದು ಮುದ್ದಾದ ಆಟಗಳನ್ನು, ಹಾಡುಗಳನ್ನು, ತುಂಟಾಟಗಳನ್ನು ಎಲ್ಲವನ್ನೂ ಕೂಡಾ ಸಂಗ್ರಹಿಸಿ ಇಡ್ತಾರೆ. ಇನ್ನೂ ಕೆಲವರು ತಮ್ಮ ಮಕ್ಕಳ ಈ ಮುದ್ದಾದ ಎಕ್ಸ್‌ಪ್ರೆಷನ್ ಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ತಮ್ಮ ಸಂತೋಷವನ್ನು ಎಲ್ಲರಿಗೂ ಹಂಚೋದು ಕೂಡಾ ಉಂಟು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಇದೇ ರೀತಿಯ ಸುಂದರ ವಿಡಿಯೋ ಒಂದು ಎಲ್ಲರಿಗೂ ಸಮ್ಮೋಹನಗೊಳಿಸುತ್ತಿದೆ ಎಂದರೆ ತಪ್ಪಾಗಲಾರದು.

ವಿಡಿಯೋದಲ್ಲಿ ಕಂಡು ಬರುವ ಪ್ರಕಾರ, ತಾಯಿ ತನ್ನ ಸುಮಾರು ಒಂದು ವರ್ಷದ ಮಗುವನ್ನು ಎತ್ತರವಾದ ಬಿಲ್ಡಿಂಗ್ ನ ಪ್ಯಾಸೇಜ್ ನಲ್ಲಿ ನಡೆಸುತ್ತಾ ತೆಗೆದು ಹೊರಟಿದ್ದಾಳೆ. ಈ ಸಂದರ್ಭದಲ್ಲಿ ಪ್ಯಾಸೇಜಿನ ಒಂದು ಭಾಗದಲ್ಲಿ ಟೈಲ್ಸ್ ಬದಲಾಗಿ ಕೆಳಗಿನ ವಿಹಂಗಮ ದೃಶ್ಯ ಕಾಣುವ ಸಲುವಾಗಿ ಟ್ರಾನ್ಸ್ಪರೆಂಟ್ ಗ್ಲಾಸ್ ಹಾಕಿದ್ದಾರೆ. ಅಲ್ಲಿಂದ ತೀರ ಕೆಳಗಿನ ಅದ್ಭುತವಾದ ಅಷ್ಟೇ ಭಯ ಹುಟ್ಟುವ ದೃಶ್ಯ ಕಂಡುಬರುತ್ತದೆ. ತಾಯಿ ತನ್ನ ಮಗುವಿಗೆ ಅದರ ಮೇಲೆ ನಡೆಸುತ್ತಾ ಕರೆದುಕೊಂಡು ಹೋಗುತ್ತಲೇ ಮಗು ಕೆಳಗೆ ನೋಡಿದ್ದೇ ತಕ್ಷಣ ಸ್ವಲ್ಪವೂ ಅಲುಗಾಡದೆ ಭಯಪಟ್ಟು ತಾನೆಲ್ಲಿ ಕೆಳಗೆ ಬೀಳುತ್ತೇನೋ ಎಂಬಂತೆ ಸ್ಟ್ಯಾಚು ರೀತಿಯಲ್ಲಿ ಹಾಗೆಯೇ ಕೆಲವು ಕ್ಷಣಗಳ ವರೆಗೆ ತುಂಬಾ ಸ್ತಬ್ಧವಾಗಿ ನಿಂತುಬಿಡುತ್ತದೆ. ಈ ದೃಶ್ಯ ನೋಡಲು ತುಂಬಾ ಫನ್ನಿಯಾಗಿದೆ.

ನೋಡಿ ಈ ವಿಡಿಯೋ…

 

View this post on Instagram

 

A post shared by Khal Kevinn (@m.u.k.i.m.a)

ಮುದ್ದು ಮಗುವಿನ ಈ ಕ್ಯೂಟ್ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ m.u.k.i.m.a ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದೆ. ಪ್ರಸ್ತುತ ಈ ಫನ್ನಿ ವಿಡಿಯೋ ಇಲ್ಲಿಯವರೆಗೆ 5.9 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ. ಜೊತೆಗೆ 3 ಲಕ್ಷ 7 ಸಾವಿರ ಲಕ್ಷಗಳನ್ನು ಹೊಂದಿದೆ.