ಬಾಲಿವುಡ್ ಅಣ್ಣನೆಂದೇ ಪ್ರಖ್ಯಾತರಾದ ಸುನಿಲ್ ಶೆಟ್ಟಿ ಅವರ ಮಗಳು ಹಾಗೂ ನಟಿ ಅಥಿಯಾ ಶೆಟ್ಟಿ ತುಂಬಾ ದಿನಗಳಿಂದ ಕ್ರಿಕೆಟರ್ K L ರಾಹುಲ್ ಅವರಿಗೆ ಡೇಟ್ ಮಾಡುತ್ತಿದ್ದಾರೆ. ಆದರೆ ಇಬ್ಬರೂ ಇಲ್ಲಿಯವರೆಗೆ ಎಂದಿಗೂ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲ. ಈಗ ಮಾತ್ರ ಒಪ್ಪಿಕೊಳ್ಳುವ ಸುಳಿವು ಸ್ವಲ್ಪ ಸ್ವಲ್ಪ ಕಂಡುಬರುತ್ತಿದೆ.
ಕಳೆದ ಸೋಮವಾರ ಕೆಎಲ್ ರಾಹುಲ್ ಅವರು ಮೂವತ್ತನೆಯ ಹುಟ್ಟುಹಬ್ಬ ಆಚರಿಸಲಾಯಿತು. ರಾಹುಲ್ ಅವರ ಹುಟ್ಟು ಹಬ್ಬದ ನಿಮಿತ್ತ ವಾಗಿ ಅವರ ಗರ್ಲ್ ಫ್ರೆಂಡ್ ಅಥಿಯಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವಿಶೇಷವಾದ ಪೋಸ್ಟ್ ಒಂದನ್ನು ಶೇರ್ ಮಾಡಿ ರಾಹುಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ನೀಡಿದ್ದರು. ಅಥಿಯಾ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಿಂದ 3 ಬ್ಲ್ಯಾಕ್ ಅಂಡ್ ವೈಟ್ ಫೋಟೋಗಳನ್ನು ಶೇರ್ ಮಾಡಿದ್ದರು.
ಮೊದಲ ಫೋಟೋದಲ್ಲಿ ರಾಹುಲ್ ಅವರಿಗೆ ಅಥಿಯಾ ಚನ್ನಾಗಿ ಅಪ್ಪಿಕೊಂಡಿರುವುದು ಕಂಡುಬರುತ್ತದೆ. ಎರಡನೇ ಫೋಟೋದಲ್ಲಿ ಅಥಿಯಾ ರಾಹುಲ್ ಅವರ ಕೈಹಿಡಿದು ಕಾಡಿನಲ್ಲಿ ಹೋಗುತ್ತಿರುವ ದೃಶ್ಯ ಕಂಡುಬರುತ್ತಿದೆ. ಈ ಫೋಟೋವನ್ನು ಶೇರ್ ಮಾಡುತ್ತಾ ಅಥಿಯಾ ಅವರು ” ನಿನ್ನ ಜೊತೆಗೆ ಎಲ್ಲಿ ಬೇಕಾದರೂ… ” ಹುಟ್ಟು ಹಬ್ಬದ ಶುಭಾಶಯಗಳು’ ಎಂದು ಬರೆದಿದ್ದಾರೆ.
View this post on Instagram
ಅಥಿಯಾ ಅವರು ಮಾಡಿದ ಈ ಪೋಸ್ಟ್ ಗೆ ರಾಹುಲ್ ಅವರು ‘ಲವ್ ಯು’ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಅವರು ನೀಡಿದ ಈ ಕಮೆಂಟ್ ನ ಚರ್ಚೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆದಿದೆ. ರಾಹುಲ್ ಅವರು ತಮ್ಮ ಹುಟ್ಟು ಹಬ್ಬದ ನಿಮಿತ್ತವಾಗಿ ಅಥಿಯಾ ಜೊತೆಗಿನ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಈ ಫೋಟೋಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿವೆ.
