ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡುವಾಗಲೇ ಹೋಯಿತು ಕರೆಂಟ್! ಯುವಕನಿಂದಾಯಿತು ದೊಡ್ಡ ಅನಾಹುತ…

ಬೀಜಿಂಗ್ :- ಗರ್ಲ್ ಫ್ರೆಂಡ್ ಗೆ ಫಿಲಂ ಸ್ಟೈಲ್ ನಲ್ಲಿ ಪ್ರಪೋಸ್ ಮಾಡಲು ಹೋಗಿದ್ದು ಯುವಕನಿಗೆ ಬಿತ್ತು ತುಂಬಾ ದುಬಾರಿ. ಕೊನೆಯ ಕ್ಷಣದಲ್ಲಿ ಕರೆಂಟ್ ಹೋದ ಕಾರಣ ಯುವಕನಿಗಾಯಿತು ಫಜೀತಿ.

ಕೈಯಲ್ಲಿ ಹೂಗಳ ಗುಚ್ಛ ತೆಗೆದುಕೊಂಡು ಯುವಕನೊಬ್ಬ ಮಂಡಿಯೂರಿ ಗರ್ಲ್ ಫ್ರೆಂಡ್ ಗೆ ಪ್ರಪೋಸ್ ಮಾಡುವ ತಯಾರಿಯಲ್ಲಿದ್ದನು. ಸರಿಯಾಗಿ ಅದೇ ಸಮಯಕ್ಕೆ ಕರೆಂಟ್ ಕೈ ಕೊಟ್ಟ ಕಾರಣ ಕತ್ತಲಲ್ಲಿ ಬೇರೆಯೇ ಹುಡುಗಿಗೆ ಪ್ರಪೋಸ್ ಮಾಡಿದ್ದಾನೆ. ವಾಪಸ್ ಕರೆಂಟ್ ಬರುತ್ತಲೇ ತಾನೇ ಪ್ರಪೋಸ್ ಮಾಡಿದ ಮತ್ತು ತನ್ನ ಮುಂದೆಯೇ ನಿಂತ ಬೇರೆಯೇ ಹುಡುಗಿಯನ್ನು ನೋಡಿ ಯುವಕನಿಗೆ ಶಾಕ್ ಆಗಿದೆ.

ಪ್ರಪೋಸ್ ಮಾಡುವ ಸಲುವಾಗಿ ಯುವಕನು ವಿಶೇಷ ತಯಾರಿ ಮಾಡಿದ್ದನು.

‘ದ ಮಿರರ್’ ನೀಡಿದ ರಿಪೋರ್ಟ್ ಪ್ರಕಾರ ಪ್ರಸ್ತುತ ಘಟನೆ ನವೆಂಬರ್ 14 ರಂದು ಚೀನಾದ ಜಿಯಾಂಗ್ ಜು ಪ್ರಾಂತದಲ್ಲಿಯ ಲಿಯಾನಿಯುಗಾಂಗ್ ಪಟ್ಟಣದಲ್ಲಿ ನಡೆದಿದೆ. ಅದರ ವಿಡಿಯೋ ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಯೂನಿವರ್ಸಿಟಿಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಯು ತನ್ನ ಗೆಳತಿಗೆ ಪ್ರೊಪೋಸ್ ಮಾಡುವ ಸಲುವಾಗಿ ಒಂದು ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿದ್ದನು. ನನ್ನ ಪ್ರೀತಿಯ ಗೆಳತಿಯ ಮುಂದೆ ಆತನಿಗೆ ಮಂಡಿಯೂರಿ ತನ್ನ ಪ್ರೀತಿಯನ್ನು ವ್ಯಕ್ತ ಮಾಡುವದಿತ್ತು. ಇನ್ನೇನು ಗೆಳತಿಯ ಮುಂದೆ ತನ್ನ ಪ್ರೀತಿಯನ್ನು ವ್ಯಕ್ತ ಮಾಡಬೇಕೆನ್ನುವಷ್ಟರಲ್ಲಿಯೇ ಆಕಸ್ಮಿಕವಾಗಿ ಕರೆಂಟ್ ಹೋಯಿತು.

ಆಗ ಆತ ಕತ್ತಲಲ್ಲಿ ಬೇರೆ ಹುಡುಗಿಯ ಕಡೆಗೆ ಹೋಗಿ ಪ್ರೊಪೋಸ್ ಮಾಡಿದ್ದಾನೆ. ಕರೆಂಟ್ ಬಂದಮೇಲೆ ನಡೆದ ಘಟನೆಯನ್ನು ನೆನೆದು ಶಾಕ್ ಗೊಂಡಿದ್ದಾನೆ. ತಕ್ಷಣ ಎದ್ದು ತನ್ನಂತಾನೆ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಕಾರಣ ತನ್ನ ಮುಂದಿನ ದೃಶ್ಯವು ಸಂಪೂರ್ಣವಾಗಿ ಆತನ ಮನಸ್ಸಿನ ವಿರುದ್ಧವಾಗಿರುತ್ತದೆ.

ಆಕೆಯ ಬದಿಗೆ ಗರ್ಲ್ ಫ್ರೆಂಡ್ ಸಹ ನಿಂತು ನಗುತ್ತಿದ್ದಳು. ಈ ತಪ್ಪು ಘಟನೆ ನಡೆದ ನಂತರವೂ ಯುವಕ ತನ್ನ ಗೆಳತಿಗೆ ಪ್ರೀತಿಗಾಗಿ ಪ್ರಪೋಸ್ ಮಾಡುತ್ತಾನೆ. ಮತ್ತು ಗೆಳತಿಯ ಗ್ರೀನ್ ಸಿಗ್ನಲ್ ಸಹ ಯುವಕನಿಗೆ ಸಿಗುತ್ತದೆ. ಸದ್ಯ ಈ ಸಂಪೂರ್ಣ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಯಾವ ಸಮಯದಲ್ಲಿ ಯುವಕ ತಪ್ಪು ಮಾಡುತ್ತಿದ್ದನು ಅದೇ ಸಮಯದಲ್ಲಿ ಆತನ ಗೆಳತಿ ಇದನ್ನು ನೋಡಿ ನಿಂತು ನಗುತ್ತಿದ್ದಳು. ಕರೆಂಟ್ ಬಂದ ನಂತರ ಯುವಕ ಪ್ರೊಪೋಸ್ ಮಾಡಲಿಚ್ಛಿಸುವ ಗೆಳತಿಯು ತನ್ನ ಗೆಳತಿಯ ಜೊತೆಗೆ ಜೋರು ಜೋರಾಗಿ ನಗುತ್ತಿದ್ದಳು.