Articles

Video; ಓಣಿಯ ಮುದ್ದು ಹುಡುಗಿಯರ ಡ್ಯಾನ್ಸ್ ಮುಂದೆ ದೊಡ್ಡ ದೊಡ್ಡ ಡಾನ್ಸರ್ ಗಳು ಫೇಲ್! ನಟಿಯರು ಮಾಡಿದರು ಪ್ರಶಂಸೆ…

ಟ್ಯಾಲೆಂಟ್ ಇದನ್ನು ಹಣದಿಂದ ಖರೀದಿಸಲು ಸಾಧ್ಯವಿಲ್ಲ. ಅದು ಸತತವಾದ ಪ್ರಯತ್ನದಿಂದ ಬರುವಂಥ ವಿದ್ಯೆ. ಕೆಲವರಿಗೆ ಇದು ಹುಟ್ಟಿನಿಂದಲೇ ಬಂದರೆ, ಇನ್ನೂ ಕೆಲವರು ಯಾವುದೇ ತರಬೇತಿಯನ್ನು ಪಡೆಯದೆ ಸತತ ಪ್ರಯತ್ನದಿಂದ ಸಾದ್ಯ ಮಾಡಿಕೊಂಡಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಮುದ್ದು ಹುಡುಗಿಯರ ಡಾನ್ಸ್ ಎಲ್ಲರ ನಿದ್ದೆಗೆಡಿಸಿದೆ ಎಂದರೂ ತಪ್ಪಲ್ಲ. ಜೋಪಡಿಯಲ್ಲಿ ವಾಸಿಸುವ ಈ ಮುದ್ದು ಮಕ್ಕಳಿಗೆ ಒಂದು ಹೊತ್ತಿನ ಊಟ ಸಿಗುವುದು ಸಹ ಒಮ್ಮೊಮ್ಮೆ ಕಷ್ಟವಾಗುತ್ತದೆ. ಆದರೆ ಇವರ ಡಾನ್ಸ್ ನೋಡಿದರೆ ದೊಡ್ಡ ದೊಡ್ಡ ಕೊರಿಯೋಗ್ರಾಫರ್ ಗಳು ಸಹ ಇವರ ಮುಂದೆ ಫೇಲ್ ಆಗುತ್ತಾರೆ.

ಗಲ್ಲಿ ಗರ್ಲ್ಸ್ ಹೆಸರಿನ ಇನ್ಸ್ಟಾಗ್ರಾಮ್ ಪ್ರೊಫೈಲ್ ನಿಂದ ಅನೇಕ ವಿಡಿಯೋಗಳನ್ನು ಶೇರ್ ಮಾಡಲಾಗಿದೆ. ವಿಡಿಯೋದಲ್ಲಿ ಕಂಡುಬರುತ್ತಿರುವ ಈ ಮುದ್ದು ಹುಡುಗಿಯರು ತಮ್ಮ ಗುಡಿಸಲಿನಂತಹ ಮನೆಗಳ ಮುಂದೆ ನಿಂತು ಡಾನ್ಸ್ ಮಾಡುತ್ತಿದ್ದಾರೆ. ತಮ್ಮ ಪ್ರೊಫೈಲ್ನಲ್ಲಿ ಡಾನ್ಸರ್, ಗಲ್ಲಿ ಗರ್ಲ್ಸ್ ಗ್ರೂಪ್, ಕುಣಿಯುವುದೇ ನಮ್ಮ ಜಗತ್ತಾಗಿದೆ, ಎಂದು ಬರೆದಿದ್ದಾರೆ. ನಮಗೆ ಸಾಕಷ್ಟು ಸಪೋರ್ಟ್ ಮಾಡಿ. ಇವರ ಯುಟ್ಯೂಬ್ ಚಾನೆಲ್ ಸಹ ಇದೆ. ಈ ಮುದ್ದು ಹುಡುಗಿಯರು ಪ್ರತಿಯೊಂದು ಡಾನ್ಸ್ ನಲ್ಲಿ ತಮ್ಮ ಫುಲ್ ಎನರ್ಜಿಯಿಂದ ಹೆಜ್ಜೆ ಹಾಕುತ್ತಾರೆ.

ಈ ಮಕ್ಕಳು ತಮ್ಮ ಡಾನ್ಸ್ ನಿಂದಾಗಿ ಸೋಶಿಯಲ್ ಮೀಡಿಯಾದ ಸಹಾಯದಿಂದ ತುಂಬಾ ಫೇಮಸ್ ಆಗಿ ಬಿಟ್ಟಿದ್ದಾರೆ. ಇದೇ ಕಾರಣದಿಂದ ಡಾನ್ಸ್ ಇಂಡಿಯಾ ಡಾನ್ಸ್ ಟಿವಿ ಸೀರಿಯಲ್ ನಲ್ಲಿಯೂ ಭಾಗವಹಿಸಿದ್ದಾರೆ. ಮಕ್ಕಳಲ್ಲಿರುವ ಡಾನ್ಸಿಂಗ್ ಸ್ಕಿಲ್ ನೋಡಿ ಜಡ್ಜ್ ಗಳು ಆಶ್ಚರ್ಯ ವ್ಯಕ್ತ ಮಾಡಿದ್ದಾರೆ. ಸ್ಟಾರ್ ನಟಿ ನೋರಾ ಫತೆಹಿ ಮತ್ತು ರಿಷಿ ಕಪೂರ್ ಪತ್ನಿ ಹಾಗೂ ರಣವೀರ್ ಕಪೂರ್ ತಾಯಿ ನೀತು ಸಿಂಗ್ ಈ ಮಕ್ಕಳ ಅದ್ಭುತ ಡಾನ್ಸ್ ನೋಡಿ ಪ್ರಶಂಸೆಯ ಮಳೆಯನ್ನೇ ಸುರಿಸಿದ್ದಾರೆ.

ವಿಡಿಯೋ ನೋಡಿ

 

View this post on Instagram

 

A post shared by Gully Girls (@gullygirls_official)

Leave a Comment

Your email address will not be published. Required fields are marked *